February 28, 2008

ಕನಸು ಕಾಣದ ಕಂದ

ಓದುಗರಿಗೆ ಸೂಚನೆ :- ಇದೊಂದು ಕಂದಪದ್ಯ*ದ ಧಾಟಿಯಲ್ಲಿರುವ ಘನಗಂಭೀರ ಕವನವಾಗಿದ್ದು, ಗಂಭೀರವಾಗಿಯೇ ಓದಿಕೊಳ್ಳತಕ್ಕದ್ದೆಂದು ಸೂಚನೆ.
**********************************

ಭಾರೀ ಜಟಾಪಟಿ ನಿನ್ನೆ ರಾತ್ರಿ,
ಇದ್ದದ್ದು ಇಬ್ಬರೇ ಇಬ್ಬರು,
ಕನಸು ಮತ್ತು ನಾನು

ಹುಯ್ಯಲಿಟ್ಟುಕೊಂಡಿದ್ದೆ ನಾನು
’ತುಂಬ ಬೋರಾಗುತ್ತಿದೆ ಕಣೋ
ಒಂದಾದರೂ ಕನಸು ಕೊಡು
ಯಾವುದಾದರೂ ಸರಿಯೇ’

’ಆಫೀಸಿನ ಕೆಂಪು ಕೆಂಪು ಆರತಿ,
ಪಕ್ಕದ ಮನೆಯ ಕೀರುತಿ,
ಅಥವಾ ಜಿ-ಟಾಕಿನ ಭಾರತಿ,
ಯಾರಾದರೂ ಸರಿಯೇ’

ನನ್ನೆದೆಯಲ್ಲಾಕೆ ಹೂತುಹೋದಂತೆ
ಬಿಸಿಯುಸಿರು ಬೆಚ್ಚಗಾಗಿಸಿದಂತೆ,
ಚಂದ ಕನಸು ಕೊಡು ಮಾರಾಯ,
ಏನಾದರೂ ಸರಿಯೇ’

ಮುಖಗಂಟಿಕ್ಕಿಕೊಂಡಿತು ಕನಸು
’ಎಲ್ಲಾರ್ಗೂ ಅದೇ ಬೇಕು ಗುರೂ,
ಸ್ಟಾಕು ಖಾಲಿ, ನಾಳೆ ನೋಡುವ,
ಅದೇನು ಲವ್ವು ಮಾಡ್ತಾರೋ ಜನ’

ಮತ್ತೆ ದುಂಬಾಲುಬಿದ್ದೆ ನಾನು,
’ಹೋಗಲಿ ಬೇರಿನ್ನಿನ್ನೇನಾದರೂ,
ಬಿಲ್ ಗೇಟ್ಸು, ಸ್ಟೀವ್ ಜಾಬ್ಸು ಥರ,
ಕೊಪ್ಪರಿಗೆ ದುಡ್ಡು ಮಾಡಿದ ಹಾಗೆ’

ಗಹಗಹಿಸಿ ನಕ್ಕಿತು ಕನಸು
’ನಿನಗೆಂಥ ಮರುಳೋ ಭಾಗ್ವತ,
ಮೊದಲೇ ಬುಕ್ ಮಾಡೊದಲ್ವಾ?
ವೈಟಿಂಗ್ ಲಿಸ್ಟಿನಲ್ಲಿದ್ದೀ ನೀನೀಗ’

ಕೆರೆದುಕೊಂಡೆ ಇದ್ದಬದ್ದ ತಲೆ
’ಏನೋ ಒಂದು ಕಣೋ, ಪ್ಲೀಸ್,
ಆಸ್ಕರ್ರು, ನೋಬೆಲ್ಲು, ವಿಂಬಲ್ಡನ್ನು,
ರೆಬೆಲ್ಲು , ಸೈನಿಕ, ಪ್ರಧಾನಮಂತ್ರಿ’

