June 28, 2006

ಕೇಂಬುದು

ಕೇಂಬುದು (kEMbudu) = ಕೇಳುವುದು.

This word takes various forms depending on the usage.
ಕೇಣ್, kEN = ಕೇಳು (singular,)
ಪಾಠ ಸರಿ ಮಾಡಿ 'ಕೇಣ್'

ಕೇಣಿ, kENi = ಕೇಳಿ (plural)
ಪಾಠ ಸರಿ ಮಾಡಿ ಕೇಣಿ.

ಕೇಂತಾ, kEMtaa? = ಕೇಳಿಸಿತಾ?
ನಾನ್ ಹೇಳಿದ್ದ್ ನಿಂಗೆ ಕೇಂತಾ? (did u hear what I said?).

ಕೇಂಡ್, kEMD = ಕೇಳಿ.
ನಾನ್ ಅವನನ್ನ ಕೇಂಡ್ ಹೇಳ್ತೆ. (ನಾನು ಅವನನ್ನ ಕೇಳಿ ಹೇಳ್ತೇನೆ).
ಕೇಂಡ, kEMDa = ಕೇಳಿದ.
ರಾತ್ರಿ ಪೂರ್ತಿ ರಾಮಾಯಣ ಕೇಂಡ್, ಬೆಳಿಗ್ಗೆ ಎದ್ದ್ 'ರಾಮನಿಗೂ ಸೀತೆಗೂ ಎಂತ ಸಂಬಂಧ' ಅಂತ 'ಕೇಂಡ'.

ಕೇಂಡ್ರ್ಯಾ, kEMDryaa? = ಕೇಳಿದಿರಾ?
ಅವ ಎಂತ ಹೇಳ್ದ ಕೇಂಡ್ರ್ಯಾ?

ನಾನ್ ಕೇಂತೆ (ನಾನು ಕೇಳುತ್ತೇನೆ).
ನೀನ್ ಕೇಣ್ (ನೀನು ಕೇಳು).
ಅವ ಕೇಂತ (ಅವ ಕೇಳುತ್ತಾನೆ).

June 25, 2006

ಬಪ್ಪುದು, ಹೋಪುದು

ಬಪ್ಪುದು - bappudu = ಬರುವುದು, coming,
ಹೋಪುದು - hOpudu = ಹೋಗುವುದು, going.

ಭಾರತಕ್ಕೆ 'ಬಪ್ಪುದ್' ಏಗ್ಳಿಕೆ?. ಅಮೇರಿಕಕ್ಕೆ ಹೋಪುದು ಏಗ್ಳಿಕೆ?
ಪಾರ್ಟಿ ಗಡ್ಜಾ (ಗಡದ್ದಾ)? ನಾನೂ ಬಪ್ಪುದಾ?.
ಊರಿಗೆ ಹೋಪುದು ಏಗ್ಳಿಕೆ?

Some variant forms of the above words
ಬತ್ತೆ = ಬರ್ತೇನೆ. ಹೋತೆ = ಹೋಗ್ತೇನೆ.
ನಾನ್ ಬತ್ತೆ. ನಾನ್ ಇವತ್ತ್ ಊರಿಗೆ ಹೋತೆ.

ಬತ್ತ್ಯಾ = ಬರ್ತೀಯಾ? ಹೋತ್ಯಾ = ಹೋಗ್ತೀಯಾ?
ನೀನ್ ಬತ್ತ್ಯಾ ಊರಿಗೆ? ನೀನ್ ಊರಿಗೆ ಹೋತ್ಯಾ?

ಬತ್ತ - ಬರ್ತಾನೆ, ಹೋತ = ಹೋಗ್ತಾನೆ.
ಅವ ಇವತ್ತ್ ಊರಿಗೆ ಬತ್ತ. ಅವ ಇವತ್ತ್ ಬೆಂಗ್ಳೂರಿಗೆ ಹೋತ.

June 21, 2006

ಏಗ್ಳಿಕೆ

ಏಗ್ಳಿಕೆ (EgLike)

ನನ್ನ ಊಹೆಯ ಪ್ರಕಾರ ಇದರ ಮೂಲ - ಏಗಳ್ (EgaL) -ಹಳೆಗನ್ನಡ.

