ಹಸ್ರೋಣೆ
'ಹಸ್ರೋಣೆ', 'ಹಸ್ರೊಣೆ' = ಹಸಿರು ತರಕಾರಿ, ಕಾಯಿಪಲ್ಲೆ
"ಸಂತಿಗ್ (ಸಂತೆಗೆ) ಹೋಯಿ ಎಂತಾರು (ಏನಾದ್ರು) ಹಸ್ರೋಣೆ ತಕಂಡ್ ಬಾ"
"ಇವತ್ತ್ ಎಂತ ಅಡಿಗೆ ಮಾಡುದು? ಹಸ್ರೊಣೆ ಇತ್ತಾ?"
"ಒಂದ್ ಬೆಂಡೆಕಾಯಿ, ಎರಡ್ ಹೀರೆಕಾಯಿ ಬಿಟ್ರೆ ಬೇರೆ ಎಂತ ಹಸ್ರೋಣೆ ಇಲ್ಲ"
ನನ್ನ ಊಹೆಯ ಪ್ರಕಾರ ಇದರ ಮೂಲ -'ಹಸಿರುವಾಣಿ'.
ಬರಹ ನಿಘಂಟಿನ ಪ್ರಕಾರ 'ಹಸಿರುವಾಣಿ' = ೧. ಹಸಿರುವಾಣಿ (ನಾ) ೧ ಸಸ್ಯಗಳಿಂದ ಉತ್ಪನ್ನವಾಗುವ ಸೊಪ್ಪು, ಕಾಯಿ, ತರಕಾರಿ, ಹಣ್ಣು ಮೊ. (ವ್ಯಾಪಾರದ) ಸರಕು ೨ ಹಸುರಾದ ಎಲೆ, ಗರಿ ಮೊ.ವು
ಬೋನಸ್ ಪ್ರಶ್ನೆಗೆ ಉತ್ರ - ಸುಮಂಗಲಾ. ಹಲವಾರು ರಾಜ್ಯಮಟ್ಟದ ಕಥಾಸ್ಪರ್ಧೆಯ ವಿಜೇತರು. 'ಛಂದ' ಪ್ರಕಾಶನದ ಮೊದಲ ವರ್ಷದ ಕಥಾಸ್ಪರ್ಧೆಯ ವಿಜೇತರು ಕೂಡ.
ಇವತ್ತಿನ ಸವಾಲು -
ಈ ಶಬ್ದದ ಅರ್ಥ ಏನು - 'ಪೋಂಕು'?
ಬೋನಸ್ ಪ್ರಶ್ನೆ -
'ಹಟ್ಟಿಕುದ್ರು' ಕುಂದಾಪುರ ತಾಲೂಕಿನ ಒಂದು ಸುಂದರ ಊರು. ಈ ಊರಿನಿಂದ ಬಂದ ಪ್ರಸಿದ್ಧ ಸಾಹಿತಿ (ಕವಿ, ನಾಟಕಕಾರ, ಅಂಕಣಕಾರ) ಯಾರು?
ಸುಳಿವು - 'ಏನಾಯಿತು' ಕವನ ಸಂಕಲನ.
14 comments:
ಹೇ, ಇದೆಂಥಾ ಮರಾಯ್ರೆ, ಕುಂದಾಪ್ರ ತುಂಬಾ ಬುದ್ಧಿಜೀವಿಗಳೆ ಇಪ್ಪುದ್, ಅಂತಾದ್ರಲ್ಲ್ ಪೋಂಕ್ ಕೇಂಬುದಾ ಛೆ ಛೆ
ಮರ್ಲ್ ಅಂದ್ರೆಂಥ ಕಾಂಬಾ ಼
ಬೋನಸ್ - ದುಂಡಿರಾಜ್
ನಿಂ height ಆರ್ ಅಡಿಕಿಂತ ಜಾಸ್ತಿ ಇದ್ರೆ, ನಾ ಕಂಡ್ ವ್ಯಕ್ತಿ ನೀವೇ.
