November 18, 2007

ಪುಕ್ಕಟೆ ಸಿಕ್ಕಿದ ಮಸಾಲೆದೋಸೆ!!!

ಅಲವತ್ತುಕೊಳ್ಳುತ್ತಿತ್ತು,
ಲೇಖನಿಯ ಮಸಿ ಇವತ್ತು....

ಬಿಟ್ಟುಬಿಡು ಮಾರಾಯ ನನ್ನ ಹೊರಗೆ,
ಸಾಕಾಗಿ ಹೋಗಿದೆ ಕೂತು ಒಳಗೆ,
ಗಾಳಿಯಿಲ್ಲ, ಬೆಳಕೂ ಇಲ್ಲ, ಜೊತೆಗೆ
ಕೂತು ಮಾತಾಡಿಸುವವರೂ ಇಲ್ಲ,

ಮಾರಾಯ, ಸ್ವಾತಂತ್ರ್ಯ ಕೊಡು ನನಗೆ,
ಕಾಲುಸೋತಿದೆ ಚಕ್ಕಳಮಕ್ಕಳ ಹಾಕಿ ಕೂತು,
ಉಸಿರುಕಟ್ಟುತ್ತಿದೆ ಒಬ್ಬನೇ ಕೂತು ಕೂತು,
ಹೊಡೆದು ಬರುವೆನು ಒಂದು ರೌಂಡ್ ಬೀಟು

ನೋಡು, ನೀನೂ ಸುಮ್ಮನೇ ಇದ್ದಿ,
ಏನೂ ಗೀಚಿಯೇ ಇಲ್ಲ ಬ್ಲಾಗಿನಲ್ಲೂ,
ಮಾತಾಡಿಸಿ ಬರುವೆ ನಿನ್ನ ಓದುಗರನ್ನ,
ಬಿಟ್ಟುಬಿಡು ಮಾರಾಯ ನನ್ನ ಹೊರಗೆ,

ಲೋ ಭಾಗವತ, ನನ್ನ ಮಾತು ಕೇಳೋ ಮಾರಾಯ,
ಕೂಡಿಹಾಕಬೇಡವೋ ನನ್ನ ಹೀಗೆ ಒಳಗೆ, ಪುಕ್ಕಟೆ
ಮಸಾಲೆದೋಸೆ ಕೊಡಿಸುತ್ತೇನೋ ನಿನಗೆ ಪುಣ್ಯಾತ್ಮ,
ದಯವಿಟ್ಟು ಬಿಟ್ಟುಬಿಡು ಮಾರಾಯ ನನ್ನ ಹೊರಗೆ,

ಅಲವತ್ತುಕೊಳ್ಳುತ್ತಿತ್ತು,
ಲೇಖನಿಯ ಮಸಿ ಇವತ್ತು....

18 comments:

Unknown said...

:)), ಹ್ಮ.....pen ink'ge kUDA gottAgibiTTide nODi, nimma masAledOseya mElina prIti. aShTu iShTAnA masAledOse aMdre? :)

ಶಾಂತಲಾ ಭಂಡಿ (ಸನ್ನಿಧಿ) said...

ಭಾಗವತರೇ,
ಪೆನ್ನಿನ ಮಸಿಯನ್ನೂ ಮಾತಾಡಿಸುವ ನಿಮ್ಮ ಚಾತುರ್ಯಕ್ಕೆ ಏನೆಂದು ಹೇಳಲಿ?
ಯಾವ ವಸ್ತುವಿನ ಎಳೆಯನ್ನು ಬೇಕಾದರೂ ಇಟ್ಟುಕೊಂಡು ಕವಿತೆ ಹೊಸೆದು ಬಿಡುತ್ತೀರಲ್ಲಾ!
ಎಲ್ಲ ಯುವಬರಹಗಾರರಿಗೆ ನೀವು ಬರೆಯಲು ಪ್ರೋತ್ಸಾಹ ಕೊಡುತ್ತೀರಲ್ಲಾ, ಹಾಗೆ ಎಲ್ಲ ವಸ್ತುಗಳೂ ತಮ್ಮನ್ನು ಕವಿತೆ ಮಾಡೆಂದು ನಿಮಗೆ ಉತ್ತೇಜನ ಕೊಡುತ್ತಿವೆ ಅನಿಸುತ್ತಿದೆ.

sritri said...

