February 12, 2008

’ಪೋಂಕು’

’ಪೋಂಕು’ = ತಲೆಹರಟೆ ವ್ಯಕ್ತಿ, ಕಿಲಾಡಿ, ತಲೆಸರಿಯಿಲ್ಲದವ...ಸರಿಯಾದ ಅರ್ಥ ಗೊತ್ತಾಗ್ತಿಲ್ಲ. ಆದರೆ ಇದೇ ಗುಂಪಿನಲ್ಲಿ ಬರತ್ತೆ :-)

"ಇದೆಲ್ಲೀ ಪೋಂಕ್ ಗಂಡ್. ಬರೀ ತದ್ಯಾಪ್ರತ ಮಾಡತ್ತಪ"
"ಆ ಹೆಣ್ಣ್ ಸರಿ ಇಲ್ಲ ಅಂಬ್ರ್ (ಅಂತೆ). ಅದ್ ಪೋಂಕ್ ಅಂಬ್ರಪ (ಅಂತಾರಪ್ಪ)...ಹೌದೋ ಸುಳ್ಳೋ ಗೊತ್ತಿಲ್ಲ" ವದಂತಿ ಹಬ್ಬಿಸುವುದು ಹೀಗೆ:-)
"ಬರೀ ಪೋಂಕ್ ಮಾಣಿ ಮರ್ರೆ ಇದ್. ಹೇಳದ್ದೊಂದೂ ಕೇಂತಿಲ್ಲ (ಕೇಳಲ್ಲ) ಕಾಣಿ" - ನನ್ನಮ್ಮ ಬೇರೆಯವರ ಮುಂದೆ ನನ್ನನ್ನು ಕೆಲವೊಮ್ಮೆ ಹೊಗಳುತ್ತಿದ್ದದ್ದು ಹೀಗೆ :-)

ಇದರ ಮೂಲದ ಬಗ್ಗೆ ಗೊತ್ತಿಲ್ಲ. ವಿಶ್ವಂಭರ ಉಪಾಧ್ಯರ ಶಬ್ದನಿಧಿ ಕೈಕೊಟ್ಟಿದೆ. ಈ ಪದಕ್ಕೆ ಹಲವಾರು ಸಮಾನಾರ್ಥಕ ಪದಗಳಿವೆ. ವಿಕ್ಕಿಯ ಪ್ರಕಾರ :- ಯಟ್ಟಿ, ಮರ್ಲ್, ಆನೆಗುಡ್ಡಿ, ಮಂಡೆಪಿರ್ಕಿ... ಇದ್ರ ಬಗ್ಗೆ ಮತ್ತೊಂದಿನ ಮಾತಾಡುವ.

ಬೋನಸ್ ಪ್ರಶ್ನೆಗೆ ಉತ್ರ -
’ಏನಾಯಿತು’- ಡುಂಡಿರಾಜರ ಸಂಕಲನ.

ಇವತ್ತಿನ ಸವಾಲು:-
ಕನ್ನಡ ಬ್ಲಾಗ್ ಲೋಕದಲ್ಲಿ ಅರವಿಂದ ನಾವಡರು ’ಚಂಡೆಮದ್ದಳೆ’ ಬಾರಿಸುತ್ತಿದ್ದಾರೆ. ಪ್ರಶ್ನೆ ಏನಪ್ಪಾ ಅಂದರೆ....ನಾವಡ ಶಬ್ದದ ಮೂಲ ಏನು?
ನೆನಪಿಡಿ - ಈ ಪ್ರಶ್ನೆಗೆ ಬೇರೆ ಬೇರೆ ಉತ್ತರಗಳಿರಬಹುದು. ಆದರೆ ಭಾಗವತರಿಗೆ ಗೊತ್ತಿರುವ ಉತ್ತರ ಹೇಳಿದರಷ್ಟೇ ನಿಮಗೆ ಅಂಕ :-)

ಬೋನಸ್ ಪ್ರಶ್ನೆ :-
ಚಂಡೆಮದ್ದಳೆ ಅನ್ನುವಾಗ ಯಕ್ಷಗಾನದ ನೆನಪು. ’ಯಕ್ಷಗಾನದ ಯುಗಪ್ರವರ್ತಕ’ ಅಂತ ಹೆಸರು ಮಾಡಿದ ಭಾಗವತರು ಯಾರು? ತುಂಬ ಸುಲಭದ ಪ್ರಶ್ನೆ ಇದು. ಸುಳಿವು ಬೇಕಿದ್ದರೆ ಮೇಲೆ ನೋಡಿ (ಮನೆಯ ಮಾಳಿಗೆಯನ್ನಲ್ಲ, ಮೇಲಿನ ಪ್ರಶ್ನೆಯನ್ನು:-)

