ಚುಟುಕಗಳು
ನಾನು ಪ್ರಾಥಮಿಕ ಶಾಲೆಯಲ್ಲಿದ್ದಾಗ ಬರೆದ ಪೆದ್ದು ಪೆದ್ದು ಚುಟುಕಗಳಿವು:-))
ಮೀಸಲಾತಿ
ಹೀಗೆಯೇ ಹೆಚ್ಚುತ್ತಿದ್ದರೆ
ಮೀಸಲಾತಿ
ಕಡೆಗೆ ಉಳಿಯುವುದೆರಡೆ
ಜಾತಿ
ಹಿಂದುಳಿದವರು
ಮತ್ತು
ಮುಂದುಳಿಯದವರು!
ನಾಪಿತನಿಗೆ
ತಲೆಬಾಗದಿದ್ದರೇನಂತೆ
ಪಿತನಿಗೆ,
ತಲೆಬಾಗಲೇಬೇಕು,
ನಾಪಿತನಿಗೆ! (ನಾಪಿತ = ಕ್ಷೌರಿಕ)
ಉದಾರವಾದ
ರಾಜಕಾರಣಿಯ ತೋರುವಿಕೆಯ
ಉದಾರವಾದ
ನಿಜದಲ್ಲಿ ವೋಟು ಪಡೆಯುವ
ಉದರ-ವಾದ
ನಿರುದ್ಯೋಗಿ
ಹಾಲು ಮಾರುವ ಯುವಕರು
ನಿರುದ್ಯೋಗಿಗಳಲ್ಲ,
ಅವರು ನಿಜವಾಗಿಯೂ
'ನೀರು'ದ್ಯೋಗಿಗಳು!
ವಾಸನೆ
ಚುನಾವಣೆ ಬಂತೆಂದರೆ
ರಾಜಕಾರಣಿಯ ಬಾಯಿಯಿಂದ
ವಾಸನೆ,
ಆದೇ
ಆಶ್ವಾಸನೆ!
ಕೆಲಸ
ಜಪಾನೀಯರಿಗೆ ದಿನವಿಡೀ
ಕೆಲಸ-ಮಯ
ನಮಗೋ ಅದು ಕೇವಲ
ಕೆಲ-ಸಮಯ
1 comment:
Dear JB,
I enjoyed reading your play on the words. It is amazing that you could write these while still in primary school!
Please do post more if you can.
Regards.
Post a Comment