ಬುದ್ಧಿವಂತರಿಗೆ ಮಾತ್ರ......
ಕುಕ್ಕರುಗಾಲು ಹಾಕಿ ಕುಂತಿದೆ ನಿದ್ದೆ ಬಾರದ ರಾತ್ರಿ,
ಕಥೆ ಹೇಳು ಅಂತದರ ವರಾತ....
ಹೇಳಿ ಮುಗಿಸಿದ್ದೇನೆ ತರಹೇವಾರಿ ಕಥೆಗಳನ್ನ...
ಇಗೊಳ್ಳಿ ನಿಮಗೊಂದಿಷ್ಟು ಸ್ಯಾಂಪಲ್ಲುಗಳು..
ಬಿಳಿಗುದುರೆಯೇರಿ ಬಂದು, ರಾಜಕುಮಾರಿಯನ್ನು ಸೆಳೆದೊಯ್ದ ಆ ರಾಜಕುಮಾರ,
ದಶದಿಕ್ಕುಗಳಲ್ಲೂ ದಿಗ್ವಿಜಯ ಮಾಡಿ, ಸಾಮ್ರಾಜ್ಯ ಕಟ್ಟಿದ ಆ ವೀರ ಪರಾಕ್ರಮಿ,
ಐಶ್ವರ್ಯದ ಹೊಳೆಯಲ್ಲಿ ಮಿಂದು, ತಿಂದು, ತೇಗಿದ ಆ ಬಂಗಲೆಯ ಸಾಹುಕಾರ,
ಗಂಧ, ಹಾರ, ತುರಾಯಿ, ಶಾಲಿನ ಮೇಲೆ ಶಾಲು ಪಡೆದ, ಆ ಅಸೀಮ ಬುದ್ಧಿವಂತ,
ಇದಾವುದೂ ಬೇಡವಂತೆ, ನಿದ್ದೆ ಬಾರದ ರಾತ್ರಿಗೆ...
ತಗೊಳ್ಳಪ್ಪ ಇನ್ನೊಂದಿಷ್ಟು ಪ್ರತಿಮೆಗಳು...
ಧಡಲ್ಲಂತ ಗುದ್ದಿದ ಬಸ್ಸಿನ ಹೊಡೆತಕ್ಕೆ, ತುಂಡಾಗಿ, ವಿಲಿವಿಲಿ ಒದ್ದಾಡಿದ ಆ ಕಾಲು
ನೇಣಿಗೆ ಕುತ್ತಿಗೆ ಕೊಟ್ಟ, ಕೊನೆ ಬೀದಿಯ, ಕೊನೆ ಮನೆಯ, ಆ ದಪ್ಪನೆಯ ಹೆಂಗಸು,
ನನ್ನ ಹೆಗಲ ಮೇಲೆ ಕಮಕ್-ಕಿಮಕ್ಕೆನ್ನದೆ ತುಟಿ ಪಿಟ್ಟಾಗಿಸಿ ಮಲಗಿದ್ದ ಆ ಸಾವು,
ಸರಕಾರಿ ಆಸ್ಪತ್ರೆಯಿಂದ ಹೊರಬಿದ್ದ, ಆ ಇನ್ನೊಂದು, ಗುರುತಿಸಲಾಗದ ಆ ಹೆಣ......
ನಿದ್ದೆ ಹೋಗಬೇಕಂತೆ ರಾತ್ರಿಗೆ ಈಗ....
ತುಂಡರಿಸಿದ ಆ ಕಾಲು ನರ್ತಿಸುವ ಮುನ್ನ,
ಆ ದಪ್ಪನೆಯ ಹೆಂಗಸು ಗಹಗಹಿಸುವ ಮುನ್ನ,
ಆ ಸಾವು ಎಚ್ಚರಾಗಿ ಕೆನ್ನೆ ಸವರುವ ಮುನ್ನ,
ಆ ಹೆಣ ನಸುನಕ್ಕು ಕಣ್ಣು ಹೊಡೆಯುವ ಮುನ್ನ...
ಶ್ಯ್!!! ಸದ್ದು ಮಾಡಬೇಡಿ....
ನಿದ್ದೆ ಹೋಗಬೇಕಂತೆ ರಾತ್ರಿಗೆ ಈಗ.....
14 comments:
ರಾಜಕುಮಾರನನ್ನು ಸೆಳೆದೊಯ್ದ ಆ ರಾಜಕುಮಾರಿ ??