ಓದುಗ ದೊರೆಗಳಲ್ಲಿ ಕಳಕಳಿಯ ವಿನಂತಿ. ಈ ಕೆಳ’ಕಂಡ’ ವ್ಯಕ್ತಿಗಳು ಕಾಣೆಯಾಗಿದ್ದಾರೆ. ನಿಮಗೆಲ್ಲಾದರೂ ಸಿಕ್ಕಿದರೆ, ದಯವಿಟ್ಟು ಜಗಲಿಗೆ ಫೋನಾಯಿಸಿ. ಸೂಕ್ತ ಭಕ್ಷೀಸನ್ನು ನೀಡಲಾಗುವುದು.
೧) ನಮ್ಮ reviewers ಮತ್ತು ಓದುಗರು- ಗುಬ್ಬಚ್ಚಿ, ಶಾಂತಲಾ, reborn, ಸಂತು ಕಾರಂತ, ಯಾತ್ರಿಕ.
೨) ಮಜಾವಾಣಿ ’ಸೊಂಪಾದ’ಕರು.

7 comments:

Vattam said...

ಬೋನಸ್ - ಕಾಳಿಂಗ ನಾವಡ.

Shiv said...

ಭಾಗವತರೇ,

ಬಹುಷಃ ಚಂಡಮದ್ದಳೆಯವರು ನಾವಡ ರಾಜ್ಯದಲ್ಲಿ ತುಂಬಾ ದಿವಸ ಇದ್ದರು ಅನಿಸುತ್ತೆ :)

Sushrutha Dodderi said...

ಎರಡ್ನೇದಕ್ ಉತ್ರ ಕಾಳಿಂಗ ನಾವಡ. ಮೊದಲ್ನೇದಕ್ ಗೊತ್ತಿಲ್ಲೆ.. :(
('ವ್ಯುತ್ಪತ್ತಿ' ಅಂದ್ರೆ ಎಂತು ಅಂತ ಸಹ ಕನ್‍ಫ್ಯೂಶನ್ ಇದ್ದು!!)

Jagali bhaagavata said...

ಶಾಂತಲಾ,
ಎಲ್ಲ್ ಹೋಯಿದ್ರಿ ಇಷ್ಟ್ ದಿನ?

ಶಿವು,
ಒಳ್ಳೆ ಪ್ರಯತ್ನ :-))

ಪುಟ್ಟಣ್ಣ,
ಈಗ ನೋಡು. ಪ್ರಶ್ನೆ ಗೊತ್ತಾಗತ್ತ ನೋಡು.

Vattam said...

ಹ್ವಾಯ್, ನೀವ್ ಮಾತ್ರ ಒಳಗ್ ಬೆಚ್ಚಗ್ ಕೂಕಂಡ್ ಕಾವ್ಯ ಕನ್ನಿಕೆ ಕನ್ಸ್ ಕಾಣಿ. ನಮ್ಗಿಲ್ಲ್ ಕ್ಲಾಸಿಂದ್ ಹೊರಗ್ ಒಂಟಿ ಕಾಲಲ್ಲ್ ನಿಲ್ಲ್ಸಿ ಎಲ್ಲ್ ಹೋಯಿದ್ರಿ ಅಂಥೇಳಿ ಕೇಂತ್ರಿಯಾ ಼ ನೀವ್ ಕೇಂಡಿದ್ದ್ ಜನ ಮಜಾವಾಣಿ ಸೊಂಪಾದಕರೋ ಅಥವಾ ಬೊಗಳೇ ರಗಳೆಯ ಸೊಂಪಾದಕರೋ ಼

ಸುಪ್ತದೀಪ್ತಿ suptadeepti said...

ಈ ಭಾಗವತರು ಕಾಳಿಂಗ ನೋಡಿ ಹೆದರೋರು, ಆ ನಾವಡರ ಸುದ್ದಿ ಯಾಕೇಂತ!

ಯಾತ್ರಿಕರು ಮುಖಮರೆಸಿದ್ದಾರೆ. ಸದ್ಯಕ್ಕೆ ಆಚೆ ಬರುವ ಲಕ್ಷಣಗಳಿಲ್ಲ. ಹೊರಗೆಳೆಯೋ ಪ್ರಯತ್ನ ಜಾರಿಯಲ್ಲಿರಲಿ.

Vattam said...

ಭಾಗವತ, ಒಂದ್ ವಿಷ್ಯಾ, ಕಿಲಾಡಿ, ತರಲೆ ಅರ್ಥಕ್ಕು ಪೋಂಕಿಗು ಭಾರಿ ವ್ಯತ್ಯಾಸಾ ಇತ್ತ್. ಬೇರೆಯವ್ರಿಗೆ ಪೋಂಕ್ ಅಂತ್ ಕರ್ದ್ ವದಂತಿ ಹಬ್ಸುವರಿಗೆ ತರ್ಲೆ ಅನ್ನ್ಲಕ್ಕ್. ಇದು ಒಂದು ರೀತಿಯಾ character assassination.