ಚಾಂದ್ರಾಣ
ಚಾಂದ್ರಾಣ = ರಾಡಿ, ಕಸ, ಗಲೀಜು, ಕೊಳೆ
"ಮನೆ ತುಂಬ 'ಚಾಂದ್ರಾಣ' ಮಾಡಿಯಳೀ ಮಾರಾಯ್ತಿ, ಹಿಡಿ (ಪೊರಕೆ) ತಂದು ಗುಡಿಸು ಕಾಂಬೋ. ಎಲ್ಲ ಸಾಪ್ (ಸ್ವಚ್ಛ) ಆಯ್ಕು (ಆಗಬೇಕು)ಈಗಲೇ." - ಸುನಿಲ್ ಅವರ ಅತ್ತಿಗೆ ಕೊಟ್ಟ ಉದಾಹರಣೆ.
"ಮಳಿಗೆ (ಮಳೆಗೆ) ಹಂಚ್ (ಹೆಂಚು) ಒಡ್ದೋಯಿ (ಒಡೆದುಹೋಗಿ) ಮನೆ ಎಲ್ಲ ಚಾಂದ್ರಾಣ ಆಯ್ತ್."
"ಆ ಮಾಣಿ ನೀರ್ ಚೆಲ್ಲಿ, ಮನೆ ಇಡಿ ಚಾಂದ್ರಾಣ ಮಾಡಿ ಇಟ್ಟಿತ್"
"ಬರೀ ಕಾಟ್ (ಕಾಟು) ದನ ಅದ್. ಎಷ್ಟ್ ಸರ್ತಿ ತೊಳ್ದ್ ಸಾಪ್ ಮಾಡಿ ಇಟ್ರೂ, ಮತ್ತೊಂದ್ ಕ್ಷಣದಲ್ಲ್ ಕೊಟ್ಟಿಗೆ ಇಡಿ ಚಾಂದ್ರಾಣ ಮಾಡತ್ತ್"
ಸುಮಾ ಅವರ ಅಮ್ಮ ಕುತೂಹಲಕರ ಉದಾಹರಣೆ ಕೊಟ್ಟಿದಾರೆ - "ಚಳಿಗೆ ಕಾಲೆಲ್ಲ ಒಡ್ದ್ (ಒಡೆದು) ಚಾಂದ್ರಾಣ ಆಯ್ತ್".
ಬೋನಸ್ ಪ್ರಶ್ನೆಗೆ ಉತ್ರ -
'ಏ' ಅಥ್ವಾ 'ಎ' - ಹೆಂಡತಿಯನ್ನು ಕರೆಯುವುದು :-))
ನನ್ನ ಮೇಲೆ ಸಿಟ್ಟಾಗಬೇಡಿ. ಇದರಲ್ಲಿ ನನ್ನದೇನೂ ತಪ್ಪಿಲ್ಲ. ನಾನು ನಿರಪರಾಧಿ :-)
ಈ ಮೇಲಿನ ಅರ್ಥವನ್ನು ಕೊಟ್ಟಿದ್ದು ವಿಶ್ವಂಭರ ಉಪಾಧ್ಯರು. ಅವರ ಕುಂದಗನ್ನಡ ಶಬ್ದನಿಧಿ Digital Library of India-ದಲ್ಲಿದೆ - ಇಲ್ಲಿ ನೋಡಿ. ಕೊಂಡಿ ಕಳಿಸಿದ ಸುನಿಲ್-ಗೆ ಕೃತಜ್ಞತೆಗಳು.
ಇದೇ ಅರ್ಥವನ್ನು ಬೀಚಿ ಕೂಡ ಕೊಟ್ಟಿದಾರೆ - ಇಲ್ಲಿ ನೋಡಿ :-).
ತದ್ಯಾಪ್ರತದ ಬಗ್ಗೆ ಇನ್ನೊಂದಿಷ್ಟು :-
ಕುಂದಗನ್ನಡ ಶಬ್ದನಿಧಿಯಲ್ಲೂ ತದ್ಯಾಪ್ರತ ಸಿಗಲಿಲ್ಲ. ಆದ್ರೆ ಅದನ್ನೇ ಹೋಲುವ ಶಬ್ದ - 'ತದಿಪ್ರಿತ'. ಅದರ ಅರ್ಥ - ಒಂದಕ್ಕೊಂದೂವರೆ. ಸುನಿಲ್ ಹೇಳಿದ ಹಾಗೆ 'ಅಧಿಕಪ್ರಸಂಗ' ಅನ್ನುವ ಅರ್ಥ ತುಂಬ ಹೊಂದುತ್ತದೆ. ಶಬ್ದಮೂಲದ ಬಗ್ಗೆ ನನಗೆ ಗೊತ್ತಿಲ್ಲ. ಸಂತು ಹೇಳಿದ ಹಾಗೆ ಈ ಶಬ್ದ ಸಂಸ್ಕೃತದಿಂದ ಬಂದಿರಬಹುದೇ? ಭಾಷಾಪಂಡಿತರು ಎಲ್ಲಿ?