ಓಹೋ, ಶಾಂತಲಾ... ಮತ್ತೆ ತಪ್ತಾ ಇದ್ರಿ ಕಾಣಿ!! ಈ ಮಾರಾಯ ಆರಡಿ ಇಲ್ಲೆ... ಮೂರಡಿಯ ಮೇಲೆ ಒಂದಿಷ್ಟ್ ಇತ್ತ್ ಮಾಣಿ.
ಪೊಂಕ್, ಯಟ್ಟಿ, ಮರ್ಲ್, ಆನೆಗುಡ್ಡಿ...
ಡುಂಡಿರಾಜ್ ಅದೇ ಸಂಕಲನದಲ್ಲಿ ಇದೆ ಅಲ್ವಾ- ಇಂಡಿಯಾ ಅಥವಾ ಗುಂಡಿಯಾ?
ಅದೇ ಸಂಕಲನದಲ್ಲಿ ಮತ್ತೊಂದು ಪೂರಾ ನಮ್ಮೂರ್ ಬಾಸಿ ಒಂದ್ ಪದ್ಯ ಇತ್. ಒಂದ್ ಸಾಲು ನೆನಪಿದೆ: 'ಕಾರಂತರು ಒಬ್ರೇ ಸಾಲ್ದ?'
ಶಾಂತಲಾ,
ಆ ಶಬ್ದ ಉಲ್ಲಾಸ ಕೇಂಡಿದ್ರು. ಹಾಂಗಾಯಿ ಸೇರಿಸ್ಕಂಡೆ. ಜಗಲಿಯಲ್ಲಿ ಓದುಗರೇ ದೊರೆಗಳು:-)
ಅಂದಹಾಗೆ, ಭಾಗವತರು ಆರಕ್ಕೇರದ, ಮೂರಕ್ಕಿಳಿಯದ ವ್ಯಕ್ತಿ. :-)
ವಿಕ್ಕಿ,
ಹಿಂದಿನ ಕ್ಲಾಸೊಂದರಲ್ಲಿ ಆ ಕವನ 'ಕೆಲವು' ಸಾಲುಗಳನ್ನ ಬರ್ದಿದ್ದೆ.
ಕುಂದಾಪುರಿ slangs
---------------
ಸೊಡ್ಲಿ
ಬಳ್ಳಿ ಸಾಯ್ಬಾ
ದೋಂಟಿ
ಪಚ್ರಟಿ
ಗಂಸಟ್
ಬೇರೆ ಪದಾs
---------
ಹಕ್ಳೆ
ಹಾಡಿ
ಬಚ್ಚು
ಬಳಚು
ಬಳೂಕ್
ಉಪ್ರಟಿ
ಬೇರೆ ಕುಂದಾಪುರಿಗಳಿಗೆ ಕೇಣಿ ಮರಾಯ್ರೆ
slang ಹಾಕಿದ್ದ್ ಪದಗಳಲ್ಲ್ ದೊಡ್ಲಿಯಾ ಸೊಡ್ಲಿಯಾ ಎಂತ್ಹೇಳಿ ಸರಿಯಾಗ್ ಗೊತ್ತಿಲ್ಲಾ
ಇನ್ನೊಂದಿಷ್ಟ್
ಹಂದ್ಗಿರ್
ಸೊಡ್ಡ್
ಹಪ್ಪ
ಗೋಂಟ್
ಪೋಂಕು ಅಂದ್ರೆ ಲಾರಿ ಮಾಡೋ ಹಾರ್ನಿನ ಶಬ್ದ!
ಹೊಯ್ ಭಾಗವತರೇ, ನಾನು ನಿಮ್ಮ ಬ್ಲಾಗ್ ನ ಅಭಿಮಾನಿ, ಕುಂದಾಪುರ ಬದಿಯವನೇ. ಹೀಂಗೇ ಬರವಣಿಗೆ ಮುಂದುವರಿಸಿ...
ನಂಗೊಂದು ಡೌಟ್ ಇತ್ತೆ. "ಸೋಂಪ್ರ" ಶಬ್ದದ ಅರ್ಥ ಹೇಳ್ತ್ರಿಯಾ?
