ಎಣ್ಣು
ಪ್ರೇಮಜ್ವರದ ಮುಂದಿನ ಹಂತ 'ವಿರಹ'. ಅದಕ್ಕಾಗಿ ಇವತ್ತಿನ ಶಬ್ದ 'ಎಣ್ಣು':-)
'ಎಣ್ಣು' = ಯೋಚಿಸುವುದು, ಚಿಂತಿಸುವುದು
ಶಿವು, ಇನ್ನೂ ವಿರಹ ವಿರಹ ಅಂತ 'ಎಣ್ಣ'ತಿದ್ರ್ಯಾ?
ತುಳಸಿಯಮ್ಮ, ನಂಗೆ ಗುರುದಕ್ಷಿಣೆ ಕೊಡ್ಕಾತ್ತ್ ಅಂತ 'ಎಣ್ಣ'ತಿದ್ರ್ಯಾ?
"ನಾವೆಲ್ಲ ಹುಶಾರಿತ್ತ್. ಮನೆ ಬಗ್ಗೆ 'ಎಣ್ಣ'ಬೇಡ".
"ಇನ್ನೂ 'ಎಣ್ಣು'ದೆಂತಕೆ? ಹೋಪವ್ರ್ ಹೋತ್ರ್. ಅದನ್ನೆಲ್ಲ ತಡುಕಾತ್ತಾ (ತಡೀಲಿಕ್ಕಾಗತ್ತ)? ಇಪ್ಪವ್ರ್ (ಇರುವವರು) ಬಗ್ಗೆ ಯೋಚ್ನೆ ಮಾಡ್" (ಸಾವಿನ ಮನೆಯಲ್ಲಿ ಕೇಳುವ ಮಾತು).
ಈ ಶಬ್ದದ ಮೂಲ ನನಗೆ ಗೊತ್ತಿಲ್ಲ. ಸಾಹಿತ್ಯದಲ್ಲೂ ಉಪಯೋಗಿಸಿದ ಬಗ್ಗೆ ಗೊತ್ತಿಲ್ಲ. ಆದರೆ ನಮ್ಮ ಭಾಗವತ್ರು ಪ್ರಾಥಮಿಕ ಶಾಲೆಯಲ್ಲಿದ್ದಾಗ ಅಕ್ಕನಿಗೆ ಬರೆದ ಪತ್ರವೊಂದರಲ್ಲಿ ಇದನ್ನ ಉಪಯೋಗಿಸಿದ್ದಾರೆ. ಅದರ ಒಂದು ಚರಣ:-
ತಿಂಗಳೊಂದಾಯ್ತು ಹತ್ರ ಹತ್ರ
ಬರೆದಿಲ್ಲವೇಕೆ ನೀನಿನ್ನೂ ಉತ್ರ
ಕೆದಕುತ್ತಿಹರು ಕಾರಣದ ಚರಿತ್ರ
ಆರಂಭವಾಗಿದೆ ಎಣ್ಣುವಿಕೆಯ ಸತ್ರ
ಅಂದಹಾಗೆ ಮಾಲಾ ರಾವ್ (http://www.chitra-durga.blogspot.com/ )ಸಿದ್ಧಪಡಿಸುತ್ತಿರುವ ಜಗತ್ತಿನ ಅತಿಶ್ರೇಷ್ಠ ಕವನಗಳ ಪಟ್ಟಿಯಲ್ಲಿ ಈ ಮೇಲಿನ ಕವನವನ್ನೂ ಪರಿಗಣಿಸಲಾಗಿದೆ ಎಂದು ಬೊ.ರ.ಬ್ಯೂರೋದ 'ನಂಬಲನರ್ಹ' ಮೂಲಗಳಿಂದ ತಿಳಿದುಬಂದಿದೆ:-))
ಇವತ್ತಿನ ಸವಾಲು:-
ಇದರ ಅರ್ಥ ಏನು - 'ಮಿಣ್ಣಗೆ'? ಇದನ್ನು ಕನ್ನಡದ ಹೆಸರಾಂತ ಕವಿಯೊಬ್ಬರು ತಮ್ಮ ಕಾವ್ಯವೊಂದರಲ್ಲಿ ಉಪಯೋಗಿಸಿದ್ದಾರೆ. ಅವರ ಹೆಸರೇನು?
