November 27, 2007

ತದ್ಯಾಪ್ರತ

'ತದ್ಯಾಪ್ರತ' = ತುಂಟಾಟ, ಕೀಟಲೆ, ತರಲೆ (ಇದರ ಅರ್ಥ ನನಗೆ ಗೊತ್ತಿಲ್ಲ :-).
ಆದರೆ ಇದರ ಬಳಕೆ ಹೆಚ್ಚಾಗಿ ಮಾಡೋದು ಏನಾದರೂ ಚಿಕ್ಕ ಪುಟ್ಟ ಅನಾಹುತಕ್ಕೆಡೆ ಮಾಡುವ ಕೆಲಸಗಳಿಗೆ.

"ಬರೀ ತದ್ಯಾಪ್ರತದ ಮಾಣಿ ಅದ್. ಹೇಳದ್ದೊಂದು ಕೇಂತಿಲ್ಲ (ಕೇಳಲ್ಲ)" - ನನ್ನಮ್ಮ ಹೊಗಳ್ತಾ ಇದ್ದದ್ದು ಹೀಗೆ :-)
"ಇಕಾಣ್ (ಇಲ್ನೋಡು), ಮದಿ (ಮದುವೆ) ಮನೆಗೆ ಸುಮ್ನಿರ್ಕ್. ತದ್ಯಾಪ್ರತ ಮಾಡುಕ್ ಹೋಯ್ಬೇಡ"
"ಅಗಾಣ್ (ಅಲ್ನೋಡು), ಆ ಮಾಣಿ ಅಲ್ಲೆಂತದೊ ತದ್ಯಾಪ್ರತ ಮಾಡುಕ್ ಹೋಯಿತ್ತ್. ಈಚಿಗ್ ಕರ್ಕಂಡ್ ಬಾ ಮಾರಾಯ್ತಿ"
"ಸುಮ್ನೆ ಮನ್ಯೆಗಿಪ್ಪುದು (ಮನೆಯಲ್ಲಿರೋದು) ಬಿಟ್ಟು, ಅಲ್ಲ್ ಎದ್ಕಂಡ್ ಬಿದ್ಕಂಡ್ ತದ್ಯಾಪ್ರತ ಮಾಡ್ಕಾಂಬ್ಕೆ ಹೋದ್ದಾ (ಹೋಗಿದ್ದಾ)?"

ಬೋನಸ್ ಪ್ರಶ್ನೆಗೆ ಉತ್ರ -
ಕ್ಷಿತಿಜ ನೇಸರ ಧಾಮ ಬೈಂದೂರಿನ ಒತ್ತಿನೆಣೆಯಲ್ಲಿದೆ. ಹೆಚ್ಚಿನ ವಿವರಗಳಿಗೆ http://kaalaharana.blogspot.com/2006/05/abbigundi-falls.html ನೋಡಿ

ಇವತ್ತಿನ ಸವಾಲು :-
ಈ ಶಬ್ದದ ಅರ್ಥ ಏನು - 'ಚಾಂದ್ರಾಣ' ?

ಬೋನಸ್ ಪ್ರಶ್ನೆ :-
ಈ ಶಬ್ದವನ್ನು ಯಾರು ಯಾರನ್ನು ಕರೆಯಲು ಬಳಸುತ್ತಾರೆ - 'ಏ' ? :-))

6 comments:

Shrilatha Puthi said...

'ತದ್ಯಾಪ್ರತ’ ಅಂದ್ರೆ ಎಂತ ಅಂತ ಗೊತ್ತೇ ಆಯಿಲ್ಲೆ ಮಾರ್ರೆ! ಅಮಾಸೆಬೈಲಿಲಿಪ್ಪು ಅಕ್ಕನ್ ಮನೆಗ್ ಫೋನ್ ಮಾಡಿ ಕೇಂಡೆ, ಅವ್ರಿಗೂ ಗೊತ್ತಿರ್ಲಿಲ್ಲೆ.

’ಚಾಂದ್ರಾಣ’ ಗೊತ್ತಿತ್ತ್. ಬೇರೆಯವ್ರೂ ಸ್ವಲ್ಪ ಯೋಚ್ನೆ ಮಾಡ್ಲಿ ಅಲ್ದಾ?

ಸುನಿಲ್ ಜಯಪ್ರಕಾಶ್ said...
This comment has been removed by the author.
ಸುನಿಲ್ ಜಯಪ್ರಕಾಶ್ said...

ನಮ್ಮ ಅತ್ತಿಗೆ ಹೀಗೆ ಹೇಳಿದ್ರು. ೧ ತದ್ಯಾಪ್ರತ - ಅಧಿಕಪ್ರಸಂಗಿ

ಚಾಂದ್ರಾಣ ಅಂದರೇನು ಅಂತ ಹಿಂದಿನ ಕಾಮೆಂಟಿನಲ್ಲಿ ಹಾಕಿ ತಪ್ಪು ಮಾಡಿಬಿಟ್ಟೆ. ಹಳೆಯ ಕಾಮೆಂಟ್ ಕಿತ್ತುಹಾಕಿ, ನಮ್ಮ ಅತ್ತಿಗೆ ನೀಡಿದ ಒಂದು ಸ್ವಂತ ವಾಕ್ಯ ಹಾಕುವೆ.

"ಮನೆ ತುಂಬ ಚಾಂದ್ರಾಣ ಮಾಡಿಯಳೀ ಮಾರಾಯ್ತಿ, ಹಿಡಿ ತಂದು ಗುಡಿಸು ಕಾಂಬೋ. ಎಲ್ಲ ಸಾಪ್ ಆಯ್ಕು ಈಗಲೇ."

Vattam said...

ಏ - ಮಂಗ್ ಚೇಷ್ಟೆ ಮಾಡವ್ರಿಗ್ ಹೇಳುದಲ್ದಾ ಼

Vattam said...

ಈ ಭಾಗ್ವತ್ರ ಪಾಠ ಕೇಂಬುದಲ್ದೆ, ಫೋನ್ ಖರ್ಚ್ ಬೇರೆ.

Suma Udupa said...

Bhagavatare,
Ee salada paata swalpa kastaddu heli kottidri addilla. Tadyaptra - nan ammana bai allu kelille, appana bai allu keelille.

Chaandrana - chalige kaalella odedu chaandrana aaittu. Nan ammana chaligalada favourite vaakya.