ಲೇಖನಿಯ ಮಸಿ ಅಲವತ್ತುಕೊಳ್ಳುವ ಕಾಲ ಮುಗೀತಲ್ವಾ? ಈಗೇನಿದ್ರೂ ಕೀಬೋರ್ಡ್ ತಲೆ ಕುಟ್ಟಿಕೊಳ್ಳುವ ಕಾಲ ಭಾಗವತ್ರೆ.

ಈ ಕವನ ನಿಜವಾಗಲೂ ಚೆನ್ನಾಗಿದೆ. ಈ ರೀತಿಯ ಕವನ ಬರೆದರೆ ನಮ್ಮ-ನಿಮ್ಮ ಆರೋಗ್ಯಕ್ಕೆ ಒಳ್ಳೆಯದು.

ವಿಕ್ರಮ ಹತ್ವಾರ said...

:) :)

Keep Going Keep Going

Sushrutha Dodderi said...

ಮತ್ತಿನ್ನೇನ್ ಮಾಡುತ್ತೆ ಪೆನ್ನಾದ್ರೂ! ಅದಾದ್ರೂ ಎಷ್ಟು ದಿನಾಂತ ಸಹಿಸೊತ್ತೆ! ಹೆಂಡ್ತಿ ಆಗಿದಿದ್ರೆ ಇಷ್ಟೊತ್ತಿಗೆ ಡೈವೋರ್ಸ್ ಕೊಟ್ಟಿರೋಳು! :O

ಆದ್ರೂ ಇಂಕು ತಾನು ಹೊರಬರುವ ದಾರಿಯನ್ನು ತಾನೇ ಕಂಡುಕೊಂಡಿದ್ದು ಮಾತ್ರ ಭಾಳಾ ಖುಷಿ ವಿಷ್ಯ. ಭಾಗ್ವತ್ರಿಗಿಂತ ಅವ್ರ ಪೆನ್ನೇ ಹೆಚ್ಗೆ ಬುದ್ವಂತೆ ಅಂತ ಆಯ್ತು!! :P

Jagali bhaagavata said...

ಅಮರ,
ಹೌದು, ಮಸಾಲೆದೋಸೆ ಅಂದ್ರೆ ಅಷ್ಟು ಪ್ರೀತಿ. ಕೊಡಿಸ್ತೀರಾ? :-)

ಶಾಂತಲಾ,
ಥ್ಯಾಂಕ್ಸು :-)

ತುಳಸಿಯಮ್ಮ,
ನಿಮ್ಮ 'ಉಚಿತ' ಆರೋಗ್ಯ ಸಲಹೆಯನ್ನು ಗಂಭೀರವಾಗಿ ಪರಿಗಣಿಸುತ್ತೇವೆಂದು ಭರವಸೆಯನ್ನು ನೀಡಲಿಕ್ಕಾಗುವುದಿಲ್ಲ.:-)

ವಿಕ್ಕಿ,
ಎಂತ ಮಾರಾಯ. ಇನ್ನೂ ಸ್ವಲ್ಪ ದಿನ ಇಲ್ಲೆ ಇರೋಣ ಅಂದ್ರೆ 'ಹೋಗ್ತಿರು, ಹೋಗ್ತಿರು' ಅಂತಿದೀಯಲ್ಲ?

ಪುಟ್ಟಣ್ಣ,
"ಹೆಂಡ್ತಿ ಆಗಿದಿದ್ರೆ ಇಷ್ಟೊತ್ತಿಗೆ ಡೈವೋರ್ಸ್ ಕೊಟ್ಟಿರೋಳು"....ಹೆಂಡ್ತಿಯರು ಹೇಗೆ ಆಡ್ತಾರೆ ಅಂತ ನಿನ್ನಷ್ಟು ಅನುಭವವಿಲ್ಲ ಮಾರಾಯ :-))

"ಭಾಗ್ವತ್ರಿಗಿಂತ ಅವ್ರ ಪೆನ್ನೇ ಹೆಚ್ಗೆ ಬುದ್ವಂತ ಅಂತ ಆಯ್ತು!!"....ಹೌದು ಅನ್ನಿಸ್ತಿದೆ ನನಗೆ. ಇನ್ನು ನಾನು ಹುಷಾರಾಗಿರ್ಬೇಕು ಮಾರಾಯ :-)

Shiv said...

