February 24, 2007

ಮಿಣ್ಣಗೆ

'ಮಿಣ್ಣಗೆ' = ಸದ್ದಿಲ್ಲದೆ, ಯಾರಿಗೂ ಗೊತ್ತಾಗದ ಹಾಗೆ ಇರೋದು, ಯಾರಿಗೂ ಗೊತ್ತಾಗದ ಹಾಗೆ ಎನಾದ್ರೂ ಮಾಡೋದು, keeping low profile ಅಂತಾನೂ ಅನ್ಬಹುದು.

ಗುಬ್ಬಚ್ಚಿ ಮಿಣ್ಣಗೆ ಬಂದ್ ಹಾಲ್ ಕುಡ್ದದ್ದನ್ನ್ ಬೆಕ್ಕ್ ಕಂಡಿತ್ತ್:-)
ತುಳಸಿಯಮ್ಮ ಮಿಣ್ಣಗಿದ್ರಪ್ಪ. ಗುರುದಕ್ಷಿಣೆ ಕೊಡ್ಕಾತ್ತ್ ಅಂದ್ಕಂಡೇನೊ:-)
"ಮಾಣಿಗೆ ಜೋರ್ (ಬಯ್ಯೋದು) ಮಾಡಿದ್ಯ? ನಿನ್ನೆಯಿಂದ ಮಿಣ್ಣಗಿತ್ತಪ್ಪ"
'ಮಿಣ್ಣ'ಗಿಪ್ಪುದು ಅಂದ್ರೆ ಶಬ್ದ ಇಲ್ದೆ ಅವರಷ್ಟಕ್ಕ್ ಅವರಿಪ್ಪುದು. 'ಮಿಣ್ಣ'ಗಿದ್ದೂ ಮಿನುಗುದು ಅಸತ್ಯಿಗಳಿಗೆ ಮಾತ್ರ ಸಾಧ್ಯ:-)

ಈ ಶಬ್ದದ ಮೂಲ ನನಗೆ ಗೊತ್ತಿಲ್ಲ. ಬಲ್ಲವರು ತಿಳಿಸುವಂತವರಾಗಿ:-)
ಎನ್. ಎಸ್. ಲಕ್ಷ್ಮಿನಾರಾಯಣ ಭಟ್ಟರು ತಮ್ಮ ಕವನವೊಂದರಲ್ಲಿ (ಮಿಣ್ಣಗಿನ ಧೂರ್ತ) ಇದನ್ನ ಉಪಯೋಗಿಸಿದ್ದಾರೆ.ಕವನದ ಹೆಸರು ನೆನಪಿಲ್ಲ (ವಯಸ್ಸಾಯ್ತು ನೋಡಿ). 'ತರಂಗ' ವಾರಪತ್ರಿಕೆಯಲ್ಲಿ ಪ್ರಕಟಗೊಂಡಿತ್ತದು.

ಇತ್ತೀಚಿನ ಸುದ್ದಿ. 'ಎಣ್ಣು' ಪದವನ್ನು ಸಾಹಿತ್ಯದಲ್ಲಿ ಉಪಯೋಗಿಸಲಾಗಿದೆ. ಮಿತ್ರಾ ವೆಂಕಟ್ರಾಜ್ ತಮ್ಮ 'ಒಂದು ಒಸಗೆ ಒಯ್ಯುವುದಿತ್ತು' ಕಥೆಯಲ್ಲಿ ಉಪಯೋಗಿಸಿದಾರೆ. ದೆಹಲಿಯ 'ಕಥಾ' ಪ್ರಶಸ್ತಿ ವಿಜೇತ ಕಥೆ. ಭಾಗವತ್ರ ಅಚ್ಚುಮೆಚ್ಚಿನ ಕಥೆ ಅದು. ಕಥೆಗಾಗಿ ಇಲ್ಲಿ ಕ್ಲಿಕ್ಕಿಸಿ - http://kanlit.com/modes/home/brh/168/.html
"ಶೇಷಮ್ಮ ತನ್ನ ಕಾಲದ ಗತವೈಭವವನ್ನು, ಮುಖ್ಯವಾಗಿ ತುಂಬಿತುಳುಕುತ್ತಿದ್ದ ಮನೆಯಂದಿಗರನ್ನು, ಚಾವಡಿ ಭರ್ತಿಯಾಗುತ್ತಿದ್ದ ಊಟದ ಪಂಕ್ತಿಯನ್ನು ಎಣ್ಣಿ, ಎಣ್ಣಿ ರೋದಿಸುತ್ತಿದ್ದರೆ ಜಲಜೆಗೂ ಹೌದೆಂಬಂತೆ ಕಾಣಿಸುತ್ತಿತ್ತು."