ಏಗ್ಳಿಕೆ = ಯಾವಾಗ, When

ಉದಾಹರಣೆ
ನಿಂಗೆ (ನಿನಗೆ) ರಜೆ ಸಿಕ್ಕುದ್ (ಸಿಗುವುದು) 'ಏಗ್ಳಿಕೆ'?
ಪರೀಕ್ಷೆ ರಿಸಲ್ಟ್ಸ್ 'ಏಗ್ಳಿಕೆ' ಗೊತ್ತಾಪ್ಪುದು (ಗೊತ್ತಾಗುವುದು)?
ಮದಿ (ಮದುವೆ) 'ಏಗ್ಳಿಕೆ'?

June 4, 2006

ಗಡ್ಜು

ಗಡ್ಜು - gaDju.

ಗಡ್ಜು - ಗಡದ್ದು (ನನ್ನ ಊಹೆಯ ಪ್ರಕಾರ ಇದು ಮೂಲರೂಪ)

ಗಡ್ಜು = ವಿಜೃಂಭಣೆ - vijraMbhaNe (grand).

Examples : -
ಮದಿ ಗಡ್ಜಾ? ಊಟ ಗಡ್ಜಾ?
madi (wedding) gaDjaa? ooTa gaDjaa?

ಕುಂದಾಪ್ರ ಕನ್ನಡ

ಕುಂದಗನ್ನಡ ನನ್ನ ಪ್ರಕಾರ ಬಹಳ ವೈವಿಧ್ಯಮಯವೂ, ಶ್ರೀಮಂತವೂ ಆದ ಭಾಷೆ. ಕುಂದಗನ್ನಡದಲ್ಲಿನ ಹಲವಾರು ವಿಶಿಷ್ಟ ಪದಗಳು ನನಗೆ ಯಾವತ್ತೂ ಕುತೂಹಲ ಮೂಡಿಸುತ್ತವೆ.
ಉದಾಹರಣೆಗೆ ಈ ಶಬ್ದಗಳು-ಚಾಂದ್ರಾಣ, ಅಟ್ರಕಾಣಿ, ತದ್ಯಾಪ್ರತ, ಹಕ್ಲಕಥೆ, ಹರ್ಕಟಿ... ಇವುಗಳ ಶಬ್ದನಿಷ್ಪತ್ತಿಯ ಕುರಿತು ಯಾರಿಗಾದರೂ ಗೊತ್ತಿದ್ದರೆ ತಿಳಿಸಿ.

ಕೆಲವೊಂದು ಶಬ್ದಗಳಿಗೆ ನನ್ನ ಊಹೆಯ ಪ್ರಕಾರದ ಸಂವಾದಿ 'ಗ್ರಂಥಸ್ಥ' ಕನ್ನಡದ ಶಬ್ದ ಕೊಟ್ಟಿದ್ದೇನೆ. ಇವೆಲ್ಲವೂ ಮೂಲಶಬ್ದಗಳ ಅಪಭ್ರಂಶಗಳು.
ಮರ್ಕು (ಮರುಕ, ಮರುಗುವುದು) = ಅಳು,
ಮೇನತ್ತು (ಮೆಹನತ್ತು) = ವಿಶೇಷ - ನಾನ್ ಮೇನತ್ತ್ ಅಂದ್ಕಂಡ್ ಮಾಡಿದೆ ಕಾಣ್,
ಏಗ್ಳಿಕೆ (ಏಗಳ್ - ಹಳೆಗನ್ನಡ)=ಯಾವಾಗ - ಮದಿ (ಮದುವೆ) ಏಗ್ಳಿಕೆ?
ನೀಕು (ನಿಲುಕು).