ಈ ಚರಣದಲ್ಲಿ ಪ್ರಥಮ ಸಾಲನ್ನು ಬಿಟ್ಟು ಎಲ್ಲ ಸಾಲುಗಳಲ್ಲು ಪುಲ್ಲಿಂಗ ಕಾಣುತ್ತಿದೆ :)
humhhhhhh... Too much high for me to understand hidden meanings :)
Anyways , how did this poetic mood surface ?
Very Meaning full Poem..
Way of telling is very nice.
Keep it up
Malli
www.nannahaadu.blogspot.com
hmm chennagide... aadre poem title naa "buddhivantarige maatra" anta kottidre mattoo chennagirtittu :D ;-)
(nange poem artha agirodrindra :))
"ಆ ಹೆಣ ನಸುನಕ್ಕು ಕಣ್ಣು ಹೊಡೆಯುವ ಮುನ್ನ..." huh!
ಗುಬ್ಬಚ್ಚಿ,
ಆಯ್ತು. ನಿಮ್ಮ ಅಹವಾಲನ್ನು ಮನ್ನಿಸಲಾಗಿದೆ. ಸರಿ ಮಾಡಿದ್ಡೇನೆ ನೋಡಿ:-)
ಮರುಹುಟ್ಟು,
ಕವನದ ಶೀರ್ಷಿಕೆ ಓದದೇ ಇದ್ರೆ ಇದೇ ಆಗೋದು:-)
ಕಾವ್ಯಕನ್ನಿಕೆಯರು ಸಿಗದಿದ್ದರಿಂದ ಈ ವ್ಯತಿರಿಕ್ತ ಪರಿಣಾಮ. ಕವನ ಗೀಚುವ ಗೀಳು ಬಂದಿದೆ:-))
ನನ್ನ ಹಾಡು,
ಕವನ ಮೆಚ್ಚಿಕೊಂಡಿದ್ದಕ್ಕೆ ಕೃತಜ್ಞತೆಗಳು.
ಶ್ಯಾಮಾ,
ನಿನ್ನ ಅಹವಾಲನ್ನೂ ಮನ್ನಿಸಲಾಗಿದೆ:-)
ಸುಶ್ರುತ,
ಯಾವತ್ತೂ ಆ ಅನುಭವ ಆಗಿಲ್ವ?:-))
ಚೆನ್ನಾಗಿದೆ,
ನಂಗೆ ಅರ್ಥ ಆಗ್ಲಿಲ್ಲಾ.... :-)
ಆ ರಾತ್ರಿ ತುಂಬಾ ಕರಾಳಾನಾ ಅನಿಸ್ತು. ಒಳ್ಳೊಳ್ಳೆ ಕಥೆ ಹೇಳಿದ್ರೆ ಅದಿಕ್ಕೆ ಇಷ್ಟ ಆಗ್ಲಿಲ್ವಲ್ಲಾ. :-)
ಆದ್ರೂ ಶೈಲಿ ಇಷ್ಟ ಆಯ್ತು.
ಭಾಗವತರ ಜಗಲಿಗೆ ಪಟ್ಟಾಂಗ ಹೊಡೆಯುವಾ ಅಂತ ಪುರಸೊತ್ತಾಗಿ ಬಂದ್ರೆ .....!!
sritri said...
ಭಾಗವತರ ಜಗಲಿಗೆ ಪಟ್ಟಾಂಗ ಹೊಡೆಯುವಾ ಅಂತ ಪುರಸೊತ್ತಾಗಿ ಬಂದ್ರೆ .....!!
ಭಾಗವತರು ರಾಜಕುಮಾರಿಯನ್ನು ರಾಜಕುಮಾರ ಮಾಡೋದರಲ್ಲಿ busy!!
sritri said...
ಭಾಗವತರ ಜಗಲಿಗೆ ಪಟ್ಟಾಂಗ ಹೊಡೆಯುವಾ ಅಂತ ಪುರಸೊತ್ತಾಗಿ ಬಂದ್ರೆ .....!!
suptadeepti said...
ಭಾಗವತರು ರಾಜಕುಮಾರಿಯನ್ನು ರಾಜಕುಮಾರ ಮಾಡೋದರಲ್ಲಿ busy!!