ಇವತ್ತಿನ ಸವಾಲು
ಇದರ ಅರ್ಥ ಏನು - 'ಅಟ್ರಕಾಣಿ'?

Bonus question:-) - ನಾವು 'ಕಥನ (ಜಾಗತಿಕ ಕನ್ನಡಿಗರ ಕೂಟ)'ದಿಂದ ನಡೆಸಿದ ಕಥಾಸ್ಪರ್ಧೆಯಲ್ಲಿ ವಿಜೇತವಾದ ಎರಡು ಕಥೆಗಳು http://kanlit.com/ ಜಾಲತಾಣದಲ್ಲಿವೆ. ಅವು ಯಾವುವು?

ಸರಿ ಉತ್ತರ ಹೇಳಿದವರಿಗೆ ಕೋಟೇಶ್ವರ ಹಬ್ಬದಲ್ಲಿ ಒಂದು ಸೇರು ಮುಂಡಕ್ಕಿ:-))

13 comments:

Shantala said...

ಸೊಟ್ಟ ನಡಿಗೆ ?

sritri said...

ಕೋಟೇಶ್ವರ ಹಬ್ಬದಲ್ಲಿ ಒಂದು ಸೇರು ಮುಂಡಕ್ಕಿ ನನಗಂತೂ ಸಿಗಲ್ಲ ಅಂತಾಯ್ತು. ನನಗೆ ಅಟ್ರಕಾಣಿ ಅಂದರೆ ಏನೂಂತ ಗೆಸ್ ಮಾಡಕ್ಕೂ ಆಗಲಿಲ್ಲ. ಮುಂಡಕ್ಕಿ ಅಂದ್ರೇನು? ನಾವು ಮಂಡಕ್ಕಿ ಅಂತೀವಲ್ಲಾ ಅದೇ ತಾನೇ?

ಕುಂದಗನ್ನಡದ ಪಾಠ ಹೀಗೆ ಮುಂದುವರೆಸಿ. ಗುರುದಕ್ಷಿಣೆ ಕೊಡೋಣಂತೆ. ಒಂದೇ ಶರತ್ತು. ಏನು ಕೊಟ್ರೂ ತಗೋಬೇಕು. ಬೇಡ ಅನ್ನೋ ಹಾಗಿಲ್ಲ ಅಷ್ಟೆ.

Shantala said...

ಮುಂಡಕ್ಕಿ/ಮಂಡಕ್ಕಿ/ಕಡ್ಲೆಪುರಿ/ಕಳ್ಳೆಪೂರಿ ಎಲ್ಲ ಒಂದೆ ಇರ್ಕ್

reborn said...

u still havent told me if kundapuris can answer ur qestions ! becos that case i ll get mundakki !!! it s been really long i had some mundakki uppkari...yummm

Jagali Bhagavata said...

ಶಾಂತಲ,
ಈ ಸರ್ತಿ ನಿಮಗೆ ಸೊನ್ನೆ ಮಾರ್ಕ್ಸ್:-))

ಶ್ರಿತ್ರಿ,
ಮುಂಡಕ್ಕಿ, ಮಂಡಕ್ಕಿ ಎಲ್ಲ ಒಂದೆ.

ಮಣ್ಣು (I mean land), ಹೊನ್ನು, ಹೆಣ್ಣು - ಈ ಮೂರರಲ್ಲಿ ಏನು ಕೊಟ್ರೂ ಭಾಗವತ್ರಿಗೆ ತಗೋತಾರೆ:-))

Reborn,
OK. answer maaDi. ಆದ್ರೆ ಕೋಟೇಶ್ವರಕ್ಕೆ ಹೋಪು ಬಪ್ಪು ಛಾರ್ಜ್ ಎಲ್ಲ ನಿಮ್ದೆ:-))

Shantala said...

ಮಂಡೆ ಸಮ ಇಲ್ಲ/ಎಡ್ಪೋಂಕ್/ಚೆಲ್ಲು ಚೆಲ್ಲು/ಲೂಸ್/ಪಿರ್ಕಿ ಯಾವ್ದೊ ಒಂದ್ ಅರ್ಥ ಇರೂಕ್ ಸಾಕ್

ಸುಶ್ರುತ ದೊಡ್ಡೇರಿ said...

ಯಂಗೆ ಉತ್ರ ಗೊತಿದು. ಆದ್ರೆ ನೀವು ಮಂಡಕ್ಕಿ ಕೊಡ್ಸೋ ಭರವಸೆ ಇಲ್ಲೆ. ಹಂಗಾಗಿ ಹೇಳದಿಲ್ಲೆ :)

Gubbacchi said...

ಗುಬ್ಬಿ ಬಂದ್ ಹಾಲ್ ಕುಡ್ದಿದ್ರೆ...ಅದನ್ ಕಂಡ್ ಬೆಕ್ ಸುಮ್ನಾಯ್ಕಣತ್ತಾ? ಹೊರ್ದ್ ಮುಕ್ಕ್ ತಿಲ್ಯಾ?
I do remember reading this ಹೊರಗೂ ಮಳೆ ಒಳಗೂ ಮಳೆ, one more might be from Vaidehi.

Jagali Bhagavata said...

ಶಾಂತಲ,
ಸ್ವಲ್ಪ ಹತ್ರ ಬಂದ್ರಿ. ಆದ್ರೂ ಪೂರ ಸರಿಯಾಯ್ಲಿಲ್ಲ.

ಸುಶ್ರುತ,
ಕೊಟ್ಟ ಮಾತಿಗೆ
ತಪ್ಪಿ ನಡೆದರೆ
ಮೆಚ್ಚನಾ ಪರಮಾತ್ಮನು.
ಭಾಗವತ್ರು ಮಾತು ಕೊಟ್ಟ ಮೇಲೆ, ಅದನ್ನ ಹಿಂದೆ ತಗೊಳಲ್ಲ.

ಉತ್ರ ಹೇಳಿ ನೋಡೊಣ:-)

ಗುಬ್ಬಚ್ಚಿ,
ಅರ್ಧಮಾರ್ಕ್ಸ್. ಇನ್ನೊಂದು ಕಥೆ ಯಾವ್ದು?

ಎಂಡ್ಪೋಕ್, ಹೊರ್ದ್ ಮುಕ್ಕೋದು... ತುಂಬ ನಗು ಬಂತು ಓದಿ. ತುಂಬ ದಿನ ಆಗಿತ್ತು ಆ ಶಬ್ದಗಳನ್ನ ಕೇಳಿ:-))

jyothi said...

ಇದೆಂತ ಅಟ್ರಕಾಣಿ ಮರ್ರೆ ನಿಮ್ದು? ಬೋನಸ್ ಪ್ರಶ್ನೆಯಲ್ಲಿ ಮಳೆ ಮಾತ್ರ ಸಿಕ್ಕಿತು, ಇನ್ನೊಂದು ಎಲ್ಲಿ ತಪ್ಪಿಸಿಕೊಂಡಿದೆ? ನಂಗೆ ಸಿಗ್ಲಿಲ್ಲ. ಇದೂ ಕೂಡಾ ಅಟ್ರಕಾಣಿ (mischief) ತಾನೆ?

Shantala said...

ಭಾಗ್ವತ್ರೆ ಇಗಣಿ,

ನೀವೂ ದಾರ ಕಟ್ಟಿ - ಸಚ್ಚಿದಾನಂದ ಹೆಗಡೆ, ಬೆಂಗಳೂರು

ಅರ್ಧ ಸೇರ್ ನಂಗೆ

Jagali Bhagavata said...

ಶಾಂತಲ,
ಅರ್ಧ ಸೇರು ನಿಮಗೆ. ಹಾಗೆ, ಕೋಟೇಶ್ವರಕ್ಕೆ ಹೋಪು ಬಪ್ಪು ಅರ್ಧ ಖರ್ಚ್ ನಿಮ್ದೆ:-))

ಜ್ಯೋತಿ,
ಶಾಂತಮ್ಮ, ಪಾಪಮ್ಮ. ಭಾಗವತ್ರು ಮತ್ತು ಅಟ್ರಕಾಣಿ? ಛೆ, ಛೆ, ಛೆ!!!:-))

Gopi_Hakki said...

ಭಾಗವತರೆ ನೀವು ಇಂಥ ಅಟ್ರಾಕಣಿ ಪ್ರಶ್ನೆ ಕೇಳೂದ? ಒಳ್ಳೆ ಅಟ್ರಾಕಣಿ ಜನಾನಲಿ ನೀವು ! ಈ ಶಬ್ದದ ಅರ್ಥ ಗುತ್ತಿದ್ದು ಆದರೆ ಸಮಾನಾರ್ಥಕವಾದ ಮತ್ತೊಂದು ಶಬ್ದ ಗುತ್ತಿಲ್ಲೆ. ಸುಮಾರಾಗಿ 'ಸರಿ ಇಲ್ಲೆ' ,'ಮಟ್ಟಸವಾಗಿ ಇಲ್ಲೆ' ಹೇಳೂ ಧ್ವನಿ ಇದ್ದು ಆ ಶಬ್ದದಲ್ಲಿ. ಉದಾಹರಣೆಗೆ 'ಒಂದಕ್ಕೆ ಒಂದೂವರೆ ' ಮಾಡಿದರೆ ಅದಕ್ಕೆ ಅಟ್ರಾಕಣಿ ಕೆಲ್ಸ ಹೇಳ್ತ.