ನಾವಡ
’ನಾವಡ’ :-
ನಾವಡ ಪದಮೂಲದ ಬಗ್ಗೆ ಓದುಗ ಮಹಾಪ್ರಭುಗಳು ನಿರುತ್ತರರಾಗಿದ್ದಾರೆ. ಎಲ್ಲರೂ ಶಸ್ತ್ರ ತ್ಯಜಿಸಿ, ಶರಣಾಗತರಾಗಿರುವುದರಿಂದ ಭಾಗವತರೇ ಉತ್ತರಿಸುವಂತವರಾಗುತ್ತಾರಂತೆ.....
ನಾವಡ ಪದದ ಮೂಲದ ಬಗ್ಗೆ ನಾನು ಓದಿದ್ದು, ಪಾ.ವೆಂ.ಆಚಾರ್ಯರ ಪದಾರ್ಥ ಚಿಂತಾಮಣಿಯಲ್ಲಿ. ಅವರ ಪ್ರಕಾರ, ನಾವಡ ಪದದ ಮೂಲ - ’ನವ ಊಢಃ’ (ಹೊಸ ಮದುಮಗ). ಅದು ನಾವುಡ ಆಗಿ, ಈಗ ನಾವಡ ಆಗಿದೆ ಆನ್ನುವುದು ಅವರ ಅಂಬೋಣ. ಈ ಪದ ಮೂಲದ ಕುರಿತು ಬೇರೆ ವ್ಯಾಖ್ಯಾನಗಳೂ ಇರಬಹುದು. ಪಂಡಿತೋತ್ತಮರಿಗೆ ಗೊತ್ತಿದ್ದರೆ ತಿಳಿಸಿ. ನೀವು ಊಹಿಸಿರುವ ಪ್ರಕಾರ ನಾವಡ ಸರ್ನೇಮು (ಸರ್-ನೇಮ್ ಪದದ ಕನ್ನಡ ರೂಪ).
ಬೋನಸ್ ಪ್ರಶ್ನೆಗೆ ಉತ್ರ :- ದಿಕಾಳಿಂಗ ನಾವಡ. ಇವರ ಕೆಲವು ಪ್ರಸಂಗಗಳು ಇಲ್ಲಿ ಲಭ್ಯವಿದೆ. ನನಗೆ ತೀರ ಇಷ್ಟವಾದದ್ದು ಗದಾಯುದ್ಧ ಮತ್ತು ಕನಸು ಕಂಡ ಕಂಸ. ಕನಸು ಕಂಡ ಕಂಸ ಪ್ರಸಂಗದಲ್ಲಿ ಕೊನೆಯ ಇಪ್ಪತ್ತು ನಿಮಿಷದ ಹಾಡುಗಾರಿಕೆ ಚೆನ್ನಾಗಿದೆ. ಒಂದು ಸ್ಯಾಂಪಲ್ಲು -
ಧೂರ್ತ ಕಂಸನ ಹೃದಯ ಸ್ತಂಭಿಸಲು ಗೋವಳರ ವರ್ತಮಾನವ ಕೇಳಿ ಚಿತ್ತದಲಿ ಕಡುನೊಂದುವ್ಯರ್ಥಬರಿಸಿದೆಯೇಕೆಶಿವಶಿವಾ ಅದ್ಭುತವು ಪೃಥ್ವಿ ನಡುಗುತ್ತಲಿಹುದು
ಇದರ ರಾಗ ಯಾವುದು, ತಾಳ ಯಾವುದು ಗೊತ್ತಿಲ್ಲ (afterall, ನಾನು ರಾಗ-ದ್ವೇಷಗಳಿಲ್ಲದ ಸಮಚಿತ್ತದ ವ್ಯಕ್ತಿ). ಜೊತೆಗೆ ಆ delimiterಗಳನ್ನು ಮನಸೋ ಇಚ್ಛೆ ಕೊಟ್ಟಿದ್ದೇನೆ. ಮನೆಯಲ್ಲಿದ್ದ ’ಪಾರ್ತಿಸುಬ್ಬನ ಯಕ್ಷಗಾನ ಪ್ರಸಂಗಗಳು’ ಅನ್ನುವ ಹೆಬ್ಬೊತ್ತಿಗೆಯಲ್ಲೂ ಇದೇ ಥರ delimiters ನೋಡಿದ ನೆನಪು. ಅಡ್ಜಸ್ಟ್ ಮಾಡ್ಕೊಳ್ಳಿ :-)
ಇವತ್ತಿನ ಸವಾಲು :-
ಈ ಶಬ್ದದ ಅರ್ಥ ಏನು - ’ಎಡಿಯ’.