ಕುಪಿತಗೊಂಡಿತು ಕನಸು
’ನನ್ನದೇನು ಶಾಪಿಂಗ್ ಮಾಲಾ?
ನಿನಗೇ ಗೊತ್ತಿಲ್ಲ, ಏನು ಬೇಕಂತ,
ಹೋಗಿ ತೆಪ್ಪಗೆ ಬಿದ್ದುಕೋ ಸುಮ್ಮನೇ’

ಇವತ್ತೀಗ ನಾನು ಬಿದ್ದುಕೊಳ್ಳುತ್ತಿದ್ದೇನೆ,
ಇನ್ನೆರಡೇ ನಿಮಿಷ, ಮತ್ತೆ ಗೊರಕೆ.
ಆರತಿಯೂ ಇಲ್ಲ, ಕೀರುತಿಯೂ ಇಲ್ಲ...
ನನ್ನ ಬಾಸು, ಪ್ರಾಜೆಕ್ಟು...ಡೆಡ್-ಲೈನು...

*ಕಂದಪದ್ಯ = ಶಿಶುಗೀತೆ,

ಶೀರ್ಷಿಕೆ ಕೃಪೆ : - ’ಕನಸು ಕಂಡ ಕಂಸ’ ಯಕ್ಷಗಾನ ಪ್ರಸಂಗಕೃರ್ತರ ಕ್ಷಮೆಕೋರಿ.

21 comments:

ಸುಪ್ತದೀಪ್ತಿ suptadeepti said...

ಅಯ್ಯೋ, ಪಾಪ ಪಾಪ (ಕಂದ)!

ಹೋಗ್ಲಿ, ಕನಸು ಕ್ಲೂ ಕೊಟ್ಟಿದೆ ಬುಕ್ ಮಾಡು ಅಂತ; ಅದಾದ್ರೂ ಮಾಡಿದ್ಯಾ?

ಆರತಿ, ಕೀರುತಿ ಇಲ್ಲದಿದ್ರೂ ಪರವಾಗಿಲ್ಲ, ನಿಧಾನವಾಗಿಯಾದ್ರೂ ಸಿಗ್ತಾರೆ, ಮೂ (ಮಾ)ರುತಿ ಇದ್ಯಲ್ಲ; ಅಡ್ಜಸ್ಟ್ ಮಾಡ್ಕೋ.

Sushrutha Dodderi said...

ನೀ ಸಿಕ್ಕಾಪಟ್ಟೆ ಪಾಪ ಅಣ್ಣಾ..

chetana said...

ನಮಸ್ಕಾರ ಭಾಗವತರೇ,
ಭಯಂಕರ ಘನಘೋರ ಗಂಭೀರ ಕವನ ಮಾರಾಯರೇ!
ಆದರೂ ಚೆಂದ ಬಿಡಿ. ಮುಂದಿನ ಸಾರ್ತಿ ಸ್ಟಾಕ್ ಖಾಲಿ ಆಗೋ ಮೊದ್ಲೇ ಬುಕ್ ಮಾಡ್ಕೊಳ್ಳಿ.
- ಚೇತನಾ ತೀರ್ಥಹಳ್ಳಿ

Annapoorna Daithota said...

bahala chennaagide kavana....

sritri said...

ಕನಸಿಲ್ಲದ ದಾರಿಯಲ್ಲಿ ನಡೆಯೋದು ಹೇಗೆ ಕಂದ?

ವಿಕ್ರಮ ಹತ್ವಾರ said...

ನನ್ನದೇನು ಶಾಪಿಂಗ್ ಮಾಲಾ?

yaaro adu maalaa? clue kottide kanasu ;)

ಮನಸ್ವಿನಿ said...

ಆರತಿ,ಕೀರುತಿ,ಭಾರತಿ-ಯಾರು ಇವರಲ್ಲಿ ಕಾರಿ ಹೆಗ್ಗಡೆಯ ಮಗಳು?

sunaath said...

