February 11, 2007

ಹುಗ್ಸಿಡು, ಅಂಡ್ಕಂಬ್ದು

'ಹುಗ್ಸಿಡು' = ಬಚ್ಚಿಡು,
ಮೂಲ - 'ಹುದುಗಿಸಿಡು'.
ಅಕ್ಕ, ನನ್ನ ಕ್ರಿಕೆಟ್ ಬ್ಯಾಟ್ ಎಲ್ಲ್ 'ಹುಗ್ಸಿಟ್ಟಿದೆ'?
ತುಳಸಿಯಮ್ಮ, ನನ್ನ ಗುರುದಕ್ಷಿಣೆ ಎಲ್ಲ್ 'ಹುಗ್ಸಿಟ್ಟಿರಿ'?

ಗದಾಯುದ್ಧ ಯಕ್ಷಗಾನ ಪ್ರಸಂಗದ ಒಂದು ಪದ್ಯ - (ದುರ್ಯೋಧನ ಸಂಜಯನಿಗೆ ಹೇಳ್ತಾನೆ)
"ಇದೆ ಒಂದು ಸರೋವರವು ಇಲ್ಲಿಗೆ ಸಮೀಪದಲಿ, 'ಹುದುಗಿರುವೆ'ನೈ ನಾನು ಅರಿಗಳ್ ಅರಿಯದಂದದಲಿ"

'ಅಂಡ್ಕಂಬ್ದು' = ಅಡಗಿಕೊಳ್ಳು

ಅನ್ವೇಷಿಗಳೆ, ಪತ್ತೆನೆ ಇಲ್ಲ ಇತ್ತೀಚೆಗೆ. ಎಲ್ಲ್ 'ಅಂಡ್ಕಂಡಿರಿ'?
ಶ್ರೀ, ಬೆಂಗ್ಳೂರಲ್ಲ್ ಕಾವೇರಿ ಗಲಾಟಿ ಆತ್ತ್. ಒಳ್ಳೆ ಜಾಗದಲ್ಲ್ 'ಅಂಡ್ಕಣಿ',

'ಅಂಡ್ಕಂಡ' = ಅಡಗಿಕೊಂಡ
'ಅಂಡ್ಕಂತ' = ಅಡಗಿಕೊಳ್ಳುತ್ತಾನೆ
'ಅಂಡ್ಕಣಿ' = ಅಡಗಿಕೊಳ್ಳಿ
'ಅಂಡ್ಕೊ' = ಅಡಗಿಕೊ

ಇವತ್ತಿನ ಸವಾಲು
ಇದರ ಅರ್ಥ ಏನು? - "ಕುಂದಾಪ್ರ ಕಾಣಿ ರುಚಿ ಕಾಣಿ"

6 comments:

reborn said...

someone from kundapra can only answer this !!! and i can ofcourse ... i ll wait and see for some more time before i do that :)

sritri said...

ಹ್ವಾಯ್, ಜಗಲಿ ಭಾಗವತರೇ, ಆಗಾಗ ಹೀಗೆ ನಮಗೆ ನಿಮ್ಮೂರ ಭಾಷೆ ಕಲಿಸಿಕೊಡಿ. ಗುರುದಕ್ಷಿಣೆ ಸಿಗತ್ತೆ ಅಂತ ಕನಸು ಕಾಣಬೇಡಿ ಅಷ್ಟೆ :)

sritri said...

"ಕುಂದಾಪ್ರ ಕಾಣಿ ರುಚಿ ಕಾಣಿ" ಅಂದರೆ -

"ಸಾಯೋದ್ರಾಗೆ ಒಮ್ಮೆ ನೋಡು ಜೋಗಾದ್ ಗುಂಡಿ" - ಇದೇ ತರ ರುಚಿಯನ್ನು (ಚೆಲುವು,ಸೊಬಗು)ಅಂದರೆ ಏನು ಎಂಬುದನ್ನು ತಿಳಿಯಲು ಕುಂದಾಪುರವನ್ನು ನೋಡಬೇಕು , ನೋಡಿ ತಿಳಿಯಬೇಕು ಎಂದಿರಬಹುದಾ?

ಆನು ಪಾಸೋ ಫೇಲೋ ಬೇಗ ತಿಳ್ಸಿ ಮರ್ರೆ :)

Jagali bhaagavata said...

Reborn and Sritri,
ನನ್ನ blog-ಗೆ ಸ್ವಾಗತ. ತುಂಬ ಖುಶಿಯಾಯ್ತು.

ತುಳಸಿಯಮ್ಮ,
ನೀವು ಡುಮ್ಕಿ ಹೊಡೆದಿದ್ದೀರಿ. ನಿಮಗೆ ಬರಿ ಅರ್ಧ ಮಾರ್ಕ್ಸ್ ಮಾತ್ರ.

ಮತ್ತೆ, 'ಆನು' - ಇದು ಹವ್ಯಗನ್ನಡದ ಪ್ರಯೋಗ. ಕುಂದಗನ್ನಡದಲ್ಲಿ ಇದು - 'ನಾನ್'.

Veg or Non-veg ಅಂತ ಕೇಳಿದ್ರೆ ನನ್ನ ಉತ್ರ - 'ನಾನ್ ವೆಜ್':-)

Jagali bhaagavata said...

ತ.ವಿ.ಶ್ರೀ. ಸರ್,
ಮೊತ್ತಮೊದಲನೆಯದಾಗಿ, ಸುಸ್ವಾಗತ. ತುಂಬ ಖುಶಿ ಕೊಟ್ಟಿತು. ಹೀಗೆಯೆ ಬರ್ತಾ ಇರಿ.

ಆ ವಾಕ್ಯದ ಅರ್ಥವನ್ನು ಇವತ್ತು ನೀಡಿದ್ದೇನೆ:-)

Anveshi said...

ಹ್ವಾಯ್ ಭಾಗ್ವತ್ರೇ....
ನಾನ್ ಇಲ್ಲಿ ಇದ್ದಿ ಕಾಣಿ!