ಬೋನಸ್ ಪ್ರಶ್ನೆ :-
ಈ ನಾಣ್ಣುಡಿಯ ಅರ್ಥ ತಿಳಿಸಿ :- ’ಕಂಡ್ರ್ ಮಾಣಿ. ಉಂಡ್ರ್ ಗೋಣಿ’. ತುಂಬ ಸುಲಭದ್ದಿದು.
7 comments:
’ಎಡಿಯ’ ಶಬ್ದದ ಅರ್ಥ: "ಆಗದು".
ಉದಾ: "ನಂಗ್ ಆ ಕೆಲ್ಸ ಮಾಡುಕೆ ಎಡಿಯ...!"
"ಕಂಡ್ರ ಮಾಣಿ, ಉಂಡ್ರ ಗೋಣಿ" ನಾಣ್ಣುಡಿ ತುಂಬಾ ಸರ್ತಿ ಕೇಂಡಿದ್ದೆ ಮಾರಾಯ್ರೆ... ಅದರ ಅರ್ಥ ಹೇಳುಕೆ ಸ್ವಲ್ಪ "ತಬ್ಜೀಲು" ಅತ್ತ್! ನೀವೆ ಹೇಳಿ ಬಿಡಿ, ಆಗ್ದಾ...!!
ಕಾಳಿಂಗ ನಾವಡರ ಪದಗಳ ಮೇಲೆ ಬೆಳಕು ಚೆಲ್ಲಿ, ಪುನಃ ನೆನಪಿಸಿದ್ದಕ್ಕೆ ಧನ್ಯವಾದಗಳು... ಅವರ ಇನ್ನೊಂದು ಪ್ರಸಿದ್ಧ ಪದ " ಮಾಮರವು ಕೂಗಿದೆ... ಎಗಲೇರಿ ನಿಂತಿದೆ... ಕುಹು ಕುಹೂ... ..." ಮತ್ತೆ ಮತ್ತೆ ನೆನಪಾಗುತ್ತಿದೆ!
ಎಡಿಯ - ಅಂದ್ರೆ ಸಾಧ್ಯವಿಲ್ಲ. (ನಂ ಭಾಷೆ!)
ಕಂಡ್ರೆ ಮಾಣಿ, ಉಂಡ್ರೆ ಗೋಣಿ... :-) ಭಾಗವತ್ರೇ, ನಿಮ್ ಥರಾ ಸಣ್ಣಸಣ್ಣಗೆ ಇರುವವರು ಇಮ್ಯಾಜಿನ್ ಮಾಡ್ಲಿಕ್ಕೂ ಸಾಧ್ಯವಿಲ್ಲದಷ್ಟು ತಿಂಡಿಪೋತರಾಗಿದ್ರೆ, ಹೊಟ್ಟೆಬಾಕರಾಗಿದ್ರೆ, ಅವರನ್ನು ಹಂಗಿಸ್ಲಿಕ್ಕೆ ಈ ಗಾದೆ ಉಪಯೋಗಿಸ್ತಾರೆ...
ಎಡಿಯ ಪದದ ಅರ್ಥ, "ಉಮ್ಮ, ಎನಗೆಡಿಯ..."
"ಕಂಡ್ರೆ ಮಾಣಿ, ಉಂಡ್ರೆ ಗೋಣಿ" ಅಂದ್ರೆ ನೀನೇಯಾ? ಗೊತ್ತಿಲ್ಲಪ್ಪ.
ಕಾಳಿಂಗ ನಾವಡರ "ಮಾಮರವು ಕೂಗಿದೆ..." ನನ್ನ ತಲೆಯಲ್ಲೂ ದೀಪ ಹತ್ತಿಸಿತು. ಧನ್ಯವಾದ ಗುರು, ಹಳೆ ನೆನಪನ್ನು ಎಳೆದದ್ದಕ್ಕೆ.
ನಮಸ್ಕಾರ ಭಾಗ್ವತ್ರೇ,
ನಾವಡ ಪದದ ಬಗ್ಗೆ ಓದಿದೆ.ಸರಿಯಿದೆ.