ಕನಸು ಬಾರದ ಕಂದ!
ಕವಿತೆ ತುಂಬಾ ಚಂದ!

ಶಾಂತಲಾ ಭಂಡಿ (ಸನ್ನಿಧಿ) said...

ಭಾಗವತರೆ...
ಇಂಕು ಮಸಾಲೆ ದೋಸೆ ಕೊಡಿಸಿತು ಅನಿಸುತ್ತೆ!ಆ ನಂತರದಲ್ಲಿ ತಮ್ಮ ಕವನಗಳು ಹೊರಬಂದಿರಲೇ ಇಲ್ಲ.
"ಕನಸು ಕಾಣದ ಕಂದ" ಚೆನ್ನಾಗಿದೆ.
ಹೀಗೆಯೇ ಕಾಣದ ಕನಸುಗಳಿಂದ ಕವನಗಳನ್ನ ಕರೆ ಕರೆದುತನ್ನಿ.
ಕಾಯುತ್ತಿರುತ್ತೇವೆ.
http://www.shantalabhandi.blogspot.com/

-ಶಾಂತಲಾ ಭಂಡಿ.

VENU VINOD said...

ಮುಖಗಂಟಿಕ್ಕಿಕೊಂಡಿತು ಕನಸು
’ಎಲ್ಲಾರ್ಗೂ ಅದೇ ಬೇಕು ಗುರೂ,
ಸ್ಟಾಕು ಖಾಲಿ, ನಾಳೆ ನೋಡುವ,
ಅದೇನು ಲವ್ವು ಮಾಡ್ತಾರೋ ಜನ’

ಮತ್ತೆ ದುಂಬಾಲುಬಿದ್ದೆ ನಾನು,
'ಹೋಗಲಿ ಬೇರಿನ್ನಿನ್ನೇನಾದರೂ,
ಬಿಲ್ ಗೇಟ್ಸು, ಸ್ಟೀವ್ ಜಾಬ್ಸು ಥರ,
ಕೊಪ್ಪರಿಗೆ ದುಡ್ಡು ಮಾಡಿದ ಹಾಗೆ’
...ಸುಪರ್‍ ಸಾಲುಗಳು...

Anonymous said...

ಭಾಗವತರೆ,

ಯಾವುದೋ ಸಿನಿಮಾ ಕಥೆ ತರ ಆಗ್ತಾ ಇದೆ..? ಪರ್ವಾಗಿಲ್ಲ ನಿಮಗೆ ಇಷ್ಟೊಂದು ದೊಡ್ಡ ಅಭಿಮಾನಿ ಬಳಗ ಇದೆ ಅಂತಾ ತಿಳಿದಿರ್ಲಿಲ್ಲ....

ಕನಸು ಚೆನ್ನಾಗಿದೆ, ಆರ್ತಿ, ಭಾರ್ತಿ(read it as India), ಕೀರ್ತಿ(read it as success) ಎಲ್ಲ ಸಿಗ್ಲಿ ನಿಮಗೆ...

-Veena

Anonymous said...

ವಿಕ್ರಮ್ ಹತ್ವಾರರೆ,

ಪಾಪ ಈಗ್ಲೆ ಭಾಗ್ವತರು confustion ಎಂಬ ಸುಳಿನಲ್ಲಿ ಇದ್ದಾರೆ, ನೀವು ಬೇರೆ ಮಾಲಾ ಯಾರು ಅಂತಿದ್ದೀರ?

ಹೆಗ್ಗಡೆ ಯವರು ಹೆಣ್ಣು ಕೊಡಲು ಹಿಂಜರಿಯುವುದು ಗ್ಯಾರಂಟಿ
:-)

Gubbacchi said...

ಭಾಗ್ವತ್ರೆ ಕಂದ ಪದ್ಯ ಅಂದ್ರೆ ಶಿಶುಗೀತೆಯ? ಯಾವ ಅರ್ಥದಲ್ಲಿ ??? :):D

Tina said...

