ನೀಕು
ಭಾಗವತರು ಬರೀ ಬೇರೆಯವರ ಕಾಲೆಳೆಯುತ್ತ ಕಾಲಹರಣ ಮಾಡುತ್ತಿದ್ದಾರೆನ್ನುವ ಗಂಭೀರ ಆಪಾದನೆಗಳು ಜಗಲಿಯನ್ನು ತಲುಪಿರುವುದರಿಂದ, ಕುಂದಗನ್ನಡದ ತರಗತಿಗಳನ್ನು ವಿದ್ಯುಕ್ತವಾಗಿ ಪುನರಾರಂಭಿಸಲು ಭಾಗವತರಿಗೆ ನಿರ್ದೇಶಿಸಲಾಗಿದೆ. ಸದರಿ ಶೈಕ್ಷಣಿಕ ವರ್ಷದ ವಿದ್ಯಾರ್ಥಿಗಳು ಈ ಕೂಡಲೇ ಗುರುದಕ್ಷಿಣೆಯನ್ನು ಶ್ರೀ ಜಗಲಿ ಭಾಗವತರ ಖಾತೆಗೆ ಮುಂಗಡವಾಗಿ ಸಂದಾಯಿಸಬೇಕೆಂದು ಈ ಮೂಲಕ ಕೇಳಿಕೊಳ್ಳಲಾಗಿದೆ.
***************************
’ನೀಕು’ = ನಿಲುಕು (ಶಿಷ್ಟ ಕನ್ನಡದ ಸಮಾನಾರ್ಥಕ ಪದ, ನನ್ನ ಊಹೆಯ ಪ್ರಕಾರ). ಇಣುಕು, ಎಟುಕು.
"ನೀನ್ ಉದ್ದ ಇದ್ಯಲೆ (ಇದೀಯಲ್ಲ). ನ್ಯಾಲೆ (clothes line) ’ನೀಕತ್ತಾ’ ಕಾಣ್".
"ಬಾಮಿ (ಬಾವಿ) ನೀಕ್ಬೆಡ ಅಂದ್ನಾ? ಹಾಂಗಾರೆ ಹೇಳದ್ದ್ ಕೇಂತಿಲ್ಯಾ?"
"ಎಂತದಾ! ಅಷ್ಟು "ನೀಕಿ" ಕಾಂಬುಕೆ (ಕಾಣ್ಲಿಕ್ಕೆ) ಎಂಥ ಮಂಗ ಕುಣಿತಾ ಇತ್ತಾ ಅಲ್ಲಿ?" - ಗುರು ಕೊಟ್ಟ ಉದಾಹರಣೆ.
"ಹ್ವಾಯ್, ಹಾ೦ಗೇ ಬ್ಲಾಗ್ ಬದಿಗ್ ಹ್ವಾಪೊತ್ತಿಗೆ (ಹೋಗುವಾಗ) ಪಟ್ಟಾ೦ಗ ಕ೦ಡ್ ಹೀ೦ಗೇ ನೀಕಿದ್ದೇ."
"ನೀವ್ ಆ ತೊಡು ಇತ್ತು-ಷೆಡ ಬಿಡ ಮಾಣಿ ಕೈಗೆ ನೀಕು ಹಾ೦ಗೆ ಹಾಲ್ಬಾಯೋ-ಅತ್ರಾಸವೊ ಇಟ್ರಾತಿಲ್ಯ ಮಾರಾಯ್ರೇ!" - ಪಯಣಿಗರ ಉದಾಹರಣೆ.
ಸುಶ್ರುತ ಕೊಟ್ಟ ಉದಾಹರಣೆ ಭಿನ್ನವಾಗಿದೆ. ಇದು ಹವ್ಯಗನ್ನಡದ ಪ್ರಯೋಗವೇ, ಇಲ್ಲ ಕುಂದಗನ್ನಡದಲ್ಲೂ ಉಪಯೋಗಿಸುತ್ತಾರಾ?
"'ನೀಕು' ಅಂದ್ರೆ ಎತ್ತಿ ಕೊಡೋದು. "ಏ ಮಾಣೀ, ಒಂಚೂರು ಬುಟ್ಟಿ ನೀಕಿ ಕೊಡಾ" ಅಂತ ಅಪ್ಪ ಹೇಳಿದ ಅಂದ್ರೆ, ಬುಟ್ಟಿಯನ್ನ ಎತ್ತಿ ತಲೆ ಮೇಲಿಟ್ಟುಕೊಳ್ಳಲಿಕ್ಕೆ ಹೆಲ್ಪ್ ಮಾಡು ಅಂತ."
ಬಾನಾಡಿಯವರ ಉದಾಹರಣೆ ನೋಡಿದ್ರೆ ತುಳು ಪ್ರಭಾವ ಹೊಂದಿದೆಯೇನೋ ಅನ್ಸತ್ತೆ. ಗೊತ್ತಿದ್ದವರು ತಿಳಿಸಿ.
'ನೀಕು’ ಅಂದ್ರೆ ನೀವು ಕೂಡ. "ಆಟಕ್ಕೆ ನೀಕು ಹೋಗ್ತೀರಾ?"
