March 18, 2007

ಟೋಪಿ

ಇದು ಹಳೆಯ ಕವನ (?). ಇವತ್ತು ಮತ್ತೆ ನೆನಪಾಯ್ತು:-))

ನಾನು ಹೋಗಿದ್ದೆ ಇವತ್ತು hair cut-ಗೆ,
ಕತ್ತರಿ ಹಿಡಿದು ಕಾದಿದ್ದಳು ತರಳೆ ಓರ್ವಳು

"ಯಾವ ಲೆವೆಲ್ ಇ-style ಬೇಕು ಭಾಗವತರೆ?",
ವಯ್ಯಾರದಿಂದ ಉಲಿದಳು ಕತ್ತರಿ ಝಳಪಿಸುತ್ತ

ಉತ್ತರಿಸಲು ಸಾಧ್ಯವೆ ಷೋಡಶಿಯ ಪ್ರಶ್ನೆಗೆ ?
ಅವಳ ಕಣ್ಣ ಮಿಂಚಿನಲ್ಲಿ ನಾ ಮುಳುಗಿರುವಾಗ?

ಶಿಸ್ತಾಗಿ ಅವಳ ಕೈಗೆ ಮಂಡೆ ಕೊಟ್ಟು ಹೇಳಿದೆ,
"ಎನೊ ಒಂದು, ಒಟ್ನಲ್ಲಿ level-ಆಗಿ cut ಮಾಡಮ್ಮ",

"ಇದು ಯಾವ ಸೀಮೆಯ ಬಕ್ರ, ವಕ್ಕರಿಸಿದ್ದಾನೆ"?
ಪಿಳಿಪಿಳಿ ಕಣ್ಣು ಬಿಟ್ಟಳು ತರುಣಿ ಅಚ್ಚರಿಯಿಂದ.

ಬಡಪಾಯಿ ಮಂಡೆ ಹಿಡಿದು ಕುಟ್ಟಿ, ತಟ್ಟಿ, ಇನ್ನೂ ಏನೇನೋ..
ಭಯವಾಯ್ತು ನನಗೆ " ಇದು hari cut-ಓ? brain wash-ಓ"?

"ಸಮಾಧಾನ ಮಹರಾಯ್ತಿ, ತೋರು ಸ್ವಲ್ಪ ಕರುಣೆ,
knowledge ಎಲ್ಲ ಮಂಡೆಯಿಂದ ಉದುರೀತು, ಜೋಪಾನ".

"ಆಯ್ತಪ್ಪ, ನೀನ್ ಹೇಳಿದಾಂಗೆ ಮಾಡುವ, ಅಕಾ?
ಬೊಬ್ಬೆ ಮಾತ್ರ ಹಾಕ್ಬೇಡ, ಕೈ ಮುಗೀತೆ ಮಾರಾಯ".

ಅಲವತ್ತುಕೊಂಡಳು ಹುಡುಗಿ, ಸುಳ್ಳು ದೈನ್ಯದಿಂದ,
ಚಿಕ್ಕ ಮಕ್ಕಳಲ್ಲಿ ಅಮ್ಮಂದಿರು sorry ಕೇಳುವ ಹಾಗೆ

ಈಗ ನಯ ನಾಜೂಕು, ತರುಣಿಯ ಲಾಸ್ಯ ಕೆಲಸಕ್ಕೆ,
ನನಗೋ ಮೈಯಲ್ಲಿ ಮಿಂಚು ಅವಳ ಪ್ರತಿ ಸ್ಪರ್ಶಕ್ಕೂ:-)

ಮಂಡೆ ಬೋಳಿಸಿ, ಎದ್ದೇಳಿಸಿ, 'ಉಸ್ಸಪ್ಪ' ಅಂದಳು ಹುಡುಗಿ,
"bill ಎಷ್ಟಾಯ್ತು" ಅಂತ purse ತಡಕಾಡಿದೆ ನಾನು

15$ hair cut, 45$ extra charge. 60$ ಒಟ್ಟಿಗೆ,
ನಿಮ್ಮ ಬೊಬ್ಬೆ ಕೇಳಿ, ಓಡಿ ಹೋಗಿದ್ದಾರೆ 3 ಗಿರಾಕಿಗಳು":-))

ಟೋಪಿ ತೆಗೆದುಕೊಂಡೆ ನನ್ನ ಬೋಳು ಮಂಡೆಗೆ
ಟೋಪಿಯೂ ಹಾಕಿದರು, ಮಂಡೆಯೂ ಬೋಳಿಸಿದರು:-))

8 comments:

ಮನಸ್ವಿನಿ said...

ಯಾರಪ್ಪ ಅದು ಅಮೇರಿಕದಲ್ಲಿ ಕತ್ತರಿ ಹಿಡ್ಕೊಂಡು ಕಸ್ತೂರಿ ಕನ್ನಡದಲ್ಲಿ ಮಾತಾಡೋಳು!

ಸರಿಯಾಯ್ತು!! :)

Phantom said...

ಭಾವತೋತ್ತಮ,

ಕತ್ತರಿ ಪ್ರಯೋಗದಿಂದ, ತಲೆ, ಜೇಬು ಎರಡು ಬೋಳಿಸಿದಳು :ಹ

ಮಜವಾಗಿದೆ ಕವನ.

ಇಂತಿ
ಭೂತ

ಸುಪ್ತದೀಪ್ತಿ suptadeepti said...

ಒಮ್ಮೆಯಾದರೂ ಬೋಳಿಸಿಕೊಂಡಾಗ ಮಾತ್ರ ಇರುವುದರ ಬೆಲೆ ಅರಿವಾಗುತ್ತದೆ