ಭಾಗವತರ ಕಷ್ಟ
"ನನ್ನ ಬಿಟ್ಟು ಹೋಗಬೇಡ್ವೋ, ಭಾಗ್ವತ"
ಹಠ ಹಿಡಿದು ಕುಳಿತಿತ್ತು ಸೋಮಾರಿತನ,
"ಘನಾಂದಾರಿ ಕೆಲಸವಿದೆ ಕಣೋ, ನನಗೆ.
ನಿನ್ನ ಬಿಟ್ಟು ಹೋಗಲೇಬೇಕು ನಾನೀಗ,
ಕೋಪಿಸಿಕೊಂಡಾರು ಓದುಗ ದೊರೆಗಳು,
ಅವರ ಕೋಪ ತಾಳಿದವರುಂಟೇ ಹೇಳು?"
"ಬರೀ ಸುಳ್ಳು ಹೇಳ್ತೀ, ನಿನ್ನ ಬಿಡಲ್ಲ ನಾನು"
ಕಾಲಿಗೆ ಜೋತುಬಿದ್ದಿತ್ತು ಸೋಮಾರಿತನ.
"ಛೇ, ಛೇ, ಛೇ..ನಾನು ಮತ್ತು ಸುಳ್ಳು??
ಒಂದರ್ಧ ಗಂಟೆ ಅಷ್ಟೇ, ಮತ್ತೆ ವಾಪಸ್.
ಹಠ ಮಾಡಬೇಡ ಸುಮ್ಮನೆ ನೀನೀಗ,
ಹೋಗಿ ಬರುತ್ತೇನೆ, ಬಿಡು ನನ್ನ ಒಮ್ಮೆ"
"ಇಲ್ಲ ಬಿಡಲ್ಲ, ನಿನ್ನ ನಾನು ಬಿಡಲ್ಲ",
ರಚ್ಚೆ ಹಿಡಿದಿತ್ತು ಸೋಮಾರಿತನ
"ನಿನ್ನ ಬಿಟ್ಟು ನನಗಿನ್ಯಾರಿದ್ದಾರೋ?,
ವಾಪಾಸು ಬಂದುಬಿಡುತ್ತೇನೆ, ಖಂಡಿತ.
ಅಡ್ಜಸ್ಟು ಮಾಡಿಕೋ, ಒಂದರ್ಧ ಗಂಟೆ,
ಬರ್ತಾ ನಿನಗೆ ಮಸಾಲೆ ದೋಸೆ, ಆಯ್ತಾ?"
"ಓಹ್, ಮಸಾಲೆ ದೋಸೆನಾ? ಹಾಗಿದ್ರೆ ಹೋಗಿ ಬಾ,
ಅರ್ಧ ಗಂಟೆ ಅಷ್ಟೇ, ಆಮೇಲೆ ನಾನು ಮತ್ತು ನೀನು"
.........
ಇಗೋ ನೋಡಿರಿ, ಓದುಗ ದೊರೆಗಳೆ,
ನಿಮ್ಮೆದುರು ನಾನು,ಆರ್ಧ ಗಂಟೆ ಅಷ್ಟೇ,
ಎಷ್ಟೊಂದು ಕಷ್ಟ ನೋಡಿರಿ ನನಗೆ!!
ಆ ಮಸಾಲೆದೋಸೆ ಖರ್ಚು ನಿಮ್ಮದೇ!!
9 comments:
ಮೊದ್ಲು ಜಗಲಿಯಿಂದ ಇಳಿದು ಅಂಗಳಕ್ಕೆ, ನಂತ್ರ ಗೇಟು ದಾಟಿ ಹೋಟೇಲಿಗೆ (ಅಥ್ವಾ ಯಾವುದಾದ್ರೂ ಅಕ್ಕನ ಮನೆಗೆ) ಹೋದ್ರೆ ತಾನೇ ಮಸಾಲೆ ದೋಸೆ ಸಿಗೋದು? ಅದೆಲ್ಲ ಬಿಟ್ಟು ಪಂಚೆ ಉಟ್ಟು ಬರೀ ಭಾಗವತಿಕೆ ಮಾಡ್ತಿದ್ರೆ ದೋಸೆಯ ಹೆಸರು ಮಾತ್ರ ಗ್ಯಾರಂಟಿ, ನೋಡ್ತಿರು.