ಬೋನಸ್ ಪ್ರಶ್ನೆಗೆ ಉತ್ರ :-
"ಬಡಕಟಿ ಮಾಣಿಗೆ ಸೆಡಕಟಿ ಜಾಸ್ತಿ" ಅಂದರೆ ಜಾಸ್ತಿ ಉಟ, ತಿಂಡಿ ತಿನ್ನದ ಸಣಕಲು ಮಕ್ಕಳು ’ಆ ಐಟಮ್ ಸರಿ ಇಲ್ಲಾ, ಇದು ಸರಿ ಇಲ್ಲಾ, ಉಪ್ಪು ಕಮ್ಮಿ, ಖಾರ ಜಾಸ್ತಿ’ ಹೀಂಗೆ ಕಂಪ್ಲೇಂಟ್ ಮಾಡ್ತಾ ಇದ್ದರೆ (ಬಾಯಿಷೆಡ ಅಂತ್ಲೂ ಹೇಳ್ತಾರೆ) ಮೇಲಿನ ನಾಣ್ಣುಡಿ ಹೇಳ್ತಾರೆ! - ನೆಂಪು ಗುರು ವ್ಯಾಖ್ಯಾನ.
ಕಾಂಬ್ಕೆ ಬಡವಾಗಿದ್ದರೂ ಕೊಬ್ಬು ಜಾಸ್ತಿ - ಶಾಂತಲಾ ಭಂಡಿ ವ್ಯಾಖ್ಯಾನ.
ಮಾಣಿ ಬಡಕಟಿಯಾದ್ರೂ ಮಾತಿಗೇನೂ ಕಡಿಮೆಯಿಲ್ಲ - ನಾವಡ ಉವಾಚ :-)
’ಬಡಕಟಿ’ = ಬಡಕಲು, ’ಸೆಡಕಟಿ’ = ಸೆಡಕು (ಸಿಟ್ಟು - ಸೆಡಕು, ಸೆಡವು). ಹೆಚ್ಚಾಗಿ ಸಣ್ಣ ದೇಹದವರು ತಿಂಡಿ ತಿನ್ನುವಾಗ ವಿಪರೀತ ಬಾಯಿ ರುಚಿ ತೋರಿಸಿದಾಗ, ಇಲ್ಲ ಹಠಮಾರಿಯಂತೆ ವರ್ತಿಸುವಾಗ ಇದನ್ನು ಪ್ರಯೋಗಿಸ್ತಾರೆ.
ಇವತ್ತಿನ ಸವಾಲು :-
’ಕಟ್ಕಟ್ಲೆ’ - ಈ ಶಬ್ದದ ಅರ್ಥ ಏನು?
ಬೋನಸ್ ಪ್ರಶ್ನೆ :-
ಗೊಂಬೆಯಾಟದಲ್ಲಿ ವಿಶ್ವಪ್ರಸಿದ್ಧವಾದ ಕುಂದಾಪುರ ತಾಲೂಕಿನ ತಂಡ ಯಾವುದು?
6 comments:
ಕೊಗ್ಗಣ್ಣ ಕಾಮತರು ಗೊಂಬೆಯಾಟಕ್ಕೆ ಪರ್ಯಾಯ ಪದ.
ಕಟ್ಟು ಕಟ್ಟಲೆ !
ಎರಡೂ ಉತ್ರಗಳು ಇಲ್ಲಿ ಮುಂದಿನ ಸಾಲಲ್ಲೇ ಕೂತಾಗಿದೆ. ನಾವೇನು ಮಾಡೋದು ಭಾಗ್ವತ್ರೆ?
ಹ್ಞೂ. ನಂದೂ ಅದೇ ಪ್ರಾಬ್ಲೆಮ್ಮು ;-)
ಕಟ್ಕಟ್ಲಿ ಅಂದ್ರೆ "ಹರಕೆ" ಸಹಾ ಆತ್ತ್,- ಕಾಲಾವಧಿ ಪೂಜೆ. "ಬೊಬ್ಬರ್ಯಂಗೆ ಕಟ್ಕಟ್ಲಿ ಪೂಜೆ".
ಬಾನಾಡಿಯವರು ಹೇಳ್ದಾಂಗೆ,
ಯಕ್ಷಗಾನ ಗೊಂಬೆಯಾಟ = ಉಪ್ಪಿನಕುದ್ರು ಕಾಮತ್ರು.
ಲೇಖನ ಓದಿ, ಬಳಸಿದ ಭಾಷೆಯಿಂದ ನನ್ನ ಊರು ನೆನಪಾಯಿತು. ಈಗಲೂ ನಮ್ಮಲ್ಲಿ ಇಂಥಾ ಅನೇಕ ಪದಗಳು ಬಳಕೆಯಲ್ಲಿವೆ. ನಾನೊಬ್ಬ ಹೊಸ ಬ್ಲಾಗಿಗ, ನನ್ನದು http://www.ini-dani.blogspot.com/. ಓದಿ ವಿಮರ್ಶಿಸಿ.
Post a Comment