ಮಸ್ತ್
ಮಸ್ತ್ , mast = ತುಂಬ, too much, too many.
ಅವ್ನಿಗೆ 'ಮಸ್ತ್' ಸಂಬಳ ಬತ್ತ್ (ಬರತ್ತೆ). ಎಷ್ಟ್ ಅಂತ ಬೇಕಿದ್ರೆ ಅವನನ್ನೆ ಕೇಣಿ:-)
ಕೋಟದ ಹುಡ್ಗೀರು 'ಮಸ್ತ್' ಜೋರ್:-)
ಮದಿ 'ಮಸ್ತ್' ಗಡ್ಜಾ? 'ಮಸ್ತ್' ಜನ ಬಂದಿದ್ರಾ?
'ಮಸ್ತ್' ಕೆಲ್ಸವಾ ಈಗ?
ಹವ್ಯಗನ್ನಡದ ಸಮಾನಾರ್ಥಕ ಪದ - 'ರಾಶಿ'.
'ಹವ್ಯಕ ಹುಡ್ಗೀರು ನೋಡುಲೆ 'ರಾಶಿ' ಚಂದ, ಹೇಳಿ:-)
ಇವತ್ತಿಗೆ 'ಮಸ್ತ್' ಆಯ್ತ್. ನಾಳಿಗೆ ಕಾಂಬ.
3 comments:
ಹವ್ಯಕ ಹುಡ್ಗೀರು ನೋಡುಲೆ 'ರಾಶಿ' ಚಂದ, ಹೇಳಿ:-)
thank u:P
ಅದು ನನ್ನ observation:-))
ಚಂಪ್ ಹೆಡಿಗೆ ಪದ ಕೇಂಡಿರ್ಯ, ಅದುಸ "too much" ಅಲ್ದ ?
Post a Comment