March 1, 2007

ಅಟ್ರಕಾಣಿ

'ಅಟ್ರಕಾಣಿ' = ಕಳಪೆ, ಕೀಳು ದರ್ಜೆ
ಮೂಲ ಗೊತ್ತಿಲ್ಲ. ಬೇರೆ ಅರ್ಥ ಇದ್ರೆ ತಿಳಿಸಿ.

ಭಾಗವತ್ರು 'ಅಟ್ರಕಾಣಿ' ಜನ ಅಲ್ಲ. ಮಸ್ತ್ ಒಳ್ಳೆ ಜನ ಅವ್ರ್. ಏನಂತ್ರಿ ಅಸತ್ಯಿಗಳೆ?:-)
"ಕೆಲ್ಸ ಮಾಡಿರೆ (ಮಾಡಿದ್ರೆ) ಲೈಕ್ ಮಾಡಿ ಮಾಡ್ಕ್. 'ಅಟ್ರಕಾಣಿ' ಕೆಲ್ಸ ಮಾಡುಕಾಗ"
ಇವತ್ತ್ ಬರುಕೆ (ಬರೆಯಲಿಕ್ಕೆ) ಮಂಡಿಗೆ ಎಂತದೂ ಹೊಳಿತಿಲ್ಲ. ಇದ್ 'ಅಟ್ರಕಾಣಿ' ಪೋಸ್ಟ್ ಆಯ್ತ್:-((

'ಅಟ್ರಕಾಣಿ'ಗೆ ಮೋಸ ಎನ್ನುವ ಅರ್ಥವೂ ಇದೆಯ ಅಂತ ಅನಿಸ್ತಿದೆ. ಸರಿ ಗೊತ್ತಿಲ್ಲ. Reviewers ಮತ್ತೆ inspector ಅಟ್ರಕಾಣಿಯ ಅಲ್ದಾ ಕಾಂಬ:-)

ಇವತ್ತಿನ ಸವಾಲು-
ಇದರ ಅರ್ಥ ಏನು - 'ಹಂಬಕ'?

ಬೋನಸ್ ಪ್ರಶ್ನೆ -
ಇದ್ರಲ್ಲಿ ಯಾವ್ದು ಸರಿ - 'ಅಡಿಗರು' ಅಥವ 'ಅಡಿಗಳು'?

6 comments:

Gubbacchi said...

ಅಟ್ರಕಾಣಿ ನಾ ಕೇಣ್ಲಿಲ್ಲ ಮೊದ್ಲು...

ಎಂತ ಭಾಗ್ವತ್ರೆ ಬುಡಕ್ಕೆ ಇಟ್ರ್ಯಲೆ...

Vattam said...

ಮೊದ್ಲು ಬೋನಸ್ ಪ್ರಶ್ನೆಗೆ ಉತ್ತರ


ಅಡಿಗಳು


"ಹಂಬಕ", ಅಂದಾಜ್ ಮಾಡ್ಕಂಡ್ ಹೇಳುದಾದ್ರೆ, ಆಂಗ್ಲದ humbug ನಿಂದ derive ಆಗಿರ್ಬೋದ್. impostor/fraud/ಮೋಸ ಅರ್ಥ ಇರ್ಬೋದ್. ಭಾಗ್ವತ್ರ್ ಸ ಎಂತದೊ Reviewers ಮತ್ತ್ Inspector ಬಗ್ಗೆ ಅಟ್ಟ್ರಕಾಣಿ/ಮೋಸ ಅಭಿಪ್ರಾಯ ಪಟ್ಟಂಗಿತ್ತ್, ಎಂತ ಭಾಗ್ವತ್ರೆ ?????

sritri said...

ಇದ್ರಲ್ಲಿ ಯಾವ್ದು ಸರಿ - 'ಅಡಿಗರು' ಅಥವ 'ಅಡಿಗಳು'?

-- ಎರಡೂ ಸರಿ. ಆದರೆ ಅಡಿಗರನ್ನು ಆಡಿಗಳು ಅನ್ನೋದು ಮಾತ್ರ ಸರಿಯಲ್ಲ :-)

Anveshi said...

ಭಾಗ್ವತ್ರು ಅಟ್ರಕಾಣಿ ಜನ ಅಲ್ಲ ಮಾರಾಯ್ರೆ
(ಹಾಗ)ಅಂತ ಯಾರು ಹೇಳಿದ್ರು??? :)

ಮಂಡಿಗೆ ಹೊಳೀದಿದ್ರೆ, (ಮನಸ್ಸಿನಲ್ಲೇ) ಮಂಡಿಗೆ ಮೆಲ್ಲಿರಿ ಅಂತ ಉಚಿತ ಸಲಹೆ. ಸಂಡಿಗೇನೂ ಆಗುತ್ತೆ.

ಅಡಿಗೆ ಬಿದ್ದೋರು ಮತ್ತು ಅಡಿಯಾಳುಗಳು ಗೊತ್ತು.
ಈ ಎರಡು ಹೊಸ ಶಬ್ದಗಳು ಯಾವುವು?? ಯಾವ ಅಪಾರ್ಥಕೋಶದಲ್ಲೂ ಇಲ್ಲ:(

ಅನೂಜ್ಞಾ said...

ಕುಂದಾಪುರದವಳಾದ್ರು ನಂಗೆ ಅಟ್ರಕಾಣಿ ಪದ ಕೇಂಡೇ ಇರ್ಲಿಲ್ಲ. ಅಡಿಗರು ಎನ್ನುವ ಪದ ಸರಿ. ಆದ್ರೆ ಮಾತನಾಡುವಾಗ ಅಡಿಗಳು ಅಂತ short ಆಗಿ ಹೇಳ್ತಾರೆ.

Suma Udupa said...

Attrakaani - nan ammana favorite pada. appa mast duddu kottu tanda saamanina bele onde maatolage 'astu dud kott hengidoddu attrakaani hidkond bandiddru' and heeli mugsi bittlu ... :)