July 7, 2007

ಬೇಕಾಗಿದ್ದಾರೆ!!!

ಇವತ್ತು ಜಾಲತಾಣದಲ್ಲಿ ಹೀಗೆ ಒಂದ್ ರೌಂಡ್ ಬೀಟ್ ಹೊಡೀತಾ ಇದ್ದೆ. ಗೆಳೆಯನೊಬ್ಬನ ಕರುಣಾಜನಕ, ಹೃದಯವಿದ್ರಾವಕ ಕಥೆಯನ್ನೋದಿ, ಕುರುಕ್ಷೇತ್ರ ಪ್ರಸಂಗದಲ್ಲಿ ದುರ್ಯೋಧನನಿಗಾದಂತೆ, 'ಸಂತಾಪದಿ, ತನ್ನಯ ಮನದಿ ಮರುಗಿ' ಈ ಪೋಸ್ಟ್ ಬರೆಯುತ್ತಿದ್ದೇನೆ:-))

ಗೆಳೆಯನ 'ತುರ್ತು' ಅಗತ್ಯಗಳ ಬಗ್ಗೆ ಇಲ್ಲಿ ಓದಿ -
http://thatskannada.oneindia.in/nri/article/060707confessions-of-a-bachelor.html

ಆಸಕ್ತರು ಅರ್ಜಿ ಗುಜರಾಯಿಸಬೇಕಾದ ವಿಳಾಸ - http://hathwar.blogspot.com/

ಭಾಗ್ವತ್ರು:-))

15 comments:

Shree said...

ಬರೀ ಅವರಿವರ ಆರ್ಟಿಕಲ್ಲಿಗೆ ಲಿಂಕ್ ಕೊಟ್ಕೊಂಡು, ಅವರಿವರ ಬಗ್ಗೆ ಚಿಂತೆ ಮಾಡ್ಕೊಂಡು ದಿನ ದೂಡ್ತಿದೀರ ಭಾಗ್ವತ, ನಿಮ್ ಕ್ಲಾಸೆಲ್ಲಾ ನಿಂತ್ಹೋಯ್ತಾ? ನಿಮ್ ಚಿಂತೆಗಳೆಲ್ಲಾ ಸಾಲ್ವ್ ಆಯ್ತಾ? :-)

ಸುಪ್ತದೀಪ್ತಿ suptadeepti said...

ಈ ಲೇಖನಕ್ಕೆ ಕೊಂಡಿ ಸೇರಿಸಿದ್ದರಲ್ಲಿ ಭಾಗ್ವತ್ರ ಸ್ವಾರ್ಥ ಕೂಡಾ ಇದೆ ಅಂತ ನನ್ನ ಗುಮಾನಿ ಶ್ರೀ... ಈ ಗೆಳೆಯನ ಯೋಜನೆ ನಿರೀಕ್ಷಿಸಿದ ಫಲಿತಾಂಶ ಕೊಟ್ರೆ ತಾವೂ ಇದೇ ದಾರಿ ಹಿಡೀತಾರೆ! ಅನಿರೀಕ್ಷಿತವಾದದ್ದೇನಾದ್ರೂ ನಡೆದ್ರೆ, ಬಲಗೈಯ ತೋರುಬೆರಳು ಆಡಿಸಿಕೊಂಡು ಭಾಗವತಿಕೆ ಮಾಡ್ತಾರೆ!!

ನಂದಕಿಶೋರ said...

ಮುಂಗಾರು ಮಳೆಯನ್ನು ಯಕ್ಷಗಾನ ಪ್ರಸಂಗ ಮಾಡಿದ್ದು ನಿಮಗೂ ಪ್ರೇರಣೆ ಕೊಡ್ತಾ ಭಾಗವತ್ರೆ? ಅದೆಲ್ಲ ಬೇಡ. ಬೇಗ ನಿಮ್ದೇ ಒಂದು ಹೊಸ ಪ್ರಸಂಗಕ್ಕೆ ’ಗಜಮುಖದವಗೇ ಗಣಪಗೆ’ ಹಾಡಲು ಆರಂಭಿಸಿ. ಮಳೆಗಾಲ ಅಂತ ನಿಮ್ಮ ತಿರುಗಾಟಕ್ಕೇನೂ ರಜೆ ಕೊಡ್ಲಿಕ್ಕಾಗುದಿಲ್ಲ ;-)
ಅಥವಾ ಸುಪ್ತದೀಪ್ತಿ ಹೇಳಿದ ಹಾಗೆ ’ಮಹಾಬಲ ಪರಿಣಯ’ ಅಂತ ಪ್ರಸಂಗ ಏನಾದ್ರೂ ನಡಿಲಿಕ್ಕುಂಟಾ?

