ನನ್ನ ಕಾವ್ಯಕನ್ನಿಕೆಗೆ
ಹುಡುಗಿ,
ನಿನಗಾಗಿ ಕಾದಿದ್ದೇನೆ, ಬೇಗ ಬಂದುಬಿಡು.....
ನನ್ನ ಮುಂದಿಲ್ಲಿ ಕತ್ತಲೆ ಅಂಗಾತ ಮಲಗಿಬಿಟ್ಟಿದೆ,
ಮೇಲೆ ತಾರೆಗಳ ಜೊತೆ ಚಕ್ಕಂದವಾಡುವ ಚಂದ್ರ,
ನಾನಿಲ್ಲಿ ಒಬ್ಬನೇ ಬಿಕ್ಕುತ್ತಿದ್ದೇನೆ ಹುಡುಗಿ, ನೀನಿಲ್ಲದೇ.....
ನಿನ್ನನ್ನೊಮ್ಮೆ ನಾನು ಕಣ್ತುಂಬ ನೋಡಬೇಕು, ಹುಡುಗಿ..
ಬಂದುಬಿಡು, ನನ್ನ ತೋಳುಗಳಲ್ಲಿ ಬಂಧಿಯಾಗಿಬಿಡು...
ನೀನು, ನಿನ್ನ ಕೆಂದುಟಿಗಳು ಮತ್ತು ನಿನ್ನ ಕೋಮಲ ಹಸ್ತ.....
ಕೂತಲ್ಲಿ ಕೂರಲಾಗುತ್ತಿಲ್ಲ, ನಿಂತಲ್ಲಿ ನಿಲ್ಲಲಾಗುತ್ತಿಲ್ಲ,
ಏನೋ ಚಡಪಡಿಕೆ, ಏನೋ ಕಳೆದುಕೊಂಡಂತೆ....
ನೀನು, ನಿನ್ನ ಕುಡಿನೋಟ ಮತ್ತು ನಿನ್ನ ಚೂಪು ಮೂಗು.....
ಕವನ ಹೊಸೆಯಲೂ ಆಗುತ್ತಿಲ್ಲ ಹುಡುಗಿ, ನಿನ್ನ ನೆನಪಲ್ಲಿ,
ಸುಮ್ಮನೇ ಏನೋ ಗೀಚುತ್ತಿದ್ದೇನೆ ಬೇರೆ ದಾರಿ ಕಾಣದೆ...
ನೀನು, ನಿನ್ನ ಸ್ಪರ್ಶ, ನಿನ್ನ ನಗು ಮತ್ತು ನಿನ್ನ ಹುಸಿಗೋಪ.....
ಹುಡುಗಿ,
ನಾನೊಬ್ಬನೇ ಇಲ್ಲಿ ಬಿಕ್ಕುತ್ತಿದ್ದೇನೆ...ನನಗೆ ನೀನು ಬೇಕು ಹುಡುಗಿ....
ಎದೆ ಬಡಿತ ನಿಂತಂತಾಗಿದೆ...
ಏನೂ ತೋಚುತ್ತಿಲ್ಲ....
ಏನೂ ಕಾಣಿಸುತ್ತಿಲ್ಲ...
ಏನೂ ಗೊತ್ತಾಗುತ್ತಿಲ್ಲ......
ಇನ್ನೆರಡೇ ಎರಡು ನಿಮಿಷ....
ಹುಡುಗಿ....ನಿನ್ನ ದಮ್ಮಯ್ಯ...
ಪ್ಲೀಸ್... ನನ್ನನ್ನುಳಿಸಿಕೋ....
ಪ್ಲೀಸ್....
**********************
ಸಾರ್ವಜನಿಕರ ಅವಗಾಹನೆಗೆ :-
ಭಾಗವತರಿಗೆ ಸಕ್ಕತ್ತು ಬೋರಾಗಿ, ಮಂಡೆ ಹನ್ನೆರಡಾಣೆಯಾಗಿ, ಸುಮ್ಮನೆ ಏನೇನೋ ಗೀಚುತ್ತಿದ್ದಾರಾದ್ದರಿಂದ, ಅವರು ಗೀಚಿದ್ದನ್ನೆಲ್ಲ ಗಂಭೀರವಾಗಿ ತೆಗೆದುಕೊಂಡು, ಮಂಡೆಗೆ ಹಚ್ಚಿಕೊಂಡು, 'ಡೋಂಟ್ ವರಿ' ಮಾಡಿಕೊಳ್ಳಬಾರದಾಗಿ ಕೇಂದ್ರ ಸರ್ಕಾರವು ಸುತ್ತೋಲೆ ಹೊರಡಿಸಿದೆ :-)೦
11 comments:
ಕವನದ ಹೆಸರು ಚೆನ್ನಾಗಿದೆ...