Hint : ತುಳಸಿಯಮ್ಮನವರು ಈ ಕವಿಯ ಜೊತೆ ನಿಂತು ಫೋಟೊ ತೆಗೆಸಿಕೊಂಡಿದ್ದಾರೆ:-))
13 comments:
ಕಾರ್ಕಳ, ಮಂಗಳೂರು ಕಡೆ ತುಳುವಿನಲ್ಲೂ "ಎಣ್ಣು" ಪದಕ್ಕೆ ನೆನೆಸಿಕೊ, ಎಣಿಸು, ಯೋಚಿಸುತ್ತಿರು ಅರ್ಥಗಳೇ ಇವೆ. ಹಾಗೇನೇ "ದಸ್ಕತ್ತು" ಪದವೂ ತುಳು ಭಾಷೆಯಲ್ಲಿ ಚಾಲ್ತಿಯಲ್ಲಿದೆ ಮತ್ತು ಸಹಿ ಎನ್ನುವ ಅರ್ಥವೇ ಇದೆ (ರಾವಣನ ಆಗಮನ ಆಗಿಲ್ಲ). "ಮಿಣ್ಣನೆ" ಅನ್ನುವುದು "ನುಣ್ಣಗೆ, ಮಿರಮಿರನೆ- ಹೊಳೆಯುವ" ಎಂದೇ? ಪದ-ಪ್ರಯೋಗ ಪಾಠಗಳು ಚೆನ್ನಾಗಿವೆ. ಧನ್ಯವಾದಗಳು.
ಮಿಣ್ಣಗೆ ಅಂದರೆ ಯಾರಿಗೂ ಗೊತ್ತಾಗದ ಹಾಗೆ..
ಬೆಕ್ಕು ಮಿಣ್ಣಗೆ ಬಂದು ಹಾಲು ಕುಡಿಯಿತು...
ಬುರ್ನಾಸ್ - ಪ್ರಯೋಜನವಿಲ್ಲ
ಉ: ನೀ ಬುರ್ನಾಸ್ ಮರೆಯ
ಬೇಲಿ ಪರ್ಕಿ , ನಂಗ್ ನಮಪ್ಪಯ್ಯ ಯಾವಾಗ್ಲು ಹೀಂಗೆ ಕರಿಯೂದ್ ಮರೆಯ್ರೆ
ಒಲೆ ಸುಡುಕೆ ಚಾಂಪರ್ಕಿ, ಗೊತ್ತಿತ್ತ ?
ಭಾಗ್ವತ್ರೆ, ನಂಗೆಲ್ಲ್ ಹಾಕೂದಂತ್ ಗೊತ್ತಾಯ್ದೆ ಇಲ್ಲೆ ಹಾಕಿದೆ ಮರಾಯ್ರೆ. ತಪ್ಪಾದ್ರೆ ತೆಗಿನಿ. ಸುಮಾರ್ ಟೈಮ್ ಆಯ್ತ್ ಕುಂದಾಪ್ರ್ ಭಾಷೆ ಮಾತಾಡ್ದೆ. ನಿಮ್ ತಾಣ ನೋಡಿ ಬಹಳ ಖುಷಿ ಆಯ್ತ್.
ನಂಗ್ ಇನ್ನೊಂದಿಷ್ಟ್ ಕುಂದಾಪ್ರ ಪದ ನೆನ್ಪಿಗ್ ಬತ್ತ್
ಪದ - ಹಾಡು
ಆಯ್ಕೊ , ಆಯ್ಕಣಿ, ಆಯ್ಕಣ, ಆಯ್ಕಣೆ - ಇತರೆ ಕನ್ನಡಿಗರಿಗೆ ಉಳಿದುಕೊ, ಉಳಿದುಕೊಳ್ಳಿ, ಉಳಿದುಕೊಳ್ಳೊ, ಉಳಿದುಕೊಳ್ಳೆ
ನೆನಪಾಗ್ತಿದ್ ಹಾಂಗೆ ಬರೀತೆ.