ಭಾಗವತ, ಇಲ್ಲ್ ಕಾಣಿ,
hxxp://ellakavi.wordpress.com/2007/06/18/kundapra-kannadada-artha/
ಇಪ್ಪತ್ತೆರಡು ದಿನದಿಂದ ಈ ಕುಂದಾಪರ ಮಾಸ್ತರು ಗೈರು ಹಾಜರು. ಹಿಂಗಾದ್ರೆ ವಿಧ್ಯಾರ್ಥಿಗಳ ಈ ವರ್ಷದ ಪರೀಕ್ಷೆಯ ಕತೆ...ಎಂತ ಆಗ್ಬೇಕು? ಮಾಸ್ತರೇ ಹಿಂಗಾದ್ರೆ ಇನ್ನುಳಿದವರ ಕತೆ! ರಾಮಾ...ರಾಮಾ...
ಕಾವ್ಯಕನ್ನಿಕೆ ಸಿಗದಿದ್ದರಿಂದ ಮಾಸ್ತರ್ರು ಗೈರುಹಾಜರಾಗಿದ್ದಾರೆ :-)
ಶಾಂತಲಾ (ಭಂಡಿಯವ್ರಲ್ಲ, ಇನ್ನೊಬ್ರು)
ನೀವು ಪಟ್ಟಿಮಾಡಿದ ಪದಗಳಲ್ಲಿ ನನಗೆ ಗೊತ್ತಿರೋದು ಇವು ಮಾತ್ರ -
ಹಕ್ಳೆ
ಹಾಡಿ
ಬಚ್ಚು
ಬಳಚು
ಬಳೂಕ್
ಬೇರೆ ಪದಗಳಿಗೆಲ್ಲ ನೀವೆ ವಿವರಣೆ ಕೊಡ್ಕ್ :-)
ಆಯ್ತ್, ಇನ್ನ್ ಮೇಲೆ ಪೋಂಕ್ ಅನ್ನುವ ತರದ ಶಬ್ದ ಕೇಂತಿಲ್ಲ. ನೀವ್ ಬ್ಯಾಡ ಅಂದ್ರ್ ಮೇಲೆ ಬ್ಯಾಡ :-)
ಮತ್ತೆ, ಇ-ಕವಿಯಲ್ಲಿರೋದು ಆರ್ಕುಟ್ ಗುಂಪೊಂದರಿಂದ ಸಂಗ್ರಹಿಸಿದ ಪಟ್ಟಿ. ನೀವು ಇದ್ದ್ರ್ಯಾ ಆರ್ಕುಟ್-ನಲ್ಲಿ?
ಸುಶ್ರುತ,
ಭಲೇ, ಭಲೇ.. ಮೆಚ್ಚಿದೆ ನಿನ್ನಯ ಬುದ್ಧಿವಂತಿಕೆಯ :-)
ಗುರು,
ಧನ್ಯವಾದ. ’ಸೋಂಪ್ರ’ ಶಬ್ದದ ಕುರಿತು ನನಗೂ ಸರಿ ಗೊತ್ತಿಲ್ಲ. ನೋಡ್ತೇನೆ.
ಭಾಗವತ, ನಾ ಸದ್ಯಕ್ಕ್ ಎಂತದ್ದು ಕುಟ್ಟುದ್ರಲಿಲ್ಲಾ. ಪೋಂಕಿಗ್ ಬಂದ್ ಉತ್ತ್ರ ಕಂಡ್ ನಗಾಡುಕ್ ಲಾಯ್ಕಾಯ್ತ್, ಅಡ್ಡಿಲ್ಲಾ ಹಾಕಿನಿ.
ಪ್ರಶ್ನೆ ಮೇಲ್ ಪ್ರಶ್ನೆ ಕೇಂತಾ ಹೋಯ್ನಿ, ಕಾವ್ಯ ಕನ್ನಿಕೆ ಬರ್ತ್ಲ್ ಕಾಣಿ.
Post a Comment