October 26, 2008

Fall ಸೀಸನ್ನು

ಚಳಿಗಾಲ ಆಗ್ಲೆ ಇಲ್ಲಿ ಕಾಲಿಡ್ತಿದೆ. ಮರಗಳ ಎಲೆಗಳೆಲ್ಲ ಉದುರುತ್ತಾ ಇದೆ. ಎಲೆಗಳು ಮರಗಳಿಂದ ಉದುರೋ ಮುನ್ನ ಹಸಿರು ಬಣ್ಣ ಕಳ್ಕೊಂಡು ಹಳದಿ, ಕಿತ್ತಳೆ, ಕೆಂಪು, ನೇರಳೆ ಬಣ್ಣಗಳಿಗೆ ತಿರುಗುತ್ತೆ. ಚಳಿಗಾಲ ಆರಂಭ ಆಗೋ ಮುನ್ನ ದಿನಗಳು ಚಿಕ್ಕದಾಗುತ್ತಿದ್ದರೆ ಮರಗಳೆಲ್ಲ "ಆಯ್ತು, ಇನ್ನೂ ಕಾಯ್ತಾ ಕೂತ್ರೆ ಕಷ್ಟ. ದ್ಯುತಿಸಂಶ್ಲೇಷಣ ಕ್ರಿಯೆಯನ್ನ (photosynthesis) ಇನ್ನು ನಿಲ್ಸೋದು ಸರಿ" ಅಂತ ಠರಾವು ಅಂಗೀಕರಿಸಿದ ಮೇಲೆ ಎಲೆಗಳಲ್ಲಿರೋ ಪತ್ರಹರಿತ್ತು (chlorophyll) ಮಾಯ ಆಗ್ತಾ ಬರತ್ತೆ. ಆಗ ಎಲೆಗಳ ನಿಜವಾದ ಬಣ್ಣ ಬಯಲಾಗತ್ತೆ. ಇನ್ನೂ ಜಾಸ್ತಿ ಓದ್ಬೇಕು ಅಂದ್ರೆ - ಇಲ್ಲಿ - ನೋಡಿ. ಕೆಂಡಸಂಪಿಗೆಯಲ್ಲಿ ಮೀರಾ ಬರೆದಿರೋ ಅಂಕಣವನ್ನೂ ಬೇಕಿದ್ರೆ ಒಮ್ಮೆ ಓದಿ. ಹಾಗೆ ಇಲ್ಲೂ ಒಬ್ರು ಬಿಸಿಬಿಸಿ ಕಾಫಿ ಮಾಡ್ಕೊಂಡು ಸ್ವೆಟರು ಶಾಲು ಅಂತೆಲ್ಲ ಹುಡುಕ್ತಿರೋರೂ ಇದಾರೆ.

ನ್ಯೂಇಂಗ್ಲೆಂಡ್ ಚಂದವನ್ನ ನೋಡ್ಬೇಕು ಅಂದ್ರೆ ಈ ವೀಡಿಯೋ ತುಣುಕನ್ನ ನೋಡಿ.

ಇದು Canon ಪರ್ವತದ ಮೇಲಿಂದ. ೪೨೦೦ ಅಡಿ ಎತ್ತರದಿಂದ ಪಕ್ಷಿನೋಟ. ಗಾಳಿ ಎಷ್ಟು ಜೋರಿತ್ತು ಅಂದ್ರೆ,ವಿವರಣೆ ನಿಮಗೆ ಕೇಳಿಸೋದೆ ಇಲ್ಲ. ಆ ಗಾಳಿಗೆ ಭಾಗ್ವತ್ರು ಹಾರಿ ಹೋಗದೆ ಇದ್ದಿದ್ದೆ ಪುಣ್ಯ!! ಇಲ್ಲಾ ಅಂತಿದ್ರೆ, ಗದಾಯುದ್ಧದ ಪ್ರಸಂಗದಲ್ಲಿ ಉಪಪಾಂಡವರ ತಲೆಗಳನ್ನ ನೋಡಿ, ದುರ್ಯೋಧನ ’ಚಂದ್ರವಂಶಕ್ಕಿನ್ನಾರು’ ಅಂತ ಗೋಳಿಟ್ಟಂತೆ, ನಾವು ನೀವೆಲ್ಲ "ನಮ್ಮ ಕಾಲೆಳೆಯುವವರಾರಿನ್ನು’ ಅಂತ ಗೋಳಿಡ್ಬೇಕಾಗ್ತಿತ್ತು!!!