ಜಗಲಿ ಭಾಗವತರೇ, ನೀವು ಮಿಣ್ಣಗೆ ಬಂದು ನನ್ನ ಫೋಟೋ ನೋಡಿದ್ದು ಯಾವಾಗ?
ಜ್ಯೋತಿ ಮತ್ತು ಶಾಂತಲ (ದಾಮ್ಲೆ?),
ನನ್ನ blog-ge ನಿಮಗೆ ಸುಸ್ವಾಗತ. ನಿಮ್ಮ comments ಓದಿ ತುಂಬ ಖುಶಿಯಾಯ್ತು.
ಜ್ಯೋತಿ,
ನನ್ನ ಪಾಠಗಳಿಗೆ 'ಅಧಿಕೃತ' ಮೊಹರೆಯೊತ್ತಿದ್ದಕ್ಕೆ ಕೃತಜ್ಞತೆಗಳು. ಅಂದಹಾಗೆ, ನಿಮ್ಮನ್ನ ಎಲ್ಲೋ 'ಓದಿದ' ಹಾಗಿದೆಯಲ್ಲಾ, ಮಾರಾಯ್ರೆ? ನಿಮ್ಮನ್ನ ಮತ್ತೊಮ್ಮೆ ಓದುವುದು ಹೇಗೆ, ಎಲ್ಲಿ?:-)
ಶಾಂತಲ,
ನೀವು ಎಲ್ಲಿ ಬರೆದ್ರೂ ಪರ್ವಾಗಿಲ್ಲ. ನಾನು ಅವನ್ನೆಲ್ಲ note ಮಾಡ್ಕೊಳ್ತೇನೆ. ನಿಮಗೆ ನೆನಪಾದದ್ದನ್ನೆಲ್ಲ ಬರೀತಾ ಇರಿ.
ಒಂದು ಕೆಲಸ ಮಾಡೋಣ.
ನಾನು ಪಾಠ ಮಾಡ್ತೇನೆ.
ಗುಬ್ಬಚ್ಚಿ ಮತ್ತು ಶಾಂತಲ ನನ್ನ ಪಾಠಗಳ reviewer.
ಜ್ಯೋತಿ inspector:-)) ಪರ್ವಾಗಿಲ್ವ? ನಿಮಗೆ ಸಂಬಳ ಸಿಗತ್ತೆ ಮಾರಾಯ್ರೆ (ಗುರುದಕ್ಷಿಣೆಯಲ್ಲಿ ನಿಮಗೆ ಬಾಬ್ತು ಕೊಡ್ತೇನೆ):-))
"ಜ್ಯೋತಿ inspector:-)) ಪರ್ವಾಗಿಲ್ವ? "- ಅಲ್ಲ ಮಾರಾಯ್ರೆ, inspector ಅಂತ ಹೇಳಿ ನಾ ದಿನಾ `ಶಾಲೆ'ಗೆ ಬರಬಾರ್ದು ಅಂತಲಾ ನಿಮ್ಮ ಹುಕ್ಕಿ? ಇದೊಳ್ಳೆ ಪಂಚಾತಿಗೆ ಆಯ್ತಪ್ಪ ನಿಮ್ಮದು.
ನನ್ನ ಕವನಗಳನ್ನು thatskannada-ದಲ್ಲಿ ಓದಿರಬಹುದು- ಸುಪ್ತದೀಪ್ತಿ ಹೆಸರಿನಲ್ಲಿ ಕವನ ಬರೀತೇನೆ. ತುಳಸಿವನದಲ್ಲಿ, ಚಿತ್ರದುರ್ಗದಲ್ಲಿ, ಗಾಳಹಾಕುವವರ ಕೆರೆಯ ಏರಿಯಲ್ಲಿ, ಪಟ್ಟಾಂಗದ ಜಗಲಿಯಲ್ಲಿ,... ಹಾಗೇ ಅಲ್ಲಿ-ಇಲ್ಲಿ ತಿರುಗಾಡುತ್ತೇನೆ.
