March 26, 2007

ಮೇನತ್ತು

ಮೇನತ್ತು = ವಿಶೇಷ, ತುಂಬ ಮೆಹನತ್ತಿನಿಂದ ಮಾಡಿದ್ದು.
ಪ್ರಾಯಶಃ 'ಮೆಹನತ್' ಶಬ್ದ ಇದರ ಮೂಲವಾಗಿರಬಹುದು.

ಈ ಪದವನ್ನ, ನಾನು ಹೆಚ್ಚು ಕೇಳಿದ್ದು ಅಡುಗೆಮನೆಯಲ್ಲಿ:-))
'ಮಕ್ಳ್ ಬತ್ತೊ (ಬರ್ತಾರೆ). ಮೇನತ್ತ್ ಅಂದ್ಕಂಡ್ ಕೆಸಿನಸೊಪ್ಪಿನ್ ಪತ್ರೊಡೆ ಮಾಡಿದ್ದೆ'.
'ಮೇನತ್ತ್ ಅಂದ್ಕಂಡ್ ಮಾಡದ್ದೆ ಬಂತ್. ಉಪ್ಪ್ ಜಾಸ್ತಿಯಾಯಿ ಎಲ್ಲ ಪುಸ್ಕಟಿ ಆಯ್ತ್':-))
'ನೀನ್ ಮನ್ಯೆಗಿಪ್ಪುದಿಲ್ಲ ಅಂತೇಳಿ (ಅಂತ ಹೇಳಿ) ಮೇನತ್ತ್ ಅಂದ್ಕಂಡ್ ಮಾಡದ್ದ್ ಕಾಣ್. ಅದ್ ನಿಂಗ್ ಸೇರುದಿಲ್ಲ (ರುಚಿಸಲ್ವಾ), ಸುಳ್ಳಾ? ಈಗಿನ್ ಕಾಲದ್ ಮಕ್ಳಿಗೆ ಎಂತ ಮಾಡಿರೂ ತರವಾತಿಲ್ಲ.'

ಪಾ.ವೆಂ.ಆಚಾರ್ಯರ ಕಾವ್ಯನಾಮ - ಲಾಂಗೂಲಾಚಾರ್ಯ'.

ಇವತ್ತಿನ ಸವಾಲು -
ಇದರ ಅರ್ಥ ಏನು - 'ಗಂಟಿ' (ತುಂಬ ಸುಲಭದ ಸವಾಲು).

ಬೋನಸ್ ಪ್ರಶ್ನೆ -
'ನೆನಪಿನಂಗಳದಲ್ಲಿ ಮುಸ್ಸಂಜೆ ಹೊತ್ತು' - ಇದು ಯಾರ ಜೀವನಚರಿತ್ರೆ?

7 comments:

Anveshi said...

ಮನ್ಯೆಗಿಪ್ಪುದಿಲ್ಲ ಅಂದ್ರೆ ಮೇನತ್ ಯಾಕ್ ಮಾಡೇಕು???

ಗಂಟಿ ಅಂದ್ರೆ....
ತುಳುವಿನಲ್ಲಿ ಗಂಡು ಬೆಕ್ಕಿಗೆ ಗಂಟ ಪುಚ್ಚೆ ಅಂತಾರೆ....
ಹಾಗಾಗಿ ಹೆಣ್ಣು ಬೆಕ್ಕಿಗೆ ಗಂಟಿ ಅಂತ ಇಡೋಣ.

ಹೋಗ್ಲಿ ಬಿಡಿ, ಈ ಬೆಕ್ಕುಗಳಿಗೆ "ಗಂಟಿ" ಕಟ್ಟೋರು ಯಾರು?

ಬೋನಸ್ ಪ್ರಶ್ನೆಗೆ ಉತ್ತರ:
"ನಾನಲ್ಲ".

ಸುಪ್ತದೀಪ್ತಿ suptadeepti said...

ಜಗಳ 'ಗಂಟಿ'ಯೋ ಗಿಡ-'ಗಂಟಿ'ಯೋ? ಯಾವ ಗಂಟಿ ಬೇಕಿತ್ತು ಗಂಟು ಹಾಕಕ್ಕೆ, ಅಥವಾ ಗಂಟೆ ಕಟ್ಲಿಕ್ಕೆ?

ಮನಸ್ವಿನಿ said...

ಗಂಟಿ ಮೇಸಲಿಕ್ಕೆ ಹೋಗೊ ಮಾಣಿ :)

ಕುಂದಾಪುರ ಭಾಷಾ ಪಂಡಿತರ ಹತ್ರ ಕೇಳ್ಕೊಂಡು ಬಂದಿದ್ದೇನೆ...ಸರಿನಾ?

Shiv said...

ಭಾಗವತರೇ,

ಎಂಥ ಮೇನತ್ತ್ ಮಾಡಿದ್ರೂ ಬೋನಸ್ ಪ್ರಶ್ನಿಗೆ ಉತ್ತರ ಕಾಣೇ..

ಗಂಟಿ as in ಗಿಡ-ಗಂಟೆ?

Sushrutha Dodderi said...

ಮನಸ್ವಿನಿ ಹೇಳಿದ್ದು ಕರೆಕ್ಟಿದ್ದು.

Vattam said...

ಕೋ.ಲ.ಕಾರಂತ - ಇವ್ರ್ ತೋಟ ಲೈಕಿತ್ತಂಬ್ರ್

Santhu said...

ಭಾಗವತರೆ,

ಘನಾ ಬ್ಲಾಗ್ ಬೆಚ್ಕಂಡಿರಿ ಮರ್ರೆ.

ಇನ್ನು ನಿಮ್ಮ ಪ್ರಶ್ನೆಗೆ ಉತ್ತರ,

ಗಂಟಿ = ದನ, ಎಮ್ಮೆ, ಎತ್ತು, ಹೋರಿ (Live stock, ನಾಯಿ, ಬೆಕ್ಕುಗಳನ್ನು ಬಿಟ್ಟು)

ಅದ್ ಸರಿ, ಹುಂಜ, ಹೈಡಿಗಳ ಗುಂಪಿಗೆ (flock) ಎಂತ ಅಂತ್ರು ಅಂದೇಳಿ ಹಂಬಲಾತಿಲ್ಲ ಮರ್ರೆ.

೪ನೇ ಕ್ಲಾಸ್ ಫ಼ೆಲಾ? ನೀ "ಗಂಟಿ ಮೇಸುಕೆ" ಹೋಪುದ್ ಓಳ್ಳೆದ್.

ಸಂತು.