ಭಾರಿ ದೊಡ್ಡ ಸಾಧನೆಯಾಯ್ತು ಭಾಗವತರೇ! ನಿಮ್ಮ ಕ್ಲಾಸೆಲ್ಲಾ ಬಂದ್ ಆಯ್ತಾ? ಅಲ್ಲ ವಿದ್ಯಾರ್ಥಿಗಳು ಫೀಸ್ ಕೊಟ್ಟಿಲ್ಲ ಅಂತ ಕೋಪವಾ? :P
ನಂಗಿಂತ ವರ್ಶ್ಟು ಕೇಸ್ ಆಗ್ತಿದೀರ ನೀವು!! ಅರ್ಧ ಘಂಟೆ ಸಿಕ್ರೂ ಪ್ರಯೋಜ್ನ ಇಲ್ಲ, ಅದನ್ನ್ ನಾಕು ಮಸಾಲೆ ದೋಸೆ(ನಾಕು ಅಂತ ಸುಮ್ನೆ ಮಾತಿಗೆ ಹೇಳ್ದೆ, ನಿಮ್ಮ್ capcityನ underestimate ಮಾಡಿದ್ದಲ್ಲ) ತಿಂದು ಕರಗ್ಸಿಬಿಡ್ತೀರ ಅಷ್ಟೇ!(ಎರಡು ಪೋಸ್ಟ್ ಕುಟ್ಟಿ ಎಷ್ಟು ಬೀಗ್ಬಹುದು ನೋಡಿ:D :P)
ಎಲ್ಲರ ಕಾಲೆಳೆದು, ಎಳೆದೂ ಭಾಗವತರಿಗೆ ಈಗ ಸಮಯ ಸಾಕಾಕ್ತಾ ಇಲ್ಲ ಅಂತ ಕಾಣುತ್ತೆ:)ಮೊದಲು ಜಗಲಿಯಿಂದ ಕೆಳಕ್ಕೆ ಜಿಗಿಯಿರಿ.
ಕವನ ಚೆಂದಾಗಿದೆ, ಭಾಗವತರೆ.
ನಿಮ್ಮನ್ನ ನಂಬೋದೆಂತು, ಆದರೆ?
ಹೊಡೆದಿಹಿರಿ ನೀವು ಭರವಸೆಗಳ ಶತಕ.
ದೋಸೆ ನಾ ಕಂಡಿಲ್ಲ ಇಲ್ಲಿಯ ತನಕ.
Time to change the name for the link for my blog !!!
SS...that s u..that stands for somaari sidda !!
ಮಸಾಲೆ ದೋಸೆ (ಮಾತ್ರ) ಕೊಡಿಸ್ತೀನಿ.. ನಿಜ್ವಾಗ್ಲೂ ಬರ್ತೀರಾ ಭಾಗ್ವತ್ರೇ?
masaala dose siktha bhaagvatre..?
ಸುಪ್ತದೀಪ್ತಿ,
ಹ್ಮ್... ಹಾಗಂತೀರಾ? ಆಯ್ತು ಬಿಡಿ. ಪ್ಯಾರಾಚೂಟ್ ಸಿಕ್ಕಿದ ಕೂಡ್ಲೆ ಜಗಲಿಯಿಂದ ಲಂಘನ:-)
ಶ್ರೀ,
ಹೂನ್ರೀ. ಯಾರೂ ಗುರುದಕ್ಷಿಣೆನೆ ಕೊಟ್ಟಿಲ್ಲ ಇನ್ನೂ. ಶುರು ಮಾಡ್ತೇನೆ ಇನ್ನು ಕ್ಲಾಸು ತಗೊಳ್ಲಿಕ್ಕೆ.
ಶ್ರೀಮಾತಾ,
ಏನು ಮಾಡೋದು ಹೇಳಿ? ಬದುಕಿಕೊಂಡಿರ್ಬೇಕಲ್ಲ, ಅದ್ಕೇ ಸಮಯ ಸಿಕ್ಕಿದಾಗೆಲ್ಲ ಮಸಾಲೆ ದೋಸೆ ಖಾಲಿ ಮಾಡ್ಬೇಕಾಗತ್ತೆ :-)
ಜೋಮನ್,
ಆಯ್ತು ಕಣ್ರೀ. ಜಿಗಿಯೋಣ ಅದ್ಕೇನು? ಮೊದ್ಲು ನನ್ನ ಪ್ಯಾರಾಚೂಟ್-ಗೆ ವ್ಯವಸ್ಥೆ ಮಾಡಿ :-)
ಕಾಕಾ,
ನೀವು ಯಾವಗ್ಲೂ ನನ್ನ ಹೆಜ್ಜೆ ತಪ್ಪಿಸ್ತೀರಿ. ಸಾಹಿತ್ಯ ಸೋದರಿಯರ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಸಾಲೆ ದೋಸೆ ಕೊಡಿಸ್ಲಿಲ್ವಾ ನಾನು? :-)
reborn,
ನಿಮ್ ಬ್ಲಾಗಿಗೆ ಆ ಹೆಸ್ರೆ ಚಂದ. ಹಾಗೆ ಇರಲಿ ಬಿಡಿ :-)
ಹರೀಶ್,
ಮೊದಲ್ನೇ ಕಮೆಂಟು ಅನ್ಸತ್ತೆ ನಿಮ್ಮಿಂದ. ಹ್ಞೂ, ಹರೀಶ್. ಖಂಡಿತ ಬರ್ತೀನಿ :-)
ರಾಜೇಂದ್ರ,
ಇಲ್ರೀ, ಇನ್ನೂ ಸಿಕ್ಕಿಲ್ಲ. ನೀವು ಕೊಡಿಸ್ತೀರಾ? :-)
Post a Comment