ಬ್ಲಾಗ್ ವಿಹಾರ
ಇವತ್ತು ಹೀಗೆ ಒಂದು ಸುತ್ತು ಬ್ಲಾಗ್ ವಿಹಾರಕ್ಕೆ ಹೋಗೋಣ ಬನ್ನಿ.
ಭಾಗ್ವತ್ರು ತುಂಬ ದಿನದಿಂದ ಏನೂ ಮಾಡ್ದೇ ಸುಮ್ನೆ ಕಾಲ ತಳ್ತಾ ಇದ್ದಿದ್ರಿಂದ, ಏನಾದ್ರೂ inspirational ಸಿಗತ್ತಾ ಅಂತ ತುಂಬ ಹುಡುಕಾಡ್ತಾ ಇದ್ರು. ಹಾಗೆ ಹುಡುಕ್ತಾ ಹುಡುಕ್ತಾ ಇಲ್ಲಿಗ್ ಬಂದ್ರು. ’ಓದುಗ್ರೇ, ನಿಮ್ ಅನುಭವಾನೂ ಬರೀರಿ’ ಅಂತ ಕೇಳ್ಕೊಂಡಿದಾರೆ. ನೀವೂ ಕಾಮೆಂಟಿಸ್ಬಹುದು.
ಕನ್ನಡದಲ್ಲಿ ವಿಜ್ಞಾನ ಸಂಬಂಧಿ ಲೇಖನಗಳು ತೀರ ಕಡಿಮೆ ಅಂತ ಬಲ್ಲವರ ಅಂಬೋಣ. ಶ್ರೀನಿಧಿ, ಹಾಲ್ದೊಡ್ಡೇರಿ ಸುಧೀಂದ್ರ, ಪವನಜ ಅಂತ ಒಂದಿಷ್ಟು ಕೈ ಬೆರಳೆಣಿಕೆಯಷ್ಟು ಮಂದಿಯನ್ನ ಬಿಟ್ರೆ ಬೇರೆ ಯಾರೂ ಕೈಯಾಡಿಸಿಲ್ಲ. ಈ ಫೀಲ್ಡಿಗೆ ಹೊಸ ಎಂಟ್ರಿ ಕೊಟ್ಟಿರೋರು ಭೌತಶಾಸ್ತ್ರಜ್ಞೆ ಲಕ್ಷ್ಮಿ . ನೀವು ಓದಿ, ಬರ್ದು, ಬೆನ್ನು ತಟ್ಬೇಕಂತೆ.
ನಮ್ಮೂರಿನವ್ರೊಬ್ರು, ವಿಜಯರಾಜ ಕನ್ನಂತ ಅಂತ, ಕುಂದಾಪ್ರ ಕನ್ನಡದ ಹೊಸ ಬ್ಲಾಗು ಶುರು ಮಾಡಿದಾರೆ. ಇವರಲ್ಲೂ ಭಾಗ್ವತ್ರ ತರಹ, ಮಳೆ ಗಾಳಿ ಚಳಿ ಎನ್ನದೇ, ಪ್ರತಿದಿನವೂ ಕುಂದಗನ್ನಡದ ತರಗತಿಗಳನ್ನು ತೆಗೆದುಕೊಳ್ಳುವ ಪ್ರಶ್ನಾತೀತ ಬದ್ಧತೆ ಇದೆಯೇ ಅಂತ ಕಾದು ನೋಡಬೇಕಷ್ಟೆ.
ವಿಶೇಷ ಪ್ರಕಟಣೆ:
ಕೆಂಡಸಂಪಿಗೆಯ ಉಪಸಂಪಾದಕರೂ, ಕರ್ನಾಟಕ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಆರು ಚಿನ್ನದ ಪದಕಗಳನ್ನು ಪಡೆದು ದಾಖಲೆ ಮಾಡಿದವರೂ ಆದ ಜೋಮನ್ ವರ್ಗೀಸರು, ತಮ್ಮ ಬ್ಲಾಗೋದುಗರಿಗೆ ಕೃತಜ್ಞತಾಪೂರ್ವಕವಾಗಿ ಕೆಂಗುಲಾಬಿಗಳನ್ನು ನೀಡುತ್ತಿದ್ದಾರೆಂದೂ, ಮಹಿಳಾಮಣಿಗಳೆಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಬೇಕೆಂದೂ, ನಮ್ಮ ಬ್ಲಾಗಿನ ನಿಷ್ಠಾವಂತ ಓದುಗರೂ, ಹಿತೈಷಿಗಳೂ ಆದ ಶ್ರೀಮತಿ ಟೀನಾ ಅವರು ತಿಳಿಸಿರುತ್ತಾರೆ.
