ಮಾರುವೇಷದಲ್ಲಿ ಬ್ಲಾಗ್ ಸಂಚಾರ
ಇವತ್ತು ಸುಮ್ಮನೆ ಒಂದು ಬ್ಲಾಗು ಪ್ರದಕ್ಷಿಣೆ. ಸೋಂಬೇರಿ ಭಾಗವತರಿಗೆ ಬರೆಯಲು ಬೇರೇನೂ ತೋಚುತ್ತಿಲ್ಲವಾದ್ದರಿಂದ ಓದುಗ ದೊರೆಗಳು ಇದನ್ನೋದಿ ಸಿಟ್ಟಾಗದೆ ಭಾಗವತರನ್ನು ಮನ್ನಿಸಬೇಕಾಗಿ ವಿನಂತಿ.
ಬೇಂದ್ರೆಯಜ್ಜನ ಕವಿತೆಗಳನ್ನು ನಾವೆಲ್ಲರೂ ಓದಿಯೇ ಇದ್ದೇವೆ. ಅವರ ಕುರಿತು ಸ್ವಲ್ಪ ಹೆಚ್ಚು ತಿಳಿದುಕೊಳ್ಳಬೇಕೆಂದರೆ ಇಲ್ಲಿಗೆ ಭೇಟಿ ಕೊಡಿ. ಇದು ನಮ್ಮ ಕಾಕಾ ಬರೀತಾ ಇರೋ ಬ್ಲಾಗ್. ಓದಿ ಇಷ್ಟವಾದ್ರೆ ಕಾಮೆಂಟಿಸಿ, ಖುಶಿಯಾಗಿ ಇನ್ನಷ್ಟು ಬರೀತಾರೆ:-)
ನಮ್ಮ ಗಮನ ಸೆಳೆದ ಇನ್ನೊಂದು ಬ್ಲಾಗ್ ಇಲ್ಲಿದೆ. ಆರು ಮಂದಿ ಕುರುಡರ ಕಥೆ ಗೊತ್ತಾ ನಿಮಗೆ? ಗೊತ್ತಿಲ್ಲದಿದ್ದಲ್ಲಿ ಒಮ್ಮೆ ಇಲ್ಲಿಗೆ ಭೇಟಿ ಕೊಡುವುದು ಒಳ್ಳೆಯದು.
ನಮ್ಮೂರಿನವರೊಬ್ರು ಈಗಷ್ಟೆ ಬ್ಲಾಗ್ ಪ್ರಪಂಚಕ್ಕೆ ಕಾಲಿಟ್ಟಿದ್ದಾರೆ. ಬ್ಲಾಗ್ ಟ್ರಾಫಿಕ್ ನೋಡಿ ಸ್ವಲ್ಪ ಅಳುಕಿನಿಂದಲೆ ಆರಂಭಿಸಿದ್ದಾರೆ. ಓದುಗರು ಕಾಮೆಂಟಿಸಿ, ಕೈ ಕೊಟ್ಟು, ಅಂದ್ರೆ ಪ್ರೋತ್ಸಾಹ ಕೊಟ್ಟು ಆಚೆದಡ ಸೇರಿಸ್ಬೇಕಂತ ಅವರ ವಿನಂತಿ.
ಇಲ್ಲಿಗೆ ಸೋಂಬೇರಿ ಭಾಗವತರ ಈ ದಿನ ಸಮಾಪ್ತಿಯಾಯಿತು.
4 comments:
ಸೋಂಬೇರಿ ಭಾಗವತರು ಸೋಂಬೇರಿತನ ಬಿಟ್ಟು ಬ್ಲಾಗ್ ಲೋಕ ರೌಂಡ್-ಅಪ್ ಮಾಡಿ ಒಳ್ಳೇ ಒಳನೋಟ ಕೊಟ್ಟಿದ್ದಾರೆ. ಅದಕ್ಕೆ ಏನು ಕೊಡೋದು ನಿಮಗೆ?
ಭಾಗವತರೇ ನಿಮ್ಮ ಬರಹಗಳು ತುಂಬಾ ಖುಷಿ ಕೊಡುತ್ತವೆ. ನಿಮ್ಮ ಪದ್ಯಗಳನ್ನು ಹಾಡ್ಲಿಕ್ಕೆ ಕಾಳಿಂಗ ನಾವುಡರು ಇಲ್ಲ ಅನ್ನೋದೆ ಕೊರಗು.
’ಪಾರಿಜಾತ’ಕ್ಕೆ ಮಾರ್ಗ ತೋರಿದ್ದಕ್ಕೆ ಧನ್ಯವಾದಗಳು.
ನಿನ್ನ ’ನಾಂದಿಪದ್ಯ:ಕರುಣಾಳು ಬಾ ಬೆಳಕೆ...’ಸೊಗಸಾಗಿದೆ. ನಿನಗೂ ಸಹ ಬೆಳಕು ಕಾಣಿಸಲಿ, ಮಗೂ!
-ಸುನಾಥ ಕಾಕಾ
ಸುಪ್ತದೀಪ್ತಿ,
ಭಾಗವತರನ್ನು ಬಲ್ಲವರಾಗಿದ್ದೂ ಈ ಪ್ರಶ್ನೆಯನ್ನು ಕೇಳುವುದೆ? ಮಸಾಲೆದೋಸೆ ಕೊಡಿಸಿ :-)
ವಿನಾಯಕ,
ತುಂಬ ಕೃತಜ್ಞತೆಗಳು. ಆ ಕೊರಗು ನನ್ನದೂ ಕೂಡ. ಏನು ಮಾಡೋಣ, ಕೆಲವೊಂದು ವಿಚಾರಗಳು ನಮ್ಮ ಹಿಡಿತದಲ್ಲಿರುವುದಿಲ್ಲ :-)
ಅಂದಹಾಗೆ, ನೀವು ಮೈಸೂರಿನಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡಿದವರೋ?
ಸುನಾಥರೇ,
ಧನ್ಯೋಸ್ಮಿ. ನಿಮ್ಮ ಹಾರೈಕೆ ನಮ್ಮ ಮೇಲೆ ಹೀಗೆಯೇ ಇರಲಿ.
Post a Comment