ಇನ್ನೊಂದಿಷ್ಟು ಕನ್ನಡ ಶಬ್ದಗಳ ಪ್ರಯೋಗ ನಮ್ಮಲ್ಲಿ ವಿಶಿಷ್ಟವಾಗಿದೆ.
ನಿಘಂಟು = ಖಚಿತತೆ - ಉಪನಯನ ಏಗ್ಳಿಕೆ ಅಂತೇಳಿ ಇನ್ನೂ ನಿಘಂಟಿಲ್ಲ.
ಸಾಬೀತು = ನಿರ್ವಿಘ್ನ - ಉಪನಯನ ಸಾಬೀತೆಗಾದ್ರೆ, ಅದೆ ದೊಡ್ಡದು.
ಕಂತು = ಮುಳುಗು - ಹೊತ್ತ್ ಕಂತಿಯಾಯ್ತಲೆ ಮಣಿ ಹಂಗರೆ, ಸಾಲ್ದಾ ಆಡದ್ದ್?

ಇಗೊ ಕನ್ನಡ(ಕನ್ನಡ ಪದಗಳ ವ್ಯುತ್ಪತ್ತಿ, ಪದಪ್ರಯೋಗಗಳ ಕುರಿತಾದ ಗ್ರಂಥ)ದಲ್ಲಿ ನಾನು ಓದಿದ ಒಂದು ಶಬ್ದದ ವಿವರಣೆ - ಈ ಪದ ಕುಂದಾಪುರದ ಬಳಿಯ ಶಾಸನವೊಂದರ ಮೂಲಕ ದೊರೆತಿದೆ. ಈ ಶಬ್ದದ ಅರ್ಥ ಇದುವರೆಗೂ ಗೊತ್ತಾಗಿಲ್ಲ:-))

ಶಿವರಾಮ ಕಾರಂತರ 'ಹುಚ್ಚುಮನಸಿನ ಹತ್ತು ಮುಖಗಳು' ಕೃತಿಯಲ್ಲಿನ ಒಂದು ಮಾತು - "ಅಪ್ಪ ಹೋತ, ಮಗ ಆಡು":-))

ಮಂಗಳೂರಿನಿಂದ ಕುಂದಾಪುರದ ಶಾಲೆಯೊಂದಕ್ಕೆ ಅಧ್ಯಾಪಕರೊಬ್ಬರು ವರ್ಗವಾಗಿದ್ದರು. ಮೊದಲ ದಿನವೆ ವಿಧ್ಯಾರ್ಥಿಯೊಬ್ಬ ಬಂದು ಕೇಳಿದ್ದು - ಸಾರ್ ಇವತ್ತ್ ಪಾಠ ಮಾಡಿದ್ದೆಲ್ಲಾ 'ಬರ್ಕಂಬರ್ಕಾ'(ಬರೆದುಕೊಂಡು ಬರಬೇಕಾ)?

ಇಂಗ್ಲಿಷ್ ಪ್ರಾಧ್ಯಾಪಕರಿಗೂ ಕನ್ನಡ ಪಂಡಿತರಿಗೂ ಸ್ಪರ್ಧೆ ನಡೀತಂತೆ. ಕನ್ನಡದ ಯಾವುದೇ ವಾಕ್ಯವನ್ನು ಇಂಗ್ಲೀಷಿಗೆ ಅನುವಾದಿಸುತ್ತೇವೆ ಅಂತ ಇಂಗ್ಲಿಷ್ ಪ್ರಾಧ್ಯಾಪಕರು. ಕನ್ನಡ ಪಂಡಿತರು ಕೊಟ್ಟ ವಾಕ್ಯ - ಹರ್ಕಟಿ ಚಾಪಿ ಹಾಯ್ಕಂಡ್ ತೆವಡಸ್ಕಣಿ ಕಾಂಬೊ:-)

ನಮ್ಮೂರಿನ ಕಪ್ಪೆಗಳಿಗೂ ಇಂಗ್ಲಿಷ್ ಬರತ್ತೆ ಗೊತ್ತಾ? ಮಳೆ ಬರುವಾಗ ಅವು 'ನೀರು, ನೀರು' ಅನ್ನಲ್ಲ. ಬದಲಾಗಿ 'ವಟರ್, ವಟರ್' ಅನ್ನತ್ತೆ.:-)