7 comments:
ನಾನು ಪ್ರಥಮವಾಗಿ ಇಲ್ಲಿ ಹೆಜ್ಜೆ ಇಡುತ್ತಿರುವೆ ದಯವಿಟ್ಟು ನನ್ನನ್ನು ನಿಮ್ಮ ಗೆಳೆಯನಾಗಿ ಉಳಿಸಿಕೊಂಡು ನನ್ನ ಬೆಳೆಸಿ
ಸಿದ್ದು
9945415725
ಸಿದ್ದು ಅವರಿಗೆ,
ಬಹಳ ತಕ್ಕನಾದ ಗುರುಗಳನ್ನ ಹುಡುಕಿದ್ದೀರಿ!!
ಮನಸ್ಸು ತುಂಬಿ ಬಂತು.
ನಾವೆಲ್ಲ ಬ್ಲಾಗಿಗರೂ ನಿಮಗೆ ಶುಭವನ್ನು ಹಾರಯ್ಸುತ್ತೇವೆ.
ಭಾಗವತರೇ,
ನಿಮ್ಮ ಶಿಷ್ಯಕೋಟಿಯ ಹೊಸ ಸೇರ್ಪಡೆಯನ್ನು ನೀವು ಹೇಗೆ ಉಳಿಸಿ ಬೆಳೆಸುತ್ತೀರೆಂದು ಬಗ್ಗೆ ನಾವು ಕಾತುರರಾಗಿದ್ದೇವೆ.
nimma shaili nanage harikathe nenapisutte. hosa blog mandi parichaya madsiddiri. avranna nodkond bartini.
ಸಿದ್ದು, ಗುಡ್-ಲಕ್. ನೋಡಿ ಹೆಜ್ಜೆ ಇಡಿ. ಒಳ್ಳೆಯ "ಗುರುಗಳು" ಸಿಕ್ಕಿದ್ದಾರೆ.
ಭಾಗವತರೇ ನಮಸ್ಕಾರ,
ನಿಮ್ಮ ವಾರ್ತೆಗಳನ್ನು ಕೇಳಿ ನಾನಂತೂ ದಂಗಾಗಿ ಹೋಗಿದ್ದೇನೆ. ಏನೋ ಒಂದು ಹಳೆಯ ಸಿಟ್ಟಿದೆ ಅಂತ ಹೇಳಿ ಹೀಗೆಲ್ಲಾ ಮಾಡುವುದಾ? ಹೋಗಲಿ ಬಿಡಿ, ನಿಮ್ಮ ವಿಶೇಷ ಪ್ರಕಟಣೆ ಓದಿದ ನಂತರ ನನ್ನ ಬ್ಲಾಗಿನಲ್ಲಿ ಇದ್ದ ಗುಲಾಬಿ ಗಿಡವನ್ನು ಕಿತ್ತು ಹಾಕಿ ಅಲ್ಲಿ ಒಂದು ಕೆಂಡಸಂಪಿಗೆ ಸಸಿ ನೆಡಬೇಕೆಂದಿದ್ದೇನೆ. ಸುದ್ದಿಕೊಟ್ಟವರವನ್ನೂ ಒಂದು ಮಾತು ಕೇಳಬೇಕು ಅಂತ ಕಾಯುತ್ತಿದ್ದೇನೆ.:)
ನಾನೂ ಕುಂದಾಪುರ್ದ ಹತ್ರದವ್ನೇ ಮಾರಾಯ್ರೆ. ನಿಮ್ ಬರ್ವಣಿಗೆ ಒಳ್ಳೇದಿತ್ ಕಾಣಿ.
ನಾನೊಬ್ಬ ಹೊಸ ಬ್ಲಾಗಿಗ. ನನ್ನದು http://www.ini-dani.blogspot.com/. ದಯ್ವಿಟ್ಟು ಓದಿ ವಿಮರ್ಶಿಸಿ.
hey u r becoming lazy ...hesarige update maadthaa iddeeyaa...and u blame me that i dont update regularly... baree cricket , birds anthaa roaming maadtdodu stop maadi ondu olle post haaku !! :p
Post a Comment