Jagali bhaagavata said...

ಶ್ರೀ,
ಕ್ಲಾಸು ಶುರು ಮಾಡ್ಬೇಕಂತಿದ್ದೇನೆ. ಆದ್ರೆ ನಿಮ್ಮಂಥ ಸ್ಟುಡೆಂಟ್-ಗಳು ನನ್ನ ಗುರುದಕ್ಷಿಣೆನೆ ಕೊಟ್ಟಿಲ್ಲ. ಭಾಗವತರು ಆರ್ಥಿಕ ಮುಗ್ಗಟ್ಟಿನಲ್ಲಿದ್ದಾರೆ:-((

ಸುಪ್ತದೀಪ್ತಿ,

"ಬಲಗೈಯ ತೋರುಬೆರಳು ಆಡಿಸಿಕೊಂಡು..."

ತಾವು ಭಾಗವತ-ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವುದು ನಮ್ಮ ಗಮನಕ್ಕೆ ಬಂದಿದೆ. ಯಕ್ಕಾಮಕ್ಕ ಒಳ್ಳೆ ಪಬ್ಲಿಕ್ ಇಮೇಜ್ ಇಟ್ಟಿರುವ ಭಾಗವತರ ತೇಜೋಭಂಗವನ್ನೇ ಗುರಿಯಾಗಿರಿಸಿಕೊಂಡು ತಾವು ಹೇಳಿಕೆಗಳನ್ನು ನೀಡುತ್ತಿರುವುದು ದುರದೃಷ್ಟಕರ ಸಂಗತಿ. ನಿಮ್ಮ ಹೇಳಿಕೆಗಳನ್ನು ಓದಿ, ಭಾಗವತರ 'ಭಾವಿ ಅಭಿಮಾನಿನಿಯರು' ತಪ್ಪು ತಿಳಿದರೆ, ಅದರ ಮುಂದಿನ ಎಲ್ಲ ಪರಿಣಾಮಗಳಿಗೂ ತಾವೇ ಜವಾಬ್ದಾರರು. ಹಿರಿಯ ನಾಗರಿಕ (senior citizen)ರಾದ ತಾವು ಭಾಗವತರಂಥ 'ಏಕಾಂಗಿ ವೀರ'ರ ಕಷ್ಟಗಳನ್ನು ಅರಿತುಕೊಳ್ಳುವಿರೆಂದು ನಾವು ಆಶಿಸುತ್ತೇವೆ.

ಮೊನ್ನೆ ತಾನೆ ಶ್ರೀ ಬರೆದಿದ್ದನ್ನು ನಾವು ಮರೆತಿಲ್ಲ..."ಒಂದು ಬೆರಳು ಬೇರೆಯವರನ್ನು ತೋರಿಸಿದರೆ, ಉಳಿದ "ಐದು (five)" ಬೆರಳುಗಳು ನಮ್ಮನ್ನೇ ತೋರಿಸುತ್ತವೆ". ದಯವಿಟ್ಟು ತಾವೂ ಇದನ್ನು ಒಮ್ಮೆ ಓದಬೇಕೆಂದು ನಮ್ರ ವಿನಂತಿ.

ಯಾತ್ರಿಕ,
ಪ್ರಸಂಗದ ಹೆಸರು ಚೆನ್ನಾಗಿದೆ. ಮೊದ್ಲು ಕೇಳಿರಲಿಲ್ಲ. ಮಹಾಬಲ ಹೆಗಡೆ ಪಾತ್ರಧಾರಿಗಳಾಗಿದ್ದರಿಂದ ಆ ಹೆಸರಾ?

ನಮ್ಮ ಪರಿಣಯ ಪ್ರಸಂಗಕ್ಕೆ ಸ್ತ್ರೀವೇಷಧಾರಿ'ಣಿ'ಯರೊಬ್ಬರನ್ನು ಹುಡುಕುತ್ತಿದ್ದೇವೆ. ನಿಮಗೆ ಗೊತ್ತಿದ್ದಲ್ಲಿ ತಿಳಿಸುವಂತವರಾಗಿ

ಜಗಲಿ ಭಾಗವತರು.

ನಂದಕಿಶೋರ said...

ಎಂತ ಭಾಗವತ್ರೆ,
ಸ್ತ್ರೀವೇಷದವ್ರು ಬೇಕಾ?