JB,
ಫುಲ್ ಸೀರಿಯಸ್ ಆಗಿ ಓದಿ ಆಸ್ಪತ್ರೆಗೆ ಅಡ್ಮಿಟ್ ಆಗಿಬಿಟ್ಟಿದೇನೆ. Preparing to sue you for the damages caused!!
-ಟೀನಾ.

ಸಿಂಧು sindhu said...

ಮಸ್ತಲಾ ಭಾಗ್ವತ್ರೆ,

ಆಗಾಗ ಎಂತಕೆ ಈ ಘನಗಂಭೀರತೆ ಅಟ್ಯಾಕ್ ಆಪುದು ಹೇಳಿ?!ಗುಬ್ಬಚ್ಚಿಯ ಅನುಮಾನ ನಂದೂ ಕೂಡ, ಸ್ವಲ್ಪ ಪರಿಹರಿಸಿ.. :)

"ಕುಪಿತಗೊಂಡಿತು ಕನಸು" ತುಂಬ ಇಷ್ಟವಾಗ್ ಬಿಟ್ಟಿದೆ. ಹೋಯ್, ಕುಪಿತಗೊಂಡಿದ್ದು ಮನಸಲ್ಲ ಮತ್ತೆ. :)

ಪ್ರೀತಿಯಿಂದ
ಸಿಂಧು

Smadurk Infotech said...

Nieevu bareva reethi tumba tumba muddaagide..padagala jodane adbhutavaagide…

Nanna putaani blog

www.navilagari.wordpress.com

idakke nimma blaag rolnalli swalpa jaaga kodi:)

Nimma somu

Jagali bhaagavata said...

ಸುಪ್ತದೀಪ್ತಿ,
:-))

ಪುಟ್ಟಣ್ಣ,
ಹ್ಞೂ ಮಾರಾಯ. ನಾನು ತುಂಬ ಪಾಪದವ್ನು.

ಚೇತನ,
ನೋಡೋಣ ಏನಾಗತ್ತೆ ಅಂತ :-)

ಅನ್ನಪೂರ್ಣ,
ಧನ್ಯವಾದ.

ತುಳಸಿಯಮ್ಮ,
ಗೊತ್ತಿಲ್ಲ, ನೀವು ಹೇಳ್ಕೊಡಿ. ದೊಡ್ಡವ್ರು ಮಾರ್ಗದರ್ಶನ ಮಾಡಿ :-)

ವಿಕ್ಕಿ,
ನೀನು ಹೀಗೆ ಕ್ಯಾತೆ ತೆಗೀತ್ಯ ಅಂತ ಗೊತ್ತಿತ್ತು. ಆದ್ರೆ ಗುರು, ಲಘು, ಮಾತ್ರಾಗಣ ಅಂತೆಲ್ಲ ಗುಣಾಕಾರ ಭಾಗಾಕಾರ ಮಾಡಿ, ಛಂದೋಬದ್ಧವಾಗಿ ಬರೆದ ಕವನದ ಒಟ್ಟಂದಕ್ಕೆ ಧಕ್ಕೆಯಾದೀತೆಂದು ಬದಲಾಯಿಸ್ಲಿಲ್ಲ :-(


ಮನಸ್ವಿನಿ,
ನಿನಗೇನನ್ನಿಸ್ತದೆ? :-)


ಸುನಾಥರೇ,
ಧನ್ಯೋಸ್ಮಿ

ಶಾಂತಲಾ ಭಂಡಿ,
ಹಾಗೆಯೇ ಆಗಲಿ. ನೀವು ಕೇಳೋದು ಹೆಚ್ಚಾ? ನಾನು ಒಟ್ರಾಶಿ ಗೀಚೋದು ಹೆಚ್ಚಾ? :-)

ವೇಣು,
ಮೊದಲ ಬಾರಿ ನಿಮ್ಮ ಆಗಮನ ಇಲ್ಲಿಗೆ ಅನ್ಸತ್ತೆ. ಧನ್ಯವಾದ.

