June 28, 2006

ಕೇಂಬುದು

ಕೇಂಬುದು (kEMbudu) = ಕೇಳುವುದು.

This word takes various forms depending on the usage.
ಕೇಣ್, kEN = ಕೇಳು (singular,)
ಪಾಠ ಸರಿ ಮಾಡಿ 'ಕೇಣ್'

ಕೇಣಿ, kENi = ಕೇಳಿ (plural)
ಪಾಠ ಸರಿ ಮಾಡಿ ಕೇಣಿ.

ಕೇಂತಾ, kEMtaa? = ಕೇಳಿಸಿತಾ?
ನಾನ್ ಹೇಳಿದ್ದ್ ನಿಂಗೆ ಕೇಂತಾ? (did u hear what I said?).

ಕೇಂಡ್, kEMD = ಕೇಳಿ.
ನಾನ್ ಅವನನ್ನ ಕೇಂಡ್ ಹೇಳ್ತೆ. (ನಾನು ಅವನನ್ನ ಕೇಳಿ ಹೇಳ್ತೇನೆ).
ಕೇಂಡ, kEMDa = ಕೇಳಿದ.
ರಾತ್ರಿ ಪೂರ್ತಿ ರಾಮಾಯಣ ಕೇಂಡ್, ಬೆಳಿಗ್ಗೆ ಎದ್ದ್ 'ರಾಮನಿಗೂ ಸೀತೆಗೂ ಎಂತ ಸಂಬಂಧ' ಅಂತ 'ಕೇಂಡ'.

ಕೇಂಡ್ರ್ಯಾ, kEMDryaa? = ಕೇಳಿದಿರಾ?
ಅವ ಎಂತ ಹೇಳ್ದ ಕೇಂಡ್ರ್ಯಾ?

ನಾನ್ ಕೇಂತೆ (ನಾನು ಕೇಳುತ್ತೇನೆ).
ನೀನ್ ಕೇಣ್ (ನೀನು ಕೇಳು).
ಅವ ಕೇಂತ (ಅವ ಕೇಳುತ್ತಾನೆ).

2 comments:

Enigma said...

idu kundapura badi kannadwa? namm kade swlpa bere thare irthu

Jagali bhaagavata said...

ಹೌದು. ಕುಂದಗನ್ನಡಕ್ಕೂ ಹವ್ಯಗನ್ನಡಕ್ಕೂ ರಾಶಿ ವ್ಯತ್ಯಾಸ ಇದ್ದು. ನಂಗೆ ಹವ್ಯಗನ್ನಡ ಕಲ್ಸಿ ಕೊಡಿ ಕಾಂಬ:-)