ಕೊಳ್ಯೂರು ರಾಯರು, ಮರ್ಗೋಳಿ ಸೇರಿಗಾರ್ರು, ಹೇರಂಜಾಲು ಗಾಣಿಗ್ರು ಇವರೆಲ್ಲ senior citizen ಆದ್ರು. ಅದಕ್ಕೋಸ್ಕರ ಇತ್ತೀಚೆಗಿನ ಶಶಿಕಾಂತ ಶೆಟ್ರು ಆದೀತಾ? ಅಥವಾ ಯಕ್ಷಲೋಕದ ಐಶ್ವರ್ಯ ರೈ Mr.ಯಲಗುಪ್ಪ ಹೆಗ್ಡೇರು ಆಗಬಹುದಾ ;-)

ಅಥವಾ ನಿಮ್ಗೆ ಸ್ತ್ರೀವೇಷಧಾರಿ’ಣಿ’ಯರೇ ಸಿಕ್ಕಿದ್ರು ಅಂತ ಮಾಡಿ; ಎಂತ ಪ್ರಯೋಜನ ಅದ್ರಿಂದ? ಅವರ ಕುಣಿತಕ್ಕೆ ಹಾಡುದು, ಸ್ವಗತಕ್ಕೆ
’ಹ...ಮತ್ತೆ’ ಹೇಳುದು ಮಾತ್ರ ಭಾಗವತ್ರ ಕೆಲ್ಸ ಅಲ್ದಾ? :)

minugutaare said...

yellinadalo illige bande haage summane.

ಮನಸ್ವಿನಿ said...

ಸುಪ್ತದೀಪ್ತಿಗೆ ಹಾಕಿರೊ ಅನಿಸಿಕೆಯಲ್ಲಿ "ಯಕ್ಕಾಮಕ್ಕ ಒಳ್ಳೆ ಪಬ್ಲಿಕ್ ಇಮೇಜ್ ಇಟ್ಟಿರುವ ಭಾಗವತರ " - ತುಂಬಾ ದೊಡ್ಡ ಸಂಶಯ ನಂಗೆ :))

Jagali bhaagavata said...

ಮನಸ್ವಿನಿ,

ನಿನ್ನ ಮೇಲೆ 'ಸಾರ್ವಜನಿಕ ಅಭಿಪ್ರಾಯ ನಿಂದನಾ' ಮೊಕದ್ದಮೆ ಹೂಡಬೇಕಾದೀತು...ಎಚ್ಚರ:-)

reborn said...

Is this ur new way to find some Hakki >>? I m sure.. summane friend name alli bareetheera!

Shree said...

ದಕ್ಷಿಣೆ ಕೊಟ್ಟಿದ್ದೆಲ್ಲಾ ತಿಂದು ತೇಗಿ ಆಗಿದೆ, ಇನ್ನು ಕ್ಲಾಸು ಮಾಡದೆ ಯಾವ ಸ್ಟೂಡೆಂಟೂ ದಕ್ಷಿಣೆ ಸಿಗುವುದಿಲ್ಲಾ! ಕೂತು ತಿಂಬವನಿಗೆ ಕುಡಿಕೆ ಹೊನ್ನು ಸಾಲದು ಅಂತ ಗಾದೆನೆ ಇದೆ :) ಅದ್ಸರಿ, ಯಾಕೆ ತೆಪ್ಪಗಿದ್ದಿ ಭಾಗವತ, ತುಂಬ 'ಬಿಸಿ'ಯಾ?

ಮನಸ್ವಿನಿ said...

ಭಾಗವತ,

ಕ್ಲಾಸ್ ಯಾಕೆ ನಿಂತು ಹೋಗಿದೆ? ನಿಮ್ಮಂತ ಗುರುಗಳು ಸಿಕ್ರೆ ವಿದ್ಯಾರ್ಥಿಗಳ ಗತಿ ಏನು? ನನ್ನಂತ ಡುಮುಕಿ ಹೊಡಿಯೊವ್ರಿಗಾದ್ರೆ ರಜೆ ಅಂದ್ರೆ ಖುಶಿ. ಇಲ್ಲಿ ಒಳ್ಳೆಯ ವಿದ್ಯಾರ್ಥಿಗಳು ಇದ್ದಾರೆ. ಎಲ್ಲಾರು ಸಿಟ್ಟು ಮಾಡ್ಕೊಂಡು ಕೂತಿದ್ದಾರೆ...

ದಯವಿಟ್ಟು ನಂಗೆ ಮುಂದಿನ ಕ್ಲಾಸ್ಗೆ ಕಳ್ಸಿ ಸಾರ್ :)

Santhu said...