ನಾವಡ
ಭಾಗವತರೇ,
ಬಹುಷಃ ಇಲ್ಲ್ಲಿಕಾಮೆಂಟಿಸಿದವರೆಲ್ಲಾ ನಿಮ್ಮ ಅಕ್ಕಪಕ್ಕದ ಜಿಲ್ಲೆಯವರೇ ಆಗಿರುವದರಿಂದ ಅವರೆಲ್ಲಾ ಇಷ್ಟು ಸುಲಭವಾಗಿ ಉತ್ತರಿಸುತ್ತಿದ್ದಾರೆ ಅಲ್ವಾ..
ಇರಲಿ ಬಿಡಿ...ನಾವು ಇಲ್ಲಿ ವಿದ್ಯಾರ್ಥಿಗಳು :)
ಭಾಗವತರೆ...
‘ಎಡಿಯ’ ಅಂದರೆ "ಆಗಲ್ಲ" ಅಂತಾನಾ? "ಇಷ್ಟ ಇಲ್ಲ" ಅಂತನೂ ಆಗತ್ತಾ?
"ಆಮ್ಸಾಣಿ ಜ್ಯೂಸ್ ಅಂದ್ರೆ ಎನಗೆಡಿಯ" ಅಂತ ಯಾರೋ ಹೇಳಿದ್ದು ಕೇಳಿದ ನೆನಪು ಚಿಕ್ಕಕ್ಕಿದ್ದಾಗ.
"ಕಂಡ್ರೆ ಮಾಣಿ ಉಂಡ್ರ್ ಗೋಣಿ"
ನೋಡಲಿಕ್ಕೆ ಇನ್ನೂ ಚಿಕ್ಕ ಹುಡುಗ, ಹೊಟ್ಟೆ ವಿಷಯ ಬಂದ್ರೆ ಜಾಸ್ತಿ ಬೇಕಾದ್ರೆ ಈ ಮಾತನ್ನಾ ಹೇಳ್ಬಹುದ?
ಈ ಸಲದ ಪರೀಕ್ಷೆಯಲ್ಲಿ ಪ್ರಶ್ನೆಗಳು ಹಿಂದಿನ ಸಾಲಲ್ಲಿ ಕೂತ್ಗೊಳೋ ನನ್ನಂಥವರೂ ಸುಮಾರಾಗಿ ಉತ್ತರಿಸುವ ಥರ ಇದ್ದಿದ್ರಿಂದ ಗೊತ್ತಿರೋ ಅಷ್ಟನ್ನ ಕೊಂಚವೂ ಬಿಡದೆ ಬರ್ದೆ.
ಬಂದಷ್ಟು ಮಾರ್ಕ್ಸ್ ಈಗ್ಲೇ ಬರ್ಲಿ ಅಂತ ಆಸೆ.
ನಮಸ್ಕಾರ ಭಾಗವತ್ರೇ,
ನಿಮ್ಮ ಭಾಷೆಗೆ ನಾವು ಹೊಸಬರು. ಪ್ರತಿ ಸಾರ್ತಿಯೂ ಕುತೂಹಲದಿಂದ ಓದಿಕೊಳ್ತೇನೆ.
ನಿಮ್ಮ up dates ನೋಡುತ್ತಿದ್ದೇನೆ. ಅವರ ಸ್ವಾಸ್ಥ್ಯಕ್ಕೆ ಒಂದು ಸುತ್ತು ಹೆಚ್ಚು ಜಪ ಮಾಡುವುದಷ್ಟೇ ನಾನು ಮಾಡಬಲ್ಲ ಕೆಲಸ ಅಂತ ಹೇಳಿಕೊಳ್ಳೋಕೆ ಮುಜುಗರವಾಗತ್ತೆ.
ನೆನ್ನೆಯ ಭಾನುವಾರ ಕಷ್ಟಪಟ್ಟು ಎಲ್ ಪೊಸ್ಟಿನೊ ಸಂಪಾದಿಸಿದೆ. ಮನೆ ತುಂಬ ನೆಂಟರು ತುಂಬಿಕೊಂಡರು. ನೋಡಲಿಕ್ಕಾಗಲಿಲ್ಲ. ಡಿವಿಡಿ ಕೊಂಡಿದ್ದೇನಾದ್ದರಿಂದ ಚಿಂತೆ ಇಲ್ಲ. ಯಾವಾಗಬೇಕಾದರೂ ನೋಡಬಹುದು!
- ಚೇತನಾ
Post a Comment