ವೀಣಾ,
ನಿಮ್ಮ ಹಾರೈಕೆಗಳಿಗೆ ಧನ್ಯವಾದ.

ವಿಕ್ಕಿಗೆ ನೀವಾದ್ರೂ ಹೇಳಿ ಅಂದ್ರೆ. ನೋಡಿ ಹೇಗೆ ಗೋಳುಹೊಯ್ದುಕೊಳ್ತಾನೆ :-)

ಗುಬ್ಬಚ್ಚಿ,
ಕಂದ ಅಂದ್ರೆ ಮಗ ಅಂತ ಅಲ್ವ? ’ಗಂಭೀರ’ ಕವನ ಅಂತ ಅಷ್ಟು ನೀಟಾಗಿ ಬರೆದ ಮೇಲೂ ಇಂತಹ ಅನುಮಾನಗಳು ಬಂದ್ರೆ ಹೇಗೆ? :-)

ಟೀನಾ,
ಪಂಚತಂತ್ರದ ಕಥೆ ಗೊತ್ತಾ? ಒಬ್ಬ ಬಡ ಬ್ರಾಹ್ಮಣ ಕಾಡಲ್ಲಿ ಹೋಗ್ತಿರ್ತಾನಂತೆ. ಹಸಿದ ಹುಲಿ ಧುತ್ತಂತ ಎದುರಿಗೆ ಬರತ್ತಂತೆ. ಆಗ ಆ ಬಡ ಬ್ರಾಹ್ಮಣ "ಹುಲಿಯಪ್ಪ, ನಂಗೆ ಏನೂ ಮಾಡಬೇಡ್ವೋ. ನಾನು ಮೂಳೆ ಮಾನವ. ನನ್ನ ತಿಂದ್ರೆ ಏನೂ ಸಿಗಾಕಿಲ್ಲ ನಿಂಗೆ. ಹಿಂದೆ ಬೋ ದೊಡ್ಡ ಆನೆ ಬರ್ತೈತೆ ನೋಡು" ಅಂತ ಹುಲಿಯನ್ನ ಒಪ್ಸಿದ್ನಂತೆ. ಹಾಗೆ....ನನ್ನಂಥ ಬಡವನ ಮೇಲೆ sue ಮಾಡಿದ್ರೆ ನಿಮಗೆ ಏನೂ ಸಿಗಾಕಿಲ್ಲ, ರೀ :-(

ಸಿಂಧು,
ಮೀನಗುಂಡಿ ಸುಬ್ರಹ್ಮಣ್ಯಂರ ’ಮನಸ್ಸು ಇಲ್ಲದ ಮಾರ್ಗ’ ಓದಿದೀರಾ? ಕನ್ನಡದಲ್ಲಿ ಮನಶ್ಯಾಸ್ತ್ರದ ಕುರಿತು ಪ್ರಕಟವಾದ ಅತ್ಯುತ್ತಮ ಪುಸ್ತಕ ಅದು. ಅವರ ಪ್ರಕಾರ ’ಮನಸ್ಸು’ ಅನ್ನುವುದೇ ಇಲ್ಲ. ಹಾಗಾಗಿ ಮನಸ್ಸು ಕುಪಿತಗೊಳ್ಳುವುದಿಲ್ಲ. ಏನಿದ್ರೂ ನಾವು ಕುಪಿತಗೊಳ್ಳುವುದು ಅಷ್ಟೆ :-)

ಸೋಮು,
ಧನ್ಯವಾದ. ನಿಮ್ಮನ್ನ ನನ್ನ hit-list ಗೆ ಸೇರ್ಸಿದ್ದೇನೆ.

ಸಿಂಧು sindhu said...

ಭಾಗ್ವತ್ರೆ,

ಓದಿದ್ದೇನ್ರಾ. ಚಂದ ಪುಸ್ತಕವೇ ಅದು.

