February 11, 2007

ಹುಗ್ಸಿಡು, ಅಂಡ್ಕಂಬ್ದು

'ಹುಗ್ಸಿಡು' = ಬಚ್ಚಿಡು,
ಮೂಲ - 'ಹುದುಗಿಸಿಡು'.
ಅಕ್ಕ, ನನ್ನ ಕ್ರಿಕೆಟ್ ಬ್ಯಾಟ್ ಎಲ್ಲ್ 'ಹುಗ್ಸಿಟ್ಟಿದೆ'?
ತುಳಸಿಯಮ್ಮ, ನನ್ನ ಗುರುದಕ್ಷಿಣೆ ಎಲ್ಲ್ 'ಹುಗ್ಸಿಟ್ಟಿರಿ'?

ಗದಾಯುದ್ಧ ಯಕ್ಷಗಾನ ಪ್ರಸಂಗದ ಒಂದು ಪದ್ಯ - (ದುರ್ಯೋಧನ ಸಂಜಯನಿಗೆ ಹೇಳ್ತಾನೆ)
"ಇದೆ ಒಂದು ಸರೋವರವು ಇಲ್ಲಿಗೆ ಸಮೀಪದಲಿ, 'ಹುದುಗಿರುವೆ'ನೈ ನಾನು ಅರಿಗಳ್ ಅರಿಯದಂದದಲಿ"

'ಅಂಡ್ಕಂಬ್ದು' = ಅಡಗಿಕೊಳ್ಳು

ಅನ್ವೇಷಿಗಳೆ, ಪತ್ತೆನೆ ಇಲ್ಲ ಇತ್ತೀಚೆಗೆ. ಎಲ್ಲ್ 'ಅಂಡ್ಕಂಡಿರಿ'?
ಶ್ರೀ, ಬೆಂಗ್ಳೂರಲ್ಲ್ ಕಾವೇರಿ ಗಲಾಟಿ ಆತ್ತ್. ಒಳ್ಳೆ ಜಾಗದಲ್ಲ್ 'ಅಂಡ್ಕಣಿ',

'ಅಂಡ್ಕಂಡ' = ಅಡಗಿಕೊಂಡ
'ಅಂಡ್ಕಂತ' = ಅಡಗಿಕೊಳ್ಳುತ್ತಾನೆ
'ಅಂಡ್ಕಣಿ' = ಅಡಗಿಕೊಳ್ಳಿ
'ಅಂಡ್ಕೊ' = ಅಡಗಿಕೊ

ಇವತ್ತಿನ ಸವಾಲು
ಇದರ ಅರ್ಥ ಏನು? - "ಕುಂದಾಪ್ರ ಕಾಣಿ ರುಚಿ ಕಾಣಿ"

7 comments:

reborn said...

someone from kundapra can only answer this !!! and i can ofcourse ... i ll wait and see for some more time before i do that :)

sritri said...

ಹ್ವಾಯ್, ಜಗಲಿ ಭಾಗವತರೇ, ಆಗಾಗ ಹೀಗೆ ನಮಗೆ ನಿಮ್ಮೂರ ಭಾಷೆ ಕಲಿಸಿಕೊಡಿ. ಗುರುದಕ್ಷಿಣೆ ಸಿಗತ್ತೆ ಅಂತ ಕನಸು ಕಾಣಬೇಡಿ ಅಷ್ಟೆ :)

sritri said...

"ಕುಂದಾಪ್ರ ಕಾಣಿ ರುಚಿ ಕಾಣಿ" ಅಂದರೆ -

"ಸಾಯೋದ್ರಾಗೆ ಒಮ್ಮೆ ನೋಡು ಜೋಗಾದ್ ಗುಂಡಿ" - ಇದೇ ತರ ರುಚಿಯನ್ನು (ಚೆಲುವು,ಸೊಬಗು)ಅಂದರೆ ಏನು ಎಂಬುದನ್ನು ತಿಳಿಯಲು ಕುಂದಾಪುರವನ್ನು ನೋಡಬೇಕು , ನೋಡಿ ತಿಳಿಯಬೇಕು ಎಂದಿರಬಹುದಾ?

ಆನು ಪಾಸೋ ಫೇಲೋ ಬೇಗ ತಿಳ್ಸಿ ಮರ್ರೆ :)

Jagali Bhagavata said...

Reborn and Sritri,
ನನ್ನ blog-ಗೆ ಸ್ವಾಗತ. ತುಂಬ ಖುಶಿಯಾಯ್ತು.

ತುಳಸಿಯಮ್ಮ,
ನೀವು ಡುಮ್ಕಿ ಹೊಡೆದಿದ್ದೀರಿ. ನಿಮಗೆ ಬರಿ ಅರ್ಧ ಮಾರ್ಕ್ಸ್ ಮಾತ್ರ.

ಮತ್ತೆ, 'ಆನು' - ಇದು ಹವ್ಯಗನ್ನಡದ ಪ್ರಯೋಗ. ಕುಂದಗನ್ನಡದಲ್ಲಿ ಇದು - 'ನಾನ್'.

Veg or Non-veg ಅಂತ ಕೇಳಿದ್ರೆ ನನ್ನ ಉತ್ರ - 'ನಾನ್ ವೆಜ್':-)

srinivas said...

ನಾನು ಕುಂದಾಪುರ ನೋಡೇ ಇಲ್ಲ. ಆದರೆ ಓದುತ್ತಿರುವಾಗ ವಸತಿ ಗೃಹದಲ್ಲಿ ನನ್ನ ಸಹಪಾಟಿಯಾಗಿದ್ದ ಗಿರಿಶೇಖರ ಕಲ್ಕೂರ, ಕುಂದಾಪುರದವನು. ಕೂಂದಾಪುರ ಅಂದ್ರೆ ಅವನಿಗೆ ಬಹಳ ಕೋಪ ಬರುತ್ತಿತ್ತು. ಬ್ರಿಟಿಷರು kundapuraವನ್ನು coondaapura ಮಾಡಿದ್ದರಂತೆ.
ನಿಮ್ಮ ಪ್ರಕಾರ ಕುಂದಾಪುರ ಕಾಣದವನು, ರುಚಿ ಕಾಣನು ಎಂಬರ್ಥ ಬರುವುದೇ? ನಾನ್-ವೆಜ್ ಎನ್ನುವಂತಿದ್ದರೆ, ಕೂಂದಾಪುರವನ್ನು ಬಿಡಿಸಿ ನೋಡಿದರೆ ಉತ್ತರ ಸಿಗಬಹುದು.

Jagali Bhagavata said...

ತ.ವಿ.ಶ್ರೀ. ಸರ್,
ಮೊತ್ತಮೊದಲನೆಯದಾಗಿ, ಸುಸ್ವಾಗತ. ತುಂಬ ಖುಶಿ ಕೊಟ್ಟಿತು. ಹೀಗೆಯೆ ಬರ್ತಾ ಇರಿ.

ಆ ವಾಕ್ಯದ ಅರ್ಥವನ್ನು ಇವತ್ತು ನೀಡಿದ್ದೇನೆ:-)

ಅಸತ್ಯ ಅನ್ವೇಷಿ said...

ಹ್ವಾಯ್ ಭಾಗ್ವತ್ರೇ....
ನಾನ್ ಇಲ್ಲಿ ಇದ್ದಿ ಕಾಣಿ!