ಕವನವೂ ಅಚ್ಚುಕಟ್ಟಾಗಿದೆ...
"ಕಾವ್ಯ" ಒಲಿದಂತಿದೆ.
"ಕನ್ನಿಕೆ"ಯನ್ನು ಹುಡುಕಿ ಒಲಿಸಿಕೊಳ್ಳಿ.
'ನನ್ನ ಮುಂದಿಲ್ಲಿ ಕತ್ತಲೆ ಅಂಗಾತ ಮಲಗಿಬಿಟ್ಟಿದೆ'
ವಾಹ್ ವಾಹ್
ಕಾವ್ಯಕನ್ನಿಕೆ ಕೂಡ ಡೋಂಟ್ ವರಿ ಮಾಡಿಕೊಳ್ಳಬಾರದು :)
ಭಾಗವತರನ್ನು ICUನಲ್ಲಿ ಇರಿಸಲಾಗಿದೆ. ಮುಂದಿನ ಕವನವನ್ನು ಅಲ್ಲಿಂದಲೇ ಬರೆದು ಕಳಿಸುತ್ತಾರೆಂದು ನಿರೀಕ್ಷಿಸಲಾಗುತ್ತಿದೆ. ಕಾವ್ಯ ಕನ್ನಿಕೆಯರಿಗೆ ಬಿಗಿ ಭದ್ರತೆ ಒದಗಿಸಲಾಗಿದೆ.
"ಡೋಂಟ್ ವರಿ ಮಾಡ್ಕೋಬೇಡಿ..." double negetive makes one positive...! ಅಂದರೆ ಸಾರ್ವಜನಿಕರು ಕೂಡಾ ಮಂಡೆಬೆಚ್ಚ ಮಾಡಬೇಕಾಗಿ ಸೂಚನೆಯೇ? ಎಷ್ಟು ಮಂಡೆಬಿಸಿ ಮಾಡಬಹುದು? ಜಗಲಿ ಎಷ್ಟು ಬಿಸಿ ತಡೆಯತ್ತೆ?
ಭಾಗವತರೇ.....
ಏನ್ರೀ ಆಯ್ತು ನಿಮಗೇ...?
ಕವನ ಚೆನ್ನಾಗಿದೆ.
ಆದರೆ ನೀವೇ ಯಾಕೋ ವಿರಹ ವೇದನೆಯಲ್ಲಿ ತೊಳಲಾಡ್ತಾ.....ಇರೋ ಹಾಗಿದೆ. ಕಾವ್ಯಕನ್ನಿಕೆಯನ್ನ ಹುಡುಕಿ ಕರ್ಕೊಂಡು ಬನ್ನಿ ಬೇಗ. ಎಲ್ಲಾ ಸರಿ ಹೋಗುತ್ತೆ.
ಆದ್ರೆ ಆಗ ಇಷ್ಟು ಒಳ್ಳೆ ಕವನ ಬರೋದು ಕಷ್ಟವಾಗಬಹುದು. ಏನಂತೀರಾ?
ಗೊತ್ತಾಯ್ತು ಭಾಗ್ವತ್ರೇ,
ನಾವು ಇತ್ತ ಕಡೆ ತಲೆ ಹಾಕದಿದ್ರೆ ನೀವು ಏನೋ ಅನಾಹುತ ಮಾಡ್ಕೋತೀರಿ ಅಂತ... ಅದ್ಕೆ... ಓಡೋಡಿ ಬರುವಾಗ ತಡವಾಯಿತು...
ಭಾಗವತರಿಗೆ ಕಾವ್ಯ ಕನ್ನಿಕೆಯ ಇಂಟೆನ್ಸಿವ್ ಕೇರ್ ಅಗತ್ಯವಿದೆ.... ಯಾರಾದ್ರೂ ಬನ್ನಿಯಪ್ಪಾ.... ಲಬೋ.... ಲಬೋ....
ಭಾಗ್ವತ ಅಂಕಲ್ ನಿಮ್ ಪದ್ಯ ಓದಿ ಪಾಪ ಅನ್ನುಸ್ತು ಕಾವ್ಯ ಆಂಟಿ, ಕನ್ನಿಕಾ ಆಂಟಿ ಇಬ್ರೂ ಬೇಗ್ ಸಿಗ್ತಾರೆ ಅಳಬೇಡಿ...ನನ್ ಗೊಂಬೆ ಚಾಕೇತು ಅಲ್ಲಿ ತಂಕ ತೊಗೊಳಿ... -ಅಮ್ಮು
ಸುಪ್ತದೀಪ್ತಿ,
ಹಾಗೆ ಮಾಡುವಂತವನಾಗುತ್ತೇನೆ :-)
'ಡೋಂಟ್ ವರಿ' ಮಾಡಿಕೊಳ್ಳುವ ಪ್ರಯೋಗ ನಿಮಗೆ ಗೊತ್ತಿಲ್ಲ ಅಂತ ಆಯ್ತು :-)
ವಿಕ್ಕಿ,
ಕಾವ್ಯಕನ್ನಿಕೆ 'ಡೋಂಟ್ ವರಿ' ಮಾಡ್ಕೊಳ್ಳಿಕ್ಕೆ ಇದನ್ನ ಓದಿದ್ರೆ ತಾನೆ?
