ದಸ್ಕತ್ತು
ದಸ್ಕತ್ತು = ಸಹಿ, ಹಸ್ತಾಕ್ಷರ
ಮೂಲ - ದಸ್ತಕತ್ (ಪ್ರಾಯಶಃ). ಇದು ಕೇವಲ ಕುಂದಗನ್ನಡದ ಶಬ್ದವೋ, ಇಲ್ಲ ಬೇರೆ ಕಡೆನೂ ಉಪಯೋಗಿಸ್ತಾರೊ ಗೊತ್ತಿಲ್ಲ.
ಮನಸ್ವಿನಿ ನಂಗೆ ನೂರು ಡಾಲರ್ ಕೊಡುದಿತ್ತ್ (ಕೊಡ್ಬೇಕಿದೆ). ನಾನ್ 'ದಸ್ಕತ್ತ್' ತಕಂಬ್ದ್ (ತೆಗೆದುಕೊಳ್ಳೊದು) ಒಳ್ಳಿದ್ (ಒಳ್ಳೆಯದು):-)
ತುಳಸಿಯಮ್ಮ, ನನ್ನ ಗುರುದಕ್ಷಿಣೆ ಏಗ್ಳಿಕೆ (ಯಾವಾಗ) ಕೊಡ್ತ್ರಿ(ಕೊಡ್ತೀರಾ)? ನಿಮ್ಮತ್ರ 'ದಸ್ಕತ್ತ್' ತಕಣ್ಕ (ತೆಗೆದುಕೊಳ್ಬೇಕ)?:-) ,
Reborn, ನಿಮಗೆ 'ದಸ್ಕತ್ತ್' ಹಾಕುಕ್ (ಹಾಕ್ಲಿಕ್ಕೆ) ಬತ್ತಾ (ಬರತ್ತ)? ಅಥ್ವಾ ಹೆಬ್ಬೆಟ್ಟಾ?:-)
'ದಸ್ಕತ್ತ್'ಗೆ ಇನ್ನೊಂದು ಅರ್ಥ ಇದೆ.
ದಸ್ = ೧೦, ಕತ್ತ್ = ಕತ್ತು = ಕಂಠ.
ದಸ್ಕತ್ತು = ರಾವಣ:-)
ನಿನ್ನೆಯ ಸವಾಲಿಗೆ ಉತ್ರ:-
'ಕಾಣಿ' = ನೋಡಿ,
'ಕಾಣಿ' - ಇದು ಒಂದು ಸಣ್ಣ ಮೀನಿನ ಹೆಸರು ಸಹ ಹೌದು:-)
ಕುಂದಾಪ್ರ ಕಾಣಿ ರುಚಿ ಕಾಣಿ = ಕುಂದಾಪ್ರ ಮೀನಿನ ರುಚಿ ನೋಡಿ:-)
ಇದನ್ನ ನಾನು ಎತ್ತಿಕೊಂಡದ್ದು ಡುಂಡಿರಾಜರ ಕವನವೊಂದರಿಂದ ('ಏನಾಯಿತು' ಕವನ ಸಂಕಲನ). ಅದರ ಪೂರ್ಣರೂಪ ನನಗೆ ಗೊತ್ತಿಲ್ಲ. ಅದರ ಕೆಲವು ಸಾಲು ಹೀಗಿವೆ:-
ಹೊಟ್ಟಿಗ್ ಹಿಟ್ಟ್ ಇಲ್ದೆ ಮರ್ಕಿ ಮರ್ಕಿ
ಹೊಳಿ ನೀರ್ ಸೈತ ಉಪ್ಪು
ಹೊಟ್ಟಿ ಥರ ತಲಿಯೂ ಖಾಲಿ
ಅನ್ಕಂಡ್ರೆ ಅದ್ ನಿಮ್ಮ್ ತಪ್ಪು
ಸಾಹಿತ್ಯಕ್ಕೇನ್ ಕೊಟ್ಟಿರಿ ಅಂತ್ ಕೇಂಡ್ರೆ
ಕಾರಂತ್ರೊಬ್ರೆ ಸಾಲ್ದ?
......ನಂಗ್ ಮುಂದ್ ಗೊತ್ತಿಲ್ಲ..:-))
ಡುಂಡಿರಾಜ್, ಚುಟುಕಗಳಷ್ಟೆ ಸಮರ್ಥವಾಗಿ ಗಂಭೀರ ಸಾಹಿತ್ಯವನ್ನೂ ಬರೆದಿದ್ದಾರೆ. ಆದರೆ ಅವರಿವತ್ತಿಗೂ ಗುರುತಿಸಲ್ಪಡುವುದು ಚುಟುಕಗಳ ಮೂಲಕವೆ. ಅವರ - 'ಏನಾಯಿತು' - ಸಂಕಲನ ತುಂಬ ಚೆನ್ನಾಗಿದೆ. 'ಆಯದ ಕವನಗಳು' ಅಂತ ಇನ್ನೊಂದು ಸಂಕಲನವಿದೆ. ಅವರ ನಾಟಕಗಳೂ ಚೆನ್ನಾಗಿವೆ - ನಾಳೆ ಬನ್ನಿ, ವೇಷಾಂತರ ಪ್ರಸಂಗ, ಕೊರಿಯಪ್ಪನ ಕೊರಿಯೋಗ್ರಫಿ ನನಗೆ ಇಷ್ಟವಾದವು.