ಇವತ್ತಿನ ಸವಾಲು -
ಈ ಶಬ್ದದ ಅರ್ಥ ಏನು - 'ಎರು'?
ಬೋನಸ್ ಪ್ರಶ್ನೆ -
ಈ ಪ್ರಾಣಿಯ ಗ್ರಂಥಸ್ಥ ಕನ್ನಡದ ಪದ ಏನು - 'ಚಣಿಲ'?
10 comments:
ಉತ್ರ ನನ್ಗ್ ಗೊತಿತು. ಬೇರೆಯವ್ರಿಗೆ ಅವಕಾಶ ಕೊಡುವ ಅಲ್ದಾ :)
'ಹಸರಣೆ'-ಇದನ್ನ ಸೆರ್ಸ್ಕಣಿ ನಿಮ್ ಪಾಠದಲ್.
ನನಗೆ ಬೋನಸ್ ಪ್ರಶ್ನೆಗೆ ಮಾತ್ರವೇ ಉತ್ತರ ಗೊತ್ತು. ಇದರ ಬಗ್ಗೆ ಒಂದು ಒಳ್ಳೆಯ ಚರ್ಚೆ ಆಗಿದೆ
ಭಾಗವತ್ರೆ,
ಅಂಗಡಿ ಬಾಗಲ್ ಪುನ: ತೆರೆದಿದ್ದಕ್ಕೆ ಧನ್ಯವಾದ.
’ಏ’ ವಿರುದ್ದ ಪದ ’ಹ್ವಾಯ್’ :)
"ಹ್ವಾಯ್, ಗದ್ದೆಗೆ ನೀರ್ ತುಂಬಿ ಅಂಚ್ ಕಡ್ದ್ ಹೋಯ್ತಂಬ್ರ್. ಹೋಯಿ ಕಟ್ಟ್ ಕಡ್ದ್ ಬನ್ನಿ ಮರಾಯ್ರೇ"
ಏರು
"ಏರು ಕಚ್ತಾ? ಅಲ್ಲ, ನಿ ಮೆಕ್ಕಿಕಟ್ಟೆ ಉರು ಕಣಗೆ ಕಣದಗೆ ನಿಂತ್ರೆ ಅದ್ ಕಚ್ದೆ ಬಿಡತ್ತಾ?" :(
’ಗಿಂಡು’ ಇದನ್ನ್ ಸಹಾ ಸೆರ್ಸ್ಕಣಿ.
ಸಂತು.
ಭಾಗ್ವತ್ರೆ, ನಿಮ್ಮ ಪದ ಯಾವುದು-- ಎರು ಅಥವಾ ಏರು?
ತುಳುವಿನ "ಎರು" ಗೊತ್ತಿದೆ. ಅದೇ ಕುಂದಗನ್ನಡದಲ್ಲೂ ಇದೆಯಾ?
"ಚಣಿಲ" ಚಂದದ ಮುದ್ದಿನ ಪ್ರಾಣಿ. ಪಾಪದ್ದು. "ಚಿಂವ್ ಚಿಂವ್" ಅಂತ ಬಾಲ ಕುಣಿಸ್ಕೊಂಡು ಮರದಲ್ಲಿ ಕಣ್ಣಾಮುಚ್ಚೇ ಆಡ್ತದೆ ನಮ್ಮೂರಲ್ಲಿ. ನಿಮ್ಮಲ್ಲಿ? ಅದರ ಕನ್ನಡ ಹೆಸರು ಇಲ್ಲಿ ಬರೆದ್ರೆ ಉಳಿದೋರು ಕಾಪಿ ಕುಡೀತಾರೆ!!??
ನಾ ತರ್ಗತಿ ಹೊರ್ಗಿಂದ ಕೂಗ್ತಿದ್ದೆ, ಇರುವೆ, ಇರುವೆ, ಇರುವೆ. ಕಾಲ್ ನೋಯಿತಪ್ಪಾ.
'ಚಣಿಲ' ಗ್ರಂಥಸ್ಥ ಕನ್ನಡದ ಪದ ಅಳಿಲು
'ಎರು' ಈ ಶಬ್ದದ ಅರ್ಥ ಇರುವೆ
"ಪೊಂಕು" ಇದನ್ನ ಸೆರ್ಸ್ಕಣಿ ನಿಮ್ ಪಾಠದಲ್.
ಭಾಗವತರೆ, ಚಾಂದ್ರಾಣ ಪದಕ್ಕೆ ಆ ಅರ್ಥ ಬರಲು ಏನಾದರೂ ಹಿನ್ನಲೆಯಿದೆಯೇ?
'ಎರು' = ’ಎತ್ತು’, ’ಎರಡು’ ಇರಬಹುದೇ?
ಪಾಠ ನಿಲ್ಲಿಸಬೇಡಿ. ಕಲಿತಿದ್ದೆಲ್ಲಾ ಮರೆತುಹೋಗತ್ತೆ ನಂಗೆ.
ನಾ ನಪಾಸು :(
ಬಾಲವಾಡಿಗೆ ವಾಪಸ್ ಹೋಗ್ತೆ
Post a Comment