ತುಳಸಿಯಮ್ಮ,
ಈ ವಿಚಾರವನ್ನು ಗೋಪ್ಯವಾಗಿರಿಸಿದ್ದೆವು. ಈ ಮಾಹಿತಿ ನಿಮಗೆ ಸಿಕ್ಕಿದ್ದು ಹೇಗೆ?
ಶಾಂತಲಾ,
ನೀವು ಹೇಳೋದು ಸರಿ ಅನ್ಸತ್ತೆ. ಕಾವ್ಯಕನ್ನಿಕೆ ಅಕಸ್ಮಾತ್ ಸಿಕ್ಕಿಬಿಟ್ರೆ, ಇಂತಹ ಉತೃಷ್ಟ ಮಟ್ಟದ ಕವನಗಳು ಕನ್ನಡ ಸಾಹಿತ್ಯಕ್ಕೆ ದಕ್ಕದೆಹೋಗಬಹುದು :-)
ಅನ್ವೇಷಿಗಳೆ,
ನೀವು ಹಾಗೆ ಬೊಬ್ಬೆ ಹೊಡೆದ್ರೆ ಯಾರು ಬರಲ್ಲ ಮಾರಾಯ್ರೇ. ನೀವು ಯಾವಾಗ್ಲೂ ಸುಳ್ಳು ಹೇಳ್ತೀರಿ ಅಂತ ಎಲ್ಲ ಅಂದ್ಕೊಂಡಿದ್ದಾರೆ.:-)
ಅಮ್ಮು,
ಮಾರಾಯ, ನಾನು ಅಂಕಲ್ ಅಲ್ವೋ. ಭಾಗ್ವತಣ್ಣ ಅಂತ ಕರಿಯೋ ಪುಣ್ಯಾತ್ಮ:-). ನಿನ್ ಗೊಂಬೆ ಚಾಕೇತು ಕೊದು ಬೇಗ :-) ಮುಂದಿನ್ ಸರ್ತಿ ಬಾಕ್ಸಿಂಗ್ ಆದುವಾಗ ಅಮ್ಮಂಗೊಂದ್ ಸರೀಯಾಗಿ ಪಂಚ್ ಕೊದು. ಹೇಗೆ ಅಂತ ಬೇಕಿದ್ರೆ ನಾನ್ ಹೇಳ್ಕೊಡ್ತೀನಿ :-)
ಎಲ್ರೂ ಕೇಳ್ರಪ್ಪಾ! ಭಾಗವತರು ಕಾಣೆಯಾಗಿದ್ದಾರೆ. ಕಾವ್ಯಕನ್ನಿಕೆ ಸಿಕ್ಕಿರುವಳೇನೋ ಅನ್ನುವ ಗುಮಾನಿ. ನಿಖರ ವಿವರಕ್ಕಾಗಿ ಭಾಗವತರನ್ನೇ (ಹೇಗಾದರೂ) ಸಂಪರ್ಕಿಸಿ....
ಸುಪ್ತದೀಪ್ತಿ,
ಸುಮ್ಮನೇ ವದಂತಿಗಳನ್ನು ಹಬ್ಬಿಸುತ್ತೀರಲ್ಲ?? ಛೇ, ನನ್ನ ಅಭಿಮಾನಿನಿಯರು ಅದೆಷ್ಟು ನೊಂದುಕೊಂಡರೋ ಏನೋ? :-) ನೋಡಿ, ನಾನು ಮತ್ತೆ ಪ್ರತ್ಯಕ್ಷ :-)
ಈ ಸರ್ತಿ ಯಾಕೋ ಭಾಗವತರು ಪೂರ್ತಿ ಕಳೆದುಹೋಗಿದಾರೆ ಅನಿಸುತ್ತೆ.... ದಮಯ್ಯ..ಜಪಯ್ಯ..ಅಂತಿರೋದು ನೋಡಿದರೆ ವಿಷಯ ಸ್ಪಲ್ಪ ಗಂಭ್ಹೀರ ಆಗಿರಬಹುದು?
Post a Comment