ಭಾಗವತ್ರೇ,

ನೀವ್ ಹಿಂಗೆ ಬಾಗಲ್ ಹಾಯ್ಕಂಡ್ ಒಳ್ಗೆ ಬೆಚ್ಚಗೆ ಒಲಿ ಮುಂದ್ ಹಪ್ಪಳ ಸುಟ್ಕ್ಂಡ್ ಕೂತ್ರೆ ಹೊರಗೆ ಜಗಲಿ ಮೇಲ್ ಕೂತವ್ರ್ ಕತಿ ಎಂತ? ಈ ಆಸಾಡಿ ಒಡ್ರಿಗೆ ಜಗಲಿ ಮೇಲ್ ಕೂತವ್ರಿಗೆ ಥಂಡಿ ಹಿಡುದ್ ಅಲ್ದೆ, ನಿಮ್ ಕ್ಲಾಸ್ ಇಲ್ದೆ ತಲಿ ಸಹಾ ತುಕ್ಕ್ ಹಿಡಿತ್ತ್. ತಾಳ ತಕಂಡ್ ಹೊರಗ್ ಬನ್ನಿ ಮರ್ರೆ.

-ಸಂತು.

Jagali bhaagavata said...

ಯಾತ್ರಿಕ,
ಭಾಗವತರದ್ದು ಸೂತ್ರಧಾರರ ಕೆಲಸ. ಒಂದು ರೀತಿಯಲ್ಲಿ ಯಕ್ಷಗಾನಕ್ಕೆ ಅವರೇ ನಿರ್ದೇಶಕರು. ಸೂತ್ರಧಾರರು ಹೇಳಿದ ಹಾಗೆ ಪಾತ್ರಧಾರರು, ಪಾತ್ರಧಾರಿಣಿಯರು ಕೇಳ್ಬೇಕು:-))

ಮಿನುಗುತಾರೆ,
ಜಗಲಿಗೆ ಸ್ವಾಗತ. ಈಗಷ್ಟೇ ಬಂದಿರಿ. ಗಂಗೋದ್ಕ ಬೇಕಾ?

ಮರುಹುಟ್ಟು,
ಹಕ್ಕಿಗೆ ಗಾಳ ಹಾಕಿ ಕೂತಿದ್ದೆ ಕೂತಿದ್ದು, ಹಕ್ಕಿಗಳೆಲ್ಲ ನಮ್ಮ ಪ್ರದೇಶದಿಂದ ವಲಸೆ ಹೋಗಿಬಿಟ್ಟಿವೆ:-(( ಸದ್ಯಕ್ಕೆ ನಾನೊಬ್ನೇ ಜಗಲಿ ಮೇಲೆ ಕೂತು, ಹಾರ್ಮೋನಿಯಂ ಬಾರಿಸ್ಕೊಂಡು "ಹಕ್ಕಿ ಹಾರಿಹೋಗಿದೆ, ನೋಡಿದಿರಾ" ಅಂತ ಆಲಾಪನೆ ಮಾಡ್ತಿದ್ದೇನೆ:-((

ಶ್ರೀ,
ಹಕ್ಕಿಗಳೆಲ್ಲ ಹಾರಿಹೋಗಿದ್ದರಿಂದ 'ಬಿಸಿ'ಯಾಗಿ ಬಿಟ್ಟಿದ್ದೇನೆ:-((

ಮನಸ್ವಿನಿ,
ಕೂರಲು ಜಗಲಿಯಲ್ಲಿ ಜಾಗವಿಲ್ಲದ್ದರಿಂದ, ಕ್ಲಾಸುಗಳು 'ನಿಂತಿದೆ':-))

ಸಂತು,
ಇನ್ನೂ ಬಾಗಿಲ್ ತಾಳ ಹಾಯ್ಕಂಡಿತ್ತ್. ತಾಳ ತಕಂಡ್ ಹೊರಗ್ ಬಪ್ಪುದ್ ಹ್ಯಾಂಗೆ?

Enigma said...

illi neevu andre hudgaru antah odkolli :-D


alla ri yogya hudgi antheera aa yogya hudgige neevu yogyana antha yochne madideera?

eno bari heltheera sundaravgirbeku anthelal nimgeneu hirthik roshan body idya ? illa abhishek bacchan mukha idya elal hogli swlpa presentable look idya? hotte bandiruthe illa kudlu neritah iruthe illa kudlu irode illa athwa bayi vasane onde erade!! sumne helodu hudgeerilal antha! hudgereu idru avru swlpa nodtahre hudga henge sari idana anthella. hingella arji kardre enu upyoga illa. modlu hudgana bhava chitra amele eductaional back ground amele guna ella nodbelkallwa ?

Jagali bhaagavata said...

Enigma,

ಇಷ್ಟೆಲ್ಲ ಸೀರಿಯಸ್ಸಾಗಿ ತಗೊಂಡು, ಟೆನ್ಷನ್ ಮಾಡ್ಕೊಂಡ್ರೆ ಹೆಂಗೆ? :-)