June 4, 2006

ಗಡ್ಜು

ಗಡ್ಜು - gaDju.

ಗಡ್ಜು - ಗಡದ್ದು (ನನ್ನ ಊಹೆಯ ಪ್ರಕಾರ ಇದು ಮೂಲರೂಪ)

ಗಡ್ಜು = ವಿಜೃಂಭಣೆ - vijraMbhaNe (grand).

Examples : -
ಮದಿ ಗಡ್ಜಾ? ಊಟ ಗಡ್ಜಾ?
madi (wedding) gaDjaa? ooTa gaDjaa?

4 comments:

Gubbacchi said...

Maiyre, Neevu Kathe barithira?
Jayantha Kaikini "Tuphan mail" oodidira?

Gubbacchi said...

Maiyre comment yake delete maadidri? It was good but one thing I couldn't understand was who will be troubled when u write stories?
I feel like writing should be self satisfactoring thing. It shouldn't be bothered for any person or fame. What do you say? I feel you can write a better one :)

Jagali bhaagavata said...

ನಾನು ಪುಂಗಿ ಊದಿದ್ದು ಸ್ವಲ್ಪ ಜಾಸ್ತಿ ಆಯ್ತು ಅಂತ ಅದನ್ನ ಡಿಲೀಟ್ ಮಾಡಿದೆ:-)

ನನ್ನ ಬರಹಗಳ ಬಗ್ಗೆ ನೀವು ತೋರಿಸುತ್ತಿರುವ ಆಸಕ್ತಿಗಾಗಿ ಕೃತಜ್ಞತೆಗಳು.

ನನ್ನ ಕಥೆಗಳ ಕುರಿತಾಗಿ - ನನ್ನಕ್ಕ ನನ್ನ ಕಥಾ ಸಾಹಿತ್ಯದ ಮೊದಲ 'ಪ್ರಯೋಗ ಪಶು'. ನನ್ನ ಕಥೆ ಓದಿ 'ಅಯ್ಯೊ, ತಮ್ಮಯ್ಯ' ಅಂತ ಅಂದ್ಲು. ಅಲ್ಲಿಂದ ಕಥೆ ಬರೆಯುವುದನ್ನ ನಿಲ್ಲಿಸಿದೆ:-)) ಇದು ಬರೆ ನೆವ ಅಷ್ಟೆ. ನಿಜವಾದ ಕಾರಣ ಅಂದರೆ ನನ್ನ ಓದು. ಜಯಂತ್, ಶಾನಭಾಗ್, ತೇಜಸ್ವಿ, ವೈದೇಹಿ, ಹೆಮಿಂಗ್ವೆ ಅವರ ಕೃತಿಗಳನ್ನ ಓದಿದ ನಂತರ, ನಾನು ಓದಬೇಕಾದುದು, ತಿಳಿಯಬೇಕಾದುದು ಎಷ್ಟೊಂದಿದೆ ಅನ್ನುವುದು ಗೊತ್ತಾಯ್ತು. ಸಾಹಿತ್ಯದ ಮೂಲದ್ರವ್ಯವೇ ಜೀವನಾನುಭವ ಹಾಗೂ ಭಾಷೆಯ ಮೇಲಿನ ಪ್ರಭುತ್ವ. ಇವೆರಡೂ ಇಲ್ಲದ ನಾನು ಎಂತಹ ಸಾಹಿತ್ಯ ರಚಿಸಿಯೇನು ಎನ್ನುವ ಪ್ರಶ್ನೆ ನನಗೆ ಇದಿರಾಯಿತು. ಹಾಗಾಗಿ ನನ್ನೊಳಗಿನ ಬರಹಗಾರನೀಗ ವಿಶ್ರಾಂತ ಜೀವನ ನಡೆಸುತ್ತಿದ್ದಾನೆ!!

ಆತ್ಮತೃಪ್ತಿಗಾಗಿ ಬರೆಯಬೇಕು ಎನ್ನುವ ಮಾತನ್ನು ಒಪ್ಪುತ್ತೇನೆ. ನಾವು ಆದ್ಯಂತವಾಗಿ ಅನುಭವಿಸಿ, ಅಸ್ವಾದಿಸಿ ಬರೆಯುವ ಲೇಖನಗಳು ನಮಗೆ ಆತ್ಮತೃಪ್ತಿ ನೀಡುತ್ತವೆ. ಆದರೆ ನಮ್ಮ ಬರಹಗಳು ವೈಯಕ್ತಿಕ ಚೌಕಟ್ಟನ್ನು ಮೀರಿ ವಿಶಾಲ ಓದುಗವರ್ಗದ ಮೇಲೆ ಪ್ರಭಾವ ಬೀರುವುದಾದರೆ, ಅದನ್ನು ನಮಗೆ ಮಾತ್ರ ಸೀಮಿತಗೊಳಿಸಿಕೊಳ್ಳಬೇಕೆ? ಕಾರ್ಲ್ ಮಾರ್ಕ್ಸ್, ಪಾಬ್ಲೊ ನೆರುಡರ ಬರವಣಿಗೆಗಳು ನಮ್ಮ ಇತಿಹಾಸದ ದಿಕ್ಕನ್ನೇ ಬದಲಿಸಿವೆ. ಅನೇಕ ಸಾಮಾಜಿಕ ಸುಧಾರಣೆಗಳಿಗೆ ಸಾಹಿತ್ಯ ವಿಪುಲವಾದ ಕೊಡುಗೆ ನೀಡಿದೆ. ನಾನು ವೈದೇಹಿಯವರೊಡನೆ ಮಾತನಾಡುತ್ತಿದ್ದೆ ಒಮ್ಮೆ. ದಕ್ಷಿಣ ಕನ್ನಡದ ಮಹಿಳೆಯರ ಸ್ಥಿತಿಗತಿಗಳ ಕುರಿತಾದ ತೀವ್ರ ಸ್ತ್ರೀವಾದಿ ನೆಲೆಯ ಬರಹಗಾರ್ತಿ. ಮಹಾಶ್ವೇತಾ ದೇವಿ, ಕಮಲಾ ದಾಸ್ ಮಟ್ಟದ ಲೇಖಕಿ. ಅವರ ಹೇಳಿದ್ದು 'ನಮ್ಮ ಬರಹಗಳು ನಮಗೆ ಮಾತ್ರ ಸೀಮಿತವಾಗಿರಬಾರದು. ಅದನ್ನು ಬೇರೆಯವರೂ ಓದಬೇಕು". ನಿಮಗೆ ಏನನ್ನಿಸುತ್ತೆ?

Gubbacchi said...

Starting with small thing will not effect much than concentrating to larger audience. Perfectness comes with many trials. Trials gradually can be targetted to bigger audience.