ಕಥಾನಾಯಕಿಗೆ ಪುರುಸೊತ್ತಿಲ್ಲ ಅಂತ ಭಾಗವತ್ರದ್ದು ಈ ತರದ ಕೆಲಸವೇ! ಕಷ್ಟ ಕಷ್ಟ, ಕಲಿಗಾಲ !!!! ಭಾಗವತ್ರೇ, ರಾಜಕುಮಾರರನ್ನು ರಾಜಕುಮಾರಿಯರಾಗಿ ಮಾಡಿದ್ರೆ ನಿಮಗೆ ಪ್ರಯೋಜನ...ಉಳ್ಟಾ ಕೆಲ್ಸ ಮಾಡ್ಬೇಡಿ.
ಏನೂ ಅರ್ಥ ಆಗ್ಲಿಲ್ಲ..
ಟೈಟಲ್ ನೋಡಿಯೇ ಅರ್ಥ ಮಾಡ್ಕೊಳ್ಳುವ ಕಷ್ಟದ ಕೆಲ್ಸಕ್ಕೆ ಕೈ ಹಾಕ್ಲಿಲ್ಲ!
ps: ನೀವು ಮತ್ತೆ ಉಪೇಂದ್ರ ಒಂದೇ ಊರಿನವ್ರಾ?
Shrilatha Putthi said...
ಏನೂ ಅರ್ಥ ಆಗ್ಲಿಲ್ಲ..
ps: ನೀವು ಮತ್ತೆ ಉಪೇಂದ್ರ ಒಂದೇ ಊರಿನವ್ರಾ?
ಇಲ್ಲ ಶ್ರೀಲತ... ಆದ್ರೆ ಭಾಗವತ್ರು ಉಪೇಂದ್ರನ ಖಾಸಾ ಶಿಷ್ಯ ಅಂತ ನನ್ನ ಗುಮಾನಿ...!?
ಶಾಂತಲಾ,
"ಚೆನ್ನಾಗಿದೆ, ನಂಗೆ ಅರ್ಥ ಆಗ್ಲಿಲ್ಲಾ.... :-)"
ಎಂತ ಮಾರಾಯ್ರೇ, ನಿಮಗೆ ಆರ್ಥ ಆಗದ್ದರಿಂದ ಚೆನ್ನಾಗಿದೆ ಅಂತಾನಾ? :-))
ಮತ್ತೆ, ಕಾವ್ಯಕನ್ನಿಕೆಯನ್ನು ಕಳೆದುಕೊಂಡರೆ ಪ್ರತಿ ರಾತ್ರಿಯೂ ಕರಾಳ ರಾತ್ರಿಯೇ :-))
ತುಳಸಿಯಮ್ಮ,
ಹ್ವಾಯ್, ರಾತ್ರಿ ಮನಿಕಂಡಿತ್ತ್. ಶಬ್ದ ಮಾಡ್ಬೇಡಿ ಕಾಂಬೊ :-)
ಸುಪ್ತದೀಪ್ತಿ,
ಸದ್ಯಕ್ಕೆ ನಮ್ಮ ಗಮನ ಏನಿದ್ರೂ ರಾಜಕುಮಾರಿ ಮೇಲೆ :-)
ಮನಸ್ವಿನಿ,
"...ಕಷ್ಟ ಕಷ್ಟ, ಕಲಿಗಾಲ !!!! ..."
ಹ್ಞೂ....ಏನ್ ಮಾಡ್ತೀಯಾ...ಈಗ ಕಲಿಗಾಲ. ಏನಿದ್ರೂ ನಿಮ್ ಕಾಲಾನೇ ಚೆನ್ನಾಗಿತ್ತು, ಅಲ್ವಾ? :-)
ಶ್ರೀಲತಾ,
ನಾನು ಮತ್ತು ಉಪೇಂದ್ರ ಒಂದೇ ತಾಲೂಕಿನವ್ರು :-)
ಆದ್ರೆ, ಈ ರೀತಿಯ ಉತೃಷ್ಟ ಮಟ್ಟದ ಕವನವನ್ನು ಆಸ್ವಾದಿಸುತ್ತಿರುವಾಗ, ವೈಯಕ್ತಿಕ ಪ್ರಶ್ನೆಗಳನ್ನು ಕೇಳುವುದರಿಂದ ರಸಭಂಗವಾಗುವುದಿಲ್ಲವೇ ? :-)
ಚಂದಮಾಮ ಕತೆಗಳು+ ಕ್ರೈಮ್ ಡೈರಿ ಮಿಕ್ಸ್ ಮಾಡಿದ ಹಾಗಿದೆ :)
ಮತ್ತೆ ಇನ್ಮೇಲೆ ರಾತ್ರಿಗೆ ನಿದ್ದೆ ಬರದಿದ್ದರೆ ಕೇಳಿ !
Post a Comment