ಹಂಗಾರೆ ಮನ್ಸಿಲ್ಲ ಅಂತಿರಾ?

ಒಳ್ಳೆ ತೊಂದ್ರಿಗೆ ಬಂತಲ್ಲಾ. ಮನ್ಸೆ ಇಲ್ದೆ ಎಂತ ಬರ್ಯದು ಭಾವುಕ ಸಾಲು ನಾನು. ಥೋ. ಮಂಡೆಬಿಸಿ ಮಾರಾಯ್ರೆ. ಬೇಸಿಗೆ ಬೇರೆ ಬಂತು.

ಎಂತರೂ ಹೇಳಿ ನೀವು. ನಿಮ್ ಜೊತೆ ಪಟ್ಟಾಂಗದಲ್ಲಿ ಕಾಲಹರಣ ಮಾಡುದೇ ಒಂದ್ ಖುಶಿ. ಈ ಮನ್ಸ್ ಗಿನ್ಸ್ ಎಲ್ಲ ಬಿಟ್ಟಾಕನಾ.

ಪ್ರೀತಿಯಿಂದ
ಸಿಂಧು

ಶಾಂತಲಾ ಭಂಡಿ (ಸನ್ನಿಧಿ) said...

ಭಾಗವತರೆ...
ಇಲ್ಲಿ ಕೇಣಿ, ನನ್ ಬ್ಲಾಗ್ ನಿಮ್ ಕಾಣ್ದೇ ಬೇಜಾರಿಂದ ಕೂಗ್ತಿತು, ಎಷ್ಟು ಗಲಾಟೆ ಮಾಡ್ತೀತ್ ಮರೆರೇ. ನಂಗ್ ಮಂಡೆಬಿಸಿ ಆಯಿ ಬ್ಲಾಗ್ ಕಟ್ಟಿ ಹಾಕಿ ಬಂದೆ.
ಒಂದ್ಸಲ ಹೋಗಿ ಕೇಣಿ ಮರೆರೆ, ಏನಾಯಿತ್ತ್ ಅಂಥೇಳಿ.


ನನ್ನ ಬ್ಲಾಗಿಗೆ ಬರಲು ಲಾಂಡ್ ಮಾರ್ಕ್:

ಪಟ್ಟಾಂಗ
|
|
_____________|
|
|
ಇನ್ನೊಂದೆರಡು
|
|
Blog Archive
|
|
About Me
|
|
ಸ್ವಲ್ಪ ಸ್ಪೆಷಲ್ಲು
|
|
ನಮ್ ಊರೋರು
|
|
ನಮ್ ಐಕ್ಳು
|
|
#ಶಾಂತಲಾ ಭಂಡಿ

Jagali bhaagavata said...

ಸಿಂಧು,

ಅದೇ.., ಸುಮ್ನೆ ಟೆನ್ಶನ್ ಎಂತಕೆ? ಪಟ್ಟಾಂಗ ಹೊಡುವ, ಕೂತ್ಕಂಡ್.

ಶಾಂತಲಾ,
ಲ್ಯಾಂಡ್-ಮಾರ್ಕ್ ಎಲ್ಲ ನೆನಪಿಟ್ಕಂಡದ್ದೇ ಬಂತ್. ಇವತ್ತಿನ ಬಸ್ ತಪ್ಪಿ ಹೋಯ್ತ್. ಇನ್ನ್ ನಾಳಿಗೆ ಆಯ್ತ್ ಅಲ್ಲಿಗೆ ಬಪ್ಪುಕಾಪ್ದು :-)

ಪೂರ್ಣ ವಿ-ರಾಮ said...

ತಮ್ಮದು ಕನಸುಗಾರನ ಕನಸು...



ತುಂಬಾ ಚೆನ್ನಾಗಿದೆ.


ಥ್ಯಾಂಕ್ಯೂ...