ಎಡಿಯ
’ಎಡಿಯ’ - ಕೆಳಗಿನ ಉದಾಹರಣೆಗಳನ್ನ ನೋಡಿ. ಅರ್ಥ ಗೊತ್ತಾಗತ್ತೆ.
"ಮಣ್ಯಾ, ಅಂಗ್ಡಿಗ್ ಹೋಯಿ (ಹೋಗಿ) ಸಾಮಾನ್ ತಕಂಬಾ" (ತೆಗೆದುಕೊಂಡು ಬಾ - ತಕಂಡ್ ಬಾ - ತಕಂಬಾ:-)
"ನಂಗ್ ಎಡಿಯ"
"ಹೆಣೆ (ಹೆಣ್ಣೆ), ದನ ಕೂಗತ್ತಲೇ (ಕೂಗ್ತಿದ್ಯಲ್ಲ). ಬಾಯ್ರ್ (ಬಾಯಾರು) ಹಾಕಿ ಬಾ."
"ನಂಗ್ ಎಡಿಯ"
"ಮಗಾ, ಶೆಟ್ರ್ ಮನಿಗೆ ಹಾಲ್ ಕೊಟ್ಟಿಕ್ (ಕೊಟ್ಟು) ಬಾ"
"ನಂಗ್ ಎಡಿಯ"
"ಹೊತ್ತ್ ಕಂತಿಯಾಯ್ತಲೆ (ಸಂಜೆಯಾಯ್ತಲ್ಲ). ಹೋಗ್, ದೇವ್ರಿಗೆ ದೀಪ ಹಚ್ಚ್"
"ನಂಗ್ ಎಡಿಯ"
"ಭಾಗ್ವತ್ರೇ, ದಿನಾ ದಿನಾ ಕ್ಲಾಸ್ ತಕಣಿ ಕಾಂಬೊ"
"ನಂಗ್ ಎಡಿಯ"
’ಎಡಿಯ’ = ಆಗದು, ಇಷ್ಟವಿಲ್ಲ
ಇದರ ಮೂಲ ಯಾವುದು ಅಂತ ಗೊತ್ತಾಗ್ಲಿಲ್ಲ. ಇದೇ ಪದದ ಬೇರೆ ಬೇರೆ ರೂಪಗಳು :-
’ಎಡಿತ್ತಾ?’ = ಆಗತ್ತಾ? - ನಿಂಗ್ ಎಡಿತ್ತಾ?
’ಎಡಿತಿಲ್ಲೆ’ = ಆಗುವುದಿಲ್ಲ
’ಎಡುದಿಲ್ಲ’ = ಆಗುವುದಿಲ್ಲ -
’ಎಡುದಾರೆ’, ’ಎಡುದಾದ್ರೆ’ = ಆಗೋದಾದ್ರೆ - ನಿಂಗ್ ಎಡುದಾರ್ ಮಾತ್ರ ಮಾಡ್.
’ಎಡುದಲ್ಲ’ = ಆಗುವುದಲ್ಲ - ನನ್ ಕೂಡ್ ಎಡುದಲ್ಲಪ ಇದ್ (ನನ್ ಕೈಯಲ್ಲಿ ಆಗಲ್ಲ)
ಬೋನಸ್ ಪ್ರಶ್ನೆಗೆ ಉತ್ರ :-
ಕಂಡ್ರೆ ಮಾಣಿ, ಉಂಡ್ರೆ ಗೋಣಿ...
ಭಾಗವತ್ರ ಥರ ಸಣ್ಣಸಣ್ಣಗೆ ಇರುವವರು ಇಮ್ಯಾಜಿನ್ ಮಾಡ್ಲಿಕ್ಕೂ ಸಾಧ್ಯವಿಲ್ಲದಷ್ಟು ತಿಂಡಿಪೋತರಾಗಿದ್ರೆ, ಹೊಟ್ಟೆಬಾಕರಾಗಿದ್ರೆ, ಅವರನ್ನು ಹಂಗಿಸ್ಲಿಕ್ಕೆ ಈ ಗಾದೆ ಉಪಯೋಗಿಸ್ತಾರೆ... (ಶ್ರೀ ವ್ಯಾಖ್ಯಾನ).
ಇವತ್ತಿನ ಸವಾಲು :-
’ನೀಕು’ - ಇದರ ಅರ್ಥ ಏನು?
ಬೋನಸ್ ಪ್ರಶ್ನೆ -
ಇದರ ಅರ್ಥ ತಿಳಿಸಿ - ಬಡಕಟಿ ಮಾಣಿಗೆ ಸೆಡಕಟಿ ಜಾಸ್ತಿ :-)
8 comments:
ಭಾಗವತರೆ...
"ನೀಕು" ಅಂದ್ರೆ ನಂಗೊತೀತು, ನಾ ಹೇಳ್ತೆ ಕೇಣಿ.
ಎಟಕೋದು? ಸಿಗೋದು?ನಿಲುಕು?
"ಬಡಕಟಿ ಮಾಣಿಗೆ ಸೆಡಕಟಿ ಜಾಸ್ತಿ" ಅಂದ್ರೆ
ಕಾಂಬ್ಕೆ ಬಡವಾಗಿದ್ದರೂ ಕೊಬ್ಬು ಜಾಸ್ತಿ ಅಂತಾನಾ?
ಸಣ್ಣಗಿದ್ದರೂ ಸೆಡವು ಜಾಸ್ತಿ ಅಂತಿರಬಹುದಾ?
