July 21, 2007

ಹರ್ಮೈಕ

ಹರ್ಮೈಕ = ರಂಗುರಂಗಾಗಿ ಮಾತಾಡೋದು, ಬಾಯಿ ಬಡುಕತನ, ಬಾಯಿ ಪಟಾಕಿ

"ಜಗಲಿ ಭಾಗವತ್ರು ಹರ್ಮೈಕ ಮಾಡುದ್ರಗೆ ನಂಬರ್ ಒಂದ್":-)
"ಹರ್ಮೈಕ ಮಾಡುಕ್ ಹೇಳ್. ಕೆಲ್ಸ ಮಾಡ್ ಅಂದ್ರ್ ಎಡಿತಿಲ್ಲ (ಆಗಲ್ಲ)"
"ಅವ್ಳ್ ಹರ್ಮೈಕ್-ವೇ!!! ಅಬ್ಬಬ್ಬಬ್ಬಬಾ":-)
"ನಿನ್ ಹರ್ಮೈಕ ಸಾಕ್. ನಿಂಗ್ ಎಂತ ಬೇಕ್ ಹೇಳ್. ನಂಗ್ ಬೇರೆ ಕೆಲ್ಸ ಇತ್ತ್"

ನನ್ನ ಗ್ರಹಿಕೆಯ ಪ್ರಕಾರ 'ಹರ್ಮೈಕ'ದ ಮೂಲ 'ಹರಿಮಾಯಿಕ'. ಸರಿ ಗೊತ್ತಿಲ್ಲ. ಆದರೆ ವೈದೇಹಿಯವರ ಕಥೆಯೊಂದರಲ್ಲಿ ಆ ಶಬ್ದ ಓದಿದ ನೆನಪು. ಹರಿ + ಮಾಯಿಕ (ಮಾಯೆ) ಇರಬಹುದು. ನಮ್ಮಲ್ಲಿ ಇದೇ ತೆರನಾದ ಇನ್ನೊಂದು ಶಬ್ದ - 'ವಿಷ್ಣುಮಾಯೆ'. ಆದರೆ ಈ ಶಬ್ದ ಬಳಕೆಯಾಗುವುದು 'ಪವಾಡ'ದ ಅರ್ಥದಲ್ಲಿ.

ಹವ್ಯಕರ ಮನೆಯಲ್ಲಿ "ಆಸ್ರಿಗ್ ಬೇಕಾ?" ಅಂತ ಕೇಳಿದ್ರೆ ನಮ್ಮಲ್ಲಿ "ಗಂಗೋದ್ಕ ಬೇಕಾ" ಅಂತ ಕೇಳ್ತಾರೆ. ಶ್ರೀಲತಾಗೆ ಪೂರ್ತಿ ಅಂಕ:-))
ಗಂಗೋದ್ಕ = ಗಂಗೋದಕ = ಗಂಗ + ಉದಕ (ನೀರು) (ಗುಣ ಸಂಧಿ?)

ಇವತ್ತಿನ ಸವಾಲು :-
ಈ ಶಬ್ದದ ಅರ್ಥ ಏನು - 'ಬೈಸರ್ತಿಗೆ'?

ಬೋನಸ್ ಸವಾಲು:-
'ಕುಜ' ಕಾದಂಬರಿ ಕರ್ತೃ ಯಾರು?

9 comments:

Shree said...

ಬೈಸರ್ತಿಗೆ ಅಂದ್ರೆ, ಬೈಸಾರಿ = ಸಂಜೆಯಾ?

sritri said...

ಕುಜ - ಜಿ.ಕೆ.ಐತಾಳರದು (ನೀವು ಓದಿದ್ದೀರಾ ಭಾಗವತರೇ?"

ಬೈಸರ್ತಿಗೆ - ಸಾಯಂಕಾಲ

Jagali bhaagavata said...

ಶ್ರೀಗೆ ಅರ್ಧ ಅಂಕ.

ತುಳಸಿಯಮ್ಮ,
ಎರಡೂ ಉತ್ರ ಸರಿ. ಇದೇ ಮೊದಲ್ನೇ ಬಾರಿ ಅನ್ಸತ್ತೆ, ನಿಮಗೆ ಪೂರ್ತಿ ಅಂಕ ಸಿಗ್ತಾ ಇರೋದು:-)) ಅಭಿನಂದನೆಗಳು:-))

ನಾನು 'ಕುಜ' ಕಾದಂಬರಿ ಓದಿದ್ದೇನೆ. ಅದೂ ಜಿ.ಕೆ.ಐತಾಳರೇ ಕೊಟ್ಟ ಬಿಟ್ಟಿ ಪ್ರತಿ:-))

ವಿಕ್ರಮ ಹತ್ವಾರ said...

ಮಿನುಗುತಾರೆ ಕಲ್ಪನ, ಆರ್.ಟಿ. ರಮಾ ಮಾತಾಡುವ ಶೈಲಿಗೂ ಹರ್ಮೈಕ ಅಂತಾರೆ ಅಲ್ದೇ......ವಾಯಾರ ಮಾಡಿಕೊಂಡು, ರಾಗವಾಗಿ ಮಾತಾಡುವುದು?

reborn said...

Anyways my aanswer is also same ..By the way which G K Aithal are you talking about ????

Shree said...

ದಕ್ಷಿಣೆಯ ಬಗ್ಗೆ ಚಿಂತೆ ಮಾಡದಿರಿ ಭಾಗವತ್ರೆ, ಪಾಠ ಮುಂದುವರಿಸಿ :)

Anusha Vikas said...

sounds like a harikathe! good anyways..
I mean, in the positive sense actually..

-----------------------------------
The first website to do English-kannada transliteration with Engish words options. No caps worries.
Really cool!
http://quillpad.in/kannada/

ನಂದಕಿಶೋರ said...

ಗಂಗೋದಕ ಅಂತ ನಾವು ಹೇಳುದು ಕಡೆಗಳಿಗೆಯಲ್ಲಿ ಬಾಯಿಗೆ ಬಿಡುವ ನೀರಿಗೆ! ಸೋ, ನಾವೆಲ್ಲಾದ್ರೂ ನಿಮ್ ಕಡೆಗೆ ಬಂದ್ರೆ ಗಂಗೋದ್ಕ ಕೇಳುವ ಮೊದ್ಲು ಸ್ವಲ್ಪ ಜಾಗಿರ್ತೆ ಮಾಡಿ ಆಯ್ತಾ :)

’ಹರಿ ಮಾಯಿಕ’ ಅಂತ ಹೇಳಿಕೊಂಡು ನೀವೂ ಮಾಯ್ಕ ಆದ್ದಾ ಮಾರ್ರೆ. ಪುನಾ ಯಾವತ್ತು ಬರುವ ನಾವು ಜಗಲಿಗೆ, ಹೇಳಿ?

Shiv said...

ಜ.ಭಾಗವತರೇ !
ಎನ್ರೀ ಇದು ಇಷ್ಟು ಸುಲಭದ ಪ್ರಶ್ನೆ ಕೇಳಿಬಿಟ್ಟಿದೀರಾ..
ಬೈಸರ್ತಿ ಬರೋದರಲ್ಲೇ ಅದರ ಅರ್ಥ ಗೊತ್ತಾಗಿಬಿಟ್ಟಿತ್ತು..