ಭಾಗವತರೇ,

ಪ್ರತಿಸಲನೂ ನಿಮಗೆ ನಿಮ್ಮ ಲೇಖನಿಯ ಮಸಿ, ದೋಸೆ ಕೊಡಿಸುತ್ತಿದ್ದರೆ, ಆ ಮಸಾಲೆ ದೋಸೆ ಹೋಟೆಲ್‍ನವರು ಹಣ ಎಣಿಸುತ್ತ ,ನಿಮ್ಮ ಲೇಖನಿಯ ಮಸಿಯನ್ನು ಮನದಲ್ಲೇ ಮನಿಸುತ್ತಿರಬಹುದು !

ಮನಸ್ವಿನಿ said...

ಯಾವುದಾದ್ರು ಒಳ್ಳೆ ಡಾಕ್ಟರ್ ಹತ್ರ ಆದಷ್ಟು ಬೇಗ ಚೆಕ್ ಅಪ್ ಮಾಡಿಸ್ಕೋ :)

ಸುಧನ್ವಾ ದೇರಾಜೆ. said...

hi, thank u boss.

ಸುಪ್ತದೀಪ್ತಿ suptadeepti said...

ಜಗಲಿಯಲ್ಲಿ ಪೆನ್ನು/ಇಂಕು ದೋಸೆ ಕೊಡಿಸತ್ವೆ ಅಂತ ಸುದ್ದಿ ಹರಡಿದೆ. ಹಾಗಾದ್ರೂ ಯಾರಾದ್ರೂ ಕನ್ನಿಕೆಯರು ಬರುತ್ತಾರೋ ಏನೋ, ಕಾದು ನೋಡೋಣ!!

mala rao said...

pen is mightier than sword ಅಂತ ಯಾಕೆ ಹೇಳ್ತಾರೆ ಅಂತ ಈಗ ಗೊತ್ತಾಯ್ತು
ಬರೀ ಮಸಾಲೆ ದೋಸೆನೋ ಅಥ್ವಾ ದೋಸೆ ತಿಂದ ನಂತರ ಕೇಸರೀ ಭಾತ್ ,ಕಾಫೀ ಕೂಡಾ ಕೊಡಿಸುತ್ತೋ...?

Vattam said...

ಇವತ್ತಿನ ಸವಾಲು:
ಈ ಪದದ ಅರ್ಥ ಏನು - ಅಲವತ್ತು

Jagali bhaagavata said...

ಸುಪ್ತದೀಪ್ತಿ,
ಯಾವ ಕಾಲದಲ್ಲಿದ್ದೀರಿ ಮಾರಾಯ್ರೆ ನೀವು? ಮಸಾಲೆ ದೋಸೆ ಕೊಡಿಸಿ ಪಟಾಯಿಸುವ ವಿಧಾನಗಳೆಲ್ಲ ನಿಮ್ಮ ಕಾಲಕ್ಕೆ ಸರಿ. ಇವಾಗ ಕಾಲ ತುಂಬ ಮುಂದೆ ಹೋಗಿದೆ :-(

ಮಾಲಾ,
ಮಸಾಲೆ ದೋಸೆ ತಿಂದು ಹೊಟ್ಟೆ ಮತ್ತು ಮನಸ್ಸು ತೃಪ್ತಿಯಾದ ನಂತರ ಬೇರಿನ್ನೇನು ಬೇಡ :-)

ಶಾಂತಲಾ,
ಎಲ್ಲಿ ಹೋಗಿದ್ರಿ ನೀವು? ಪತ್ತೆನೆ ಇರ್ಲಿಲ್ವಲ್ಲಾ? Reviwer ಇಲ್ಲ ಅಂತ ಕ್ಲಾಸು ನಿಂತುಹೋಗಿತ್ತಂತೆ! :-)

Vattam said...

ಇದೆಂಥ "ನಿಂತುಹೋಗಿತ್ತಂತೆ" ಮರೆರೆ ಼ ನಿಮ್ಗೆ ನೆನ್ಪಿಲ್ವಾ ಼ ಮತ್ತ್ ಶುರು ಹಚ್ಕಣಿ. ನಾ ನಿಂ ಬ್ಲಾಗ್ ಒಂದ್ ಸುತ್ತ್ ಹಾಕ್ದೇ ಇರುದಿಲ್ಲ. ನೀವ್ ಕುಂದಗನ್ನಡದಲ್ಲ್ ಬರ್ದ್ರ್ ನಂಗ್ ಅರ್ಥ ಆಪುದು. ಇಷ್ಟ್ ದಿನಾ ಎಂತೆಂತದೊ ಬರೂಕ್ ಶುರು ಮಾಡಿದ್ರಿ. ಈ ಭಾಗ್ವತ್ರಿಗೆ ಎಂತ ಆಯ್ತ ಕಾಂಬೊ ಅಂತ ಒಂದ್ ಸಲ ping ಮಾಡಿದ್ದ್ ಮರೆರೆ. ನೀವ್ ಕ್ಲಾಸ್ ತಕಂಡ್ದೆ, ಕುಂದಗನ್ನಡ ಮರ್ತ್ ಹೋಪುಕ್ ಶುರು ಆಯ್ತ್.