ಶುಭಂ

7 comments:

Seema S. Hegde said...

'ಕ್ಲೋರೋಫಿಲ್ಲು' ಅಂದ್ರೆ ಕಸ್ತೂರಿ ಕನ್ನಡದಲ್ಲಿ 'ಪತ್ರಹರಿತ್ತು' :)
ಇಲ್ಲೂ ಮರಗಳೆಲ್ಲಾ ಎಲೆ ಉದುರಿಸೋಕೆ ತಯಾರಿ ನಡೆಸ್ತಾ ಇವೆ.

sunaath said...

Fall ಅಂತ ಓದಿದಾಗ, ನಾನು ಭಾಗವತರೇ fall ಆದರೇನೊ ಅಂತ ಕನಸು ಕಂಡಿದ್ದೆ. ಆದರೆ,ಸುಂದರವಾದ ವಿಡಿಯೋ ನೋಡಿದ ಮೇಲೆ ನಿರಾಸೆ ಆಯ್ತು.

Jagali bhaagavata said...

ಸೀಮಕ್ಕ,
ತುಂಬ ಥ್ಯಾಂಕ್ಸ್. ಅಪ್ಡೇಟಿಸಿದ್ದೆನೆ. ಅಲ್ಲಿನ ಮರಗಳ ಚಿತ್ರ ಸೆರೆಹಿಡಿದಿದ್ದೀರಾ?

ಕಾಕಾ,
ಹೋಗ್ಲಿ ಬಿಡಿ :-( better luck next time :-)

ಆಲಾಪಿನಿ said...

ಛೆ. ಅದೇ ನೋಡ್ತಿದ್ದೆ. ಎಲ್ಲಾದ್ರೂ ಫಾಲ್ ಆಗಬಹುದಾ ಅಂತ ಭಾಗವತರು.... ಕಾಣ್ಲೇ ಇಲ್ಲ

Harisha - ಹರೀಶ said...

ಒಳ್ಳೆ ಹಳೇ ಕಾಲದ ಕೆಟ್ಹೋಗಿರೋ ಟಿವಿ ಸೌಂಡ್ ಬಂದ ಹಾಗಿದೆಯಲ್ರೀ ಭಾಗ್ವತ್ರೇ! ಅದೇನ್ ಹೇಳಿದೀರೋ ಚೂರೂ ತಿಳೀಲಿಲ್ಲ. ಸ್ವಲ್ಪ ಕೆಳಗಡೆ ಬರೆಯೋದಲ್ವಾ?

Harisha - ಹರೀಶ said...

ಸೀಮಕ್ಕಾ, "ಪತ್ರ ಹರಿತ್ತು" ಕಸ್ತೂರಿ ಕನ್ನಡ ಅಲ್ಲ.. ಸಂಸ್ಕೃತ.. ಕನ್ನಡದಲ್ಲಿ "ಎಲೆ ಹಸಿರು" ಆಗ್ತೇನ..

Shrinidhi Hande said...

ಫಾಲ್ಸು ಅ೦ದ್ರೆ ಶೇರು ಮಾರುಕಟ್ಟೆ ಫಾಲ್ಸೋ, ಜೋಗದ ಫಾಲ್ಸೋ ಇರಬಹುದು ಅ೦ದುಕೊ೦ಡಿದ್ದೆ