(ನನ್ನ ಅರೆಕುಂದಗನ್ನಡಕ್ಕೆ ಬೇಜಾರಾಗ್ಬೇಡಿ ಆಯ್ತಾ? ಕಲ್ತ್ಕೋಳ್ತೀನಿ ನಾನು.)
ನೀಕು ಅ೦ದರೆ ಇಣುಕು, ಬಗ್ಗಿ ನೋಡು
'ನೀಕು' ಅಂದ್ರೆ ಎತ್ತಿ ಕೊಡೋದು.
"ಏ ಮಾಣೀ, ಒಂಚೂರು ಬುಟ್ಟಿ ನೀಕಿ ಕೊಡಾ" ಅಂತ ಅಪ್ಪ ಹೇಳಿದ ಅಂದ್ರೆ, ಬುಟ್ಟಿಯನ್ನ ಎತ್ತಿ ತಲೆ ಮೇಲಿಟ್ಟುಕೊಳ್ಳಲಿಕ್ಕೆ ಹೆಲ್ಪ್ ಮಾಡು ಅಂತ.
ಸರಿ ಅಲ್ದಾ ಅಣಾ? ನಾ ಜಾಣ ಅಲ್ದಾ? ;)
ನೀಕು ಅಂದರೆ "ಇಣುಕು".
ಉದಾ: ಎಂತದಾ! ಅಷ್ಟು "ನೀಕಿ" ಕಾಂಬುಕೆ ಎಂಥ ಮಂಗ ಕುಣಿತಾ ಇತ್ತಾ ಅಲ್ಲಿ?
"ಬಡಕಟಿ ಮಾಣಿಗೆ ಸೆಡಕಟಿ ಜಾಸ್ತಿ" ಅಂದರೆ ಜಾಸ್ತಿ ಉಟ, ತಿಂಡಿ ತಿನ್ನದ ಸಣಕಲು ಮಕ್ಕಳು ’ಆ ಐಟಮ್ ಸರಿ ಇಲ್ಲಾ, ಇದು ಸರಿ ಇಲ್ಲಾ, ಉಪ್ಪು ಕಮ್ಮಿ, ಖಾರ ಜಾಸ್ತಿ’ ಹೀಂಗೆ ಕಂಪ್ಲೇಂಟ್ ಮಾಡ್ತಾ ಇದ್ದರೆ (ಬಾಯಿಷೆಡ ಅಂತ್ಲೂ ಹೇಳ್ತಾರೆ) ಮೇಲಿನ ನಾಣ್ಣುಡಿ ಹೇಳ್ತಾರೆ! ಉತ್ತರ ಸರಿಯಿತ್ತಾ?
ಹ್ವಾಯ್, ಹಾ೦ಗೇ ಬ್ಲಾಗ್ ಬದಿಗ್ ಹ್ವಾಪೊತ್ತಿಗೆ ಪಟ್ಟಾ೦ಗ ಕ೦ಡ್ ಹೀ೦ಗೇ ನೀಕಿದ್ದೇ.
ನೀವ್ ಆ ತೊಡು ಇತ್ತು-ಷೆಡ ಬಿಡ ಮಾಣಿ ಕೈಗೆ ನೀಕು ಹಾ೦ಗೆ ಹಾಲ್ಬಾಯೋ-ಅತ್ರಾಸವೊ ಇಟ್ರಾತಿಲ್ಯ ಮಾರಾಯ್ರೇ! ನೀವೆಲ್ಲ ಗೋಣಿಯಲ್ ಬಿಗ್ದಿಟ್ರೆ ಆ ಮಾಣಿಗೆ ಎಡಿಯುದ್ ಹೌದಾ?
maMDege sANe hiDiyo hAMgin prashne kENi marere. Nempu.Guru oTTige paipOTi mADk.
ಎಡಿಯ ಬಗ್ಗೆ ನೀವು ಮೂಲ ಯಾವುದು ಅಂತ ಗೊತ್ತಾಗಿಲ್ಲ ಅಂದಿರಲ್ಲ ಮಾರಾಯ್ರೆ. 'ಇದು ಎಂಗೆ ಎಡಿಯ. ಹ್ಞಾಂ.'
ಮೂಲ ಹೀಗಿರಬಹುದಲ್ಲ?:ಇದು ಅಥವಾ ಅದು ನನಗೆ ಹಿಡಿಯದುಅಂದರೆ ರುಚಿಸದು/ಇಷ್ಟವಿಲ್ಲ/ಇತ್ಯಾದಿ. ಅಲ್ಲಿಂದಲೇ ಎಡಿಯ ಬಂದಿದು.
ನೀಕು ಅಂದರೆ 'ನೀವು ಕೂಡ'. ಆಟಕ್ಕೆ ನೀಕು ಹೋಗ್ತೀರಾ?
ಒಲವಿನಿಂದ
ಬಾನಾಡಿ
ಮಾಸ್ಟರ್ರೇ,
ನೀಕೋದು ಅಂದ್ರೆ ಇಣುಕೋದು.
ಉದಾಹರಣೆಗೆ..ಎಂಥಾ ನೀಕ್ತೀಯಾ ಅಲ್ಲಿ? ಎಂದು ಕೇಳುವುದಿದೆಯಲ್ಲಾ.
ಇನ್ನು ಬೋನಸ್ ಪ್ರಶ್ನೆಗೆ ಮಾಣಿ ಬಡಕಟಿಯಾದ್ರೂ ಮಾತಿಗೇನೂ ಕಡಿಮೆಯಿಲ್ಲ (ಘಾಟಿ) ಅಂತಾ ಅನ್ನೋದು ನನ್ನ ಅನಿಸಿಕೆ.
ನಾವಡ
Post a Comment