ಸುಪ್ತದೀಪ್ತಿ suptadeepti said...

"ಯಾವ ಕಾಲದಲ್ಲಿದ್ದೀರಿ ಮಾರಾಯ್ರೆ ನೀವು? ಮಸಾಲೆ ದೋಸೆ ಕೊಡಿಸಿ ಪಟಾಯಿಸುವ ವಿಧಾನಗಳೆಲ್ಲ ನಿಮ್ಮ ಕಾಲಕ್ಕೆ ಸರಿ."-
(೧) ನಾನು ಪ್ರಸ್ತುತದಲ್ಲೇ ಇದ್ದೇನೆ, ಭೂತಕಾಲಕ್ಕೆ ಹೋಗಿಲ್ಲ ಎಂದು ಸ್ಪಷ್ಟಪಡಿಸುತ್ತೇನೆ!!
(೨) ಮಸಾಲೆ ದೋಸೆ ಇಷ್ಟೂ ಇಷ್ಟ ಪಡುವ ನೀವು ಯಾವ ಕಾಲಕ್ಕೆ ಸಲ್ಲುತ್ತೀರಿ?!?
(೩) ನೀವೂ ಪ್ರಸ್ತುತದಲ್ಲೇ ಇದ್ದೀರಾದರೆ, ನಿಮ್ಮ ಹಾಗೆಯೇ ಮಸಾಲೆ ದೋಸೆ ಇಷ್ಟ ಪಡುವ ಇತರರೂ ಇರಬಹುದು, ಅದರ ಸವಿ-ರುಚಿ-ಘಮಕ್ಕೆ ಮನಸೋತು, ನಿಮ್ಮ ಅಭಿರುಚಿ ಅವರಿಗೂ ಹಿಡಿಸಿ, ನಿಮ್ಗೆ ಒಲಿಯಬಹುದು ಅಂತ ನಾನು ಹಾರೈಸಿದ್ದು ತಪ್ಪೆ?
(೪) ನೀವು ಈ ವಾದವನ್ನು ಒಪ್ಪುವುದಿಲ್ಲವಾದರೆ, ನಿಮ್ಮ ಪ್ರಶ್ನೆ ನಿಮಗೇ ತಿರುಗುಬಾಣ- "ಯಾವ ಕಾಲದಲ್ಲಿದ್ದೀರಿ ಮಾರಾಯ್ರೆ ನೀವು?"

Jagali bhaagavata said...

ಶಾಂತಲಾ,
ಆಯ್ತು. ಹಾಗಾದ್ರೆ ಶುರು ಮಾಡುವ. ಯಾವ್ದಾದ್ರೂ ಒಳ್ಳೆ ಮುಹೂರ್ತ ಇದ್ರೆ ಹೇಳಿ. ಇನ್ನೊಬ್ರ್ reviewer-ನ್ನೂ ಕರ್ಕಂಡ್ ಬನ್ನಿ.

ಸುಪ್ತದೀಪ್ತಿ,
ನಾನು 'ಕಾಲಾತೀತ'. ಹಾಗಾಗಿ ನಿಮ್ಮ ಪ್ರಶ್ನೆಗಳು ನನಗೆ ಅನ್ವಯವಾಗುವುದಿಲ್ಲ. :-)

Shrinidhi Hande said...

ಯಾವ ಹೋಟೆಲಿನಲ್ಲಿ ಕೊಡಿಸುತ್ತ೦ತೆ ಮಸಾಲೆ ದೋಸೆ? ವಿಧ್ಯಾರ್ಥಿ ಭವನದಲ್ಲೊ ಅಥವಾ ಮಾ.ಟಿ.ರೂ (MTR) ನಲ್ಲೋ?

shashi kiran said...

Mr.Bagwath good poem, But the heading is misleading. I thought your poem deserves better title.The Pen and its frustration is a reflection of your mood wherein ur too relaxed to write.