7 comments:
ಮೈಯ್ಯರೆ, ನಂಗೆ ಗೊತ್ತಿದ್ದ ಹಾಗೆ ಕಾಣಿ ಅಂದ್ರೆ ಸಣ್ಣ ಮೀನು.. ಮೀನಿನ ಹೆಸರು ಅಲ್ಲ...
ನೀವ್ ಕುಂದಾಪ್ರ ಕಾಣಿ ರುಚಿ ಕಂಡಿರ್ಯಾ?
ಕುಂದಾಪುರ ಭಾಷೆಗೂ ಹವಿಗನ್ನಡಕ್ಕೂ ಸುಮಾರು ಸಾಮ್ಯ ಇದ್ದಂಗೆ ಕಾಣ್ತು. ದಸ್ಕತ್ತು ಅನ್ನೋ ಶಬ್ದಾನ ನಮ್ ಕಡಿಗೂ ಬಳಸ್ತ. ಆದ್ರೆ ಈ ಕಾಣಿ-ಗೀಣಿ ಮಾತ್ರ ನಮ್ಗೆ ಗೊತ್ತಿಲ್ಲೆ ನೋಡಿ.. :)
ಪಟ್ಟಾಂಗಿಗಳೆ,
ನಂಗೆ ಯಾರು ಕೂಡ ದಸ್ಕತ್ ತಕಂಬ್ದ್ ಬೇಡ, ಕೊಡೋದೂ ಬೇಡ. ಆದ್ರೆ ಆ ನೂರು ಡಾಲರ್ ಮತ್ತು ಗುರುದಕ್ಷಿಣೆ ಏರ್ಳಿಕೆ ಕೊಡ್ತ್ರೀ?
ಕುಂದಾಪ್ರ ಕಾಣಿ ರುಚಿ ಕಾಣಿ ಅಂದರೆ - ಮೀನಿನ ರುಚಿ ನೋಡಿ ಅಂತಾನಾ? ನಿಮ್ಮ ಕುಂದಾಪ್ರ ಸಹವಾಸವೇ ಬೇಡಪ್ಪ ನಂಗೆ. :)
ಜಗಲಿ ಭಾಗವತರೇ,
ನಮಸ್ಕಾರ !
ಸುಮ್ಮನೆ ಹಂಗೆ ಇಣುಕಿ ನೋಡಿದರೆ ಇಲ್ಲಿ ಎನೋ ಕುಂದಾರಪುರ ರಾಣಿ ರುಚಿ ಅದು ಇದು ಅಂತಾ ಇತ್ತು..
even after commenting on ur blog u still have doubts if i can put a daskatthu or not ...!!!
ಗುಬ್ಬಚ್ಚಿ,
ನೀವ್ ಹೇಳಿದ್ದ್ ಸರಿ.
ನಾನು ಒಂದೆರಡ್ ಸರ್ತಿ ಮೀನ್ ಹಿಡುಕ್ ಹೋಯಿದ್ದೆ. ಆದ್ರೆ ರುಚಿ ಇನ್ನೂ ಕಾಣ್ಲಿಲ್ಲ. ಮತ್ತ್ಯಾರಿಗೂ ಹೇಳ್ಬೇಡಿ ಮರ್ರೆ, ಅಮ್ಮ ಬಾರಕೋಲ್ ತಕಂಡ್ ಬತ್ಲ್:-))
ಸುಶ್ರುತ,
ನನ್ನ ಬ್ಲಾಗ್-ಗೆ ಸ್ವಾಗತ. ಹೀಗೆ ಬರ್ತಾ ಇರಿ. ಹಾಗೆ ನಮ್ಗೆ ಹವಿಗನ್ನಡ ಕಲ್ಸಿಕೊಡಿ.
ಅನ್ವೇಷಿಗಳೆ,
ನಂಗೆ ನೂರು ಡಾಲರಾದ್ರೂ ಸಿಕ್ಕುಗ್. ತುಳಸಿಯಮ್ಮನ ಗುರುದಕ್ಷಿಣೆ ಮಾತ್ರ ಸಿಕ್ಕುದಿಲ್ಲ. ಸಿಕ್ದ ಕೂಡ್ಲೆ ಕಳ್ಸಿಕೊಡ್ತೆ. ನಿಮ್ಮ್ ಅಡ್ರೆಸ್ ಎಂತ ಅಂದ್ರಿ?:-))
ತುಳಸಿಯಮ್ಮ,
ನಮ್ ಬದಿ ಮೀನ್ ಲೈಕಿರತ್ತ್. ಇದ್ಯಾಕ್ ಹೀಂಗಂತ್ರಿ?:-)
ಶಿವು,
ಇದೆಲ್ಲಿಂದ ಬಂದ್ಲು - 'ಕುಂದಾಪುರ ರಾಣಿ'? ನಂಗೊತ್ತಿಲ್ಲ. Valentines day hangover-ಆ? ಆ ರಾಣಿಯ email address ಇದ್ರೆ ಕೊಡ್ತ್ರ್ಯಾ?:-))
Reborn,
ನಂಗೆ ಕಾಲ್ ಎಳುಕೆ ಮತ್ತ್ಯಾರು ಸಿಕ್ಕ್ಲಿಲ್ಲ:-))
Post a Comment