February 17, 2007

ಕಾಂತ, ಕಾಂತೆ

ಈ ವಾರ ಎಲ್ಲಕಡೆನೂ ಪ್ರೇಮಜ್ವರ. ಹಾಗಾಗಿ ಇವತ್ತಿನ ಶಬ್ದ 'ಕಾಂತ, ಕಾಂತೆ':-))
ಕಾಂತ = ಕಾಣ್ತಾನೆ.
ಕಾಂತೆ = ಕಾಣ್ತೇನೆ.

ಕಂದಾಪ್ರ ಕನ್ನಡಕ್ಕೆ ಅದರದ್ದೆ ಆದ ರಚನೆ ಇದೆ. ಇವುಗಳನ್ನ ನೋಡಿ:-
ಕಾಂತ = ಕಾಣ್ತಾನೆ, ಕೇಂತ = ಕೇಳ್ತಾನೆ, ಹೋತ = ಹೋಗ್ತಾನೆ, ಬತ್ತ = ಬರ್ತಾನೆ,
ಕಾಂತೆ = ಕಾಣ್ತೇನೆ, ಕೇಂತೆ = ಕೇಳ್ತೇನೆ, ಹೋತೆ = ಹೋಗ್ತೇನೆ, ಬತ್ತೆ = ಬರ್ತೇನೆ,
ಕಾಂತ್ರ್ಯ = ಕಾಣ್ತೀರ, ಕೇಂತ್ರ್ಯ = ಕೇಳ್ತೀರ, ಹೋತ್ರ್ಯಾ = ಹೋಗ್ತೀರ, ಬತ್ತ್ರ್ಯಾ = ಬರ್ತೀರಾ,
ಕಾಣಿ = ನೋಡಿ, ಕೇಣಿ = ಕೇಳಿ, ಹೋಯಿನಿ = ಹೋಗಿ, ಬನ್ನಿ = ಬನ್ನಿ:-)
ಕಾಂಬ್ರ್ಯಲೆ = ಕಾಣುವಿರಲ್ಲ, ಕೇಂಬ್ರ್ಯಲೆ = ಕೇಳುವಿರಲ್ಲ, ಹೋಪ್ರ್ಯಲೆ = ಹೋಗುವಿರಲ್ಲ, ಬಪ್ಪ್ರ್ಯಲೆ = ಬರುವಿರಲ್ಲ,
ಕಂಡ = ನೋಡಿದ, ಕೇಂಡ = ಕೇಳಿದ, ಹೋದ = ಹೋದ, ಬಂದ = ಬಂದ.

ನಮ್ಮ ಚಲನಚಿತ್ರ ಸಾಹಿತ್ಯದಲ್ಲಿ ಹೆಚ್ಚಾಗಿ ಉಪಯೋಗಿಸಲ್ಪಡುವುದು:-
ಕಾಂತ - ಕಾಂತೆ,
ಇನಿಯ - ಇನಿಯೆ(?),
ನಲ್ಲ - ನಲ್ಲೆ,
ಪ್ರಿಯತಮ - ಪ್ರಿಯತಮೆ,
ಪ್ರಿಯಕರ - ಪ್ರಿಯಕ(ರೆ,ರಿ?),
ಪ್ರಿಯ - ಪ್ರಿಯೆ,
ಮತ್ತೆ ನಮ್ಮ ಯಕ್ಷಗಾನದಲ್ಲಿ - ರಮಣ, ವಲ್ಲಭ:-))

ಭಾಷೆ ಸಂಸ್ಕೃತಿಯ ಪ್ರತೀಕ ಅಂತಾರೆ. ಕೆಲವೊಂದು ಪದ ಪ್ರಯೋಗಗಳು ನಮ್ಮ ನಂಬಿಕೆಯಿಂದ ತುಂಬ ಪ್ರಭಾವಿತವಾಗಿವೆ.
ಮನೆಯಿಂದ ಹೋಗುವಾಗ - ಬತ್ತೆ - ಅನ್ತೇವೆ. 'ಹೋತೆ' ಅನ್ನೋಹಾಗಿಲ್ಲ:-) ನೆಂಟರ ಮನೆಯಾದ್ರೆ -'ಬತ್ತೆ, ನೀವೆಲ್ಲ ಕೂಕಣಿ (ಕೂತ್ಕೊಳ್ಳಿ)':-))
ಅದೇ ಆಸ್ಪತ್ರೆಗೆ ರೋಗಿಯನ್ನ ನೋಡ್ಲಿಕ್ಕೆ ಹೋಗಿದ್ರೆ - 'ಹೋತೆ'. 'ಬತ್ತೆ' ಅನ್ನೊ ಹಾಗಿಲ್ಲ. ಡಾಕ್ಟರ್ ಬಳಿನೂ 'ಹೋತೆ':-))ನಮ್ಮ ಮನೇಲಿ ರಾತ್ರಿ ದೀಪ (ಲೈಟು, ಕರೆಂಟು) ಆರಿಸ್ಬೇಕಾದ್ರೆ -ದೀಪ ದೊಡ್ಡದು ಮಾಡ್ - ಅಂತಾರೆ. ದೀಪ ಆರಿಸು ಅನ್ನೊ ಹಾಗಿಲ್ಲ:-))

ಆಯ್ತು. ಇವತ್ತಿಗ್ ಮಸ್ತ್ ಆಯ್ತ್. ನಾನ್ ಬತ್ತೆ. ನೀವೆಲ್ಲ ಕೂಕಣಿ.
Reborn, ನಾನ್ ಹೋತೆ:-))

ಇವತ್ತಿನ ಸವಾಲು -ಇದರ ಅರ್ಥ ಏನು? - 'ಎಣ್ಣು'

6 comments:

Sushrutha Dodderi said...

ಬಯಲು ಸೀಮೆ ಬದೀಗಾದ್ರೆ 'ಎಣ್ಣು' ಅಂದ್ರೆ 'ಹೆಣ್ಣು' ಇರ್ಬೇಕು ಅಂದ್ಕೋತಿದ್ದೆ (ಯಾಕೇಂದ್ರೆ ಅವ್ರಿಗೆ 'ಅ'ಕಾರ 'ಹ'ಕಾರ ಸಿಕ್ಕಾಪಟೆ ಕನ್‍ಫ್ಯೂಶನ್ನು); ಆದ್ರೆ ಮಂಗ್ಳೂರು ಕಡಿಗೆ... ಏನೋ ಸ್ವಾಮಿ ಗೊತ್ತಿಲ್ಲ :)

sritri said...

ನಿಮ್ಮ ಸವಾಲಿಗೆ - ನನ್ನ ಜವಾಬ್ (ಗೆಸ್ ಮಾಡಿದ್ದು) - 'ಎಣ್ಣು' - ಎಷ್ಟು??

Shiv said...

ಭಾಗವತರೇ,

ಅದು ಹೀಗೀರಬಹುದೇ..

ಎಷ್ಟು + ಹಣ್ಣು applying ಕುಂದಾಪುರ ಕನ್ನಡ rules ಎಣ್ಣು ಆಗಿರಬಹುದೇ ಅಂತಾ :)

Anveshi said...

ಪಟ್ಟಾಂಗಿಗಳೇ,

ಪ್ರೇಮ ಜ್ವರದಲ್ಲಿ ನೀವು ಬರೆದಿದ್ದು ಸರಿ.
ಕಾಂತ ಆಕೆಯ ಹತ್ತಿರ ಬಂದು ಕಾಣ್ತಾನೆ, ಕೇಂತ, ಹೋಗ್ತಾನೆ,, ಮತ್ತೊಬ್ಬ ಬತ್ತ :(

ಎಣ್ಣು ಎಂಡ ಎಲ್ಲಕ್ಕೂ ಸಂಬಂಧವಿದ್ಯಾ????/

Jagali bhaagavata said...

ಶ್ರಿತ್ರಿ,
ಗುರುದಕ್ಷಿಣೆ ಕೊಡ್ಕಾತ್ತ್ ಅಂತ ನೀವು ಎಷ್ಟು ಎಣ್ಣಿದ್ರಿ?

ಶಿವು,
ಹಣ್ಣಿಗೋಸ್ಕರ ಯಾರೂ ಎಣ್ಣುವುದಿಲ್ಲ. ಹೆಣ್ಣಿಗೋಸ್ಕರ ಎಣ್ಣಿಯಾರು:-)

ಸುಶ್ರುತ ಮತ್ತು ಅನ್ವೇಷಿಗಳೇ,
ಎಣ್ಣು, ಎಂಡ, ಹೆಣ್ಣು ಎಲ್ಲದಕ್ಕೂ ಸಂಬಂಧ ಇದೆ.
'Wine and women can melt mountains and mountains of money' ಅಂತ ಕೇಳಿದೀರ?

Madhu said...

ಇದು ಹುಡುಕು ನೋಡಿ
http://www.yanthram.com/kn/