ನಮ್ಮದು ನಂಬಲನರ್ಹ ಬ್ಯುರೋ ಅಂತ ಏನಾದ್ರೂ ಕಾಗುಣಿತ ದೋಷದಿಂದ ಬರೆದ್ರಾ ಅಂತ ಹೆದ್ರಿ ಓಡೋಡಿ ಬಂದೆ. ಸರಿಯಾಗೇ ಬರ್ದಿದ್ದೀರಿ.
ಮಿಣ್ಣಗೆ ಮಿನುಗೋದು ಯಾರು?
ನಮಸ್ಕಾರ ಪಿಜೆ ಮಹಾರಾಜ,
ನೀನು ಕೊಡೊ $೧೦೦೦ ದಲ್ಲಿ $೧೦೦ ಕಳ್ಕೊಂಡು ಉಳಿದ $೯೦೦ ಕೊಡು ಬೇಗ......ಕಾಯ್ತಾ ಇದ್ದಿ
ನಿಮ್ಮೂರ ಭಾಷೆ ಒಂಥರಾ ಚಲೊ ಇದ್ದು...ಪ್ರಶ್ನೆಗೆ ಉತ್ತರ ಮಾತ್ರ ಸ್ವಲ್ಪ ಕಷ್ಟ ಅನ್ಸ್ತಾ ಇದ್ದು ನಂಗೆ..
ಭಾಗವತರೇ,
ತುಳಿಸಿವನ ಒಡತಿ ಮಿಣ್ಣಗೆ ಪೋಟೋ ತಗಿಸಿಕೊಂಡ ಸುದ್ದಿ ಅಸತ್ಯಾನ್ವೇಷಿಗಿಂತ ಮುಂಚೆ ತಾವೇ 'ಬ್ರೇಕಿಂಗ್ ಸುದ್ದಿ'ಆಗಿ ಕೊಟ್ಟಿದ್ದಕ್ಕೆ ವಂದನೆಗಳು..
ಆದರೆ ಆ ಸಾಹಿತಿ ಯಾರು?
ಚಿತ್ರ-ದುರ್ಗದ ಬಗ್ಗೆ ಮಾತಾಡಬೇಡಿ..ಕಳೆದ ೨-೩ ಕವನಗಳನ್ನು ನೋಡಿದರೆ 'ಒಂಥರಾ' ಎಪೆಕ್ಟ್ ಉತ್ಕರ್ಷಕ್ಕೆ ಏರುತ್ತೆ !
ಲಕ್ಷ್ಮಿನಾರಾಯಣ ಭಟ್ಟ್ರ್ ಅಲ್ದ
ಜ್ಯೋತಿ,
ಭಾಗವತ್ರ್ rules ಬೇರೆ. ಇಲ್ಲಿ inspector ದಿನಾ ಬತ್ರ್. ಅವ್ರಿಗೆ ಸಂಬ್ಳವೂ ಮಸ್ತ್ ಜಾಸ್ತಿ ಅಂತ ಕೇಂಡಾಂಗಿತ್ತ್:-)
ಅಸತ್ಯಿಗಳೆ,
ಭಾಗವತ್ರು ಕಾಗುಣಿತ ತಪ್ಪೆಲ್ಲ ಮಾಡುದಿಲ್ಲ. (ಎಲ್ಲಾದ್ರೂ ಇದ್ರೆ ನಂಗೆ ಮಾತ್ರ ತಿಳ್ಸಿ. ಬೇರೆಯವ್ರಿಗೆ ಹೇಳ್ಬೇಡಿ:))
ಮನಸ್ವಿನಿ, ನೀವ್ ಯಾಕೆ 'ಒಂಥರ, ಒಂಥರ' ಅನ್ನೋದು? 'ಚಿತ್ರ-ದುರ್ಗ'ದ effect-ಏ effect-ಉ:-)
ಶಿವು,
ಈಗ ಎಫೆಕ್ಟ್ ಹೇಗಿದೆ?
ಶಾಂತಲ,
ಸೂಪರ್. ನಿಮಗೆ ನೂರಕ್ಕೆ ನೂರು ಮಾರ್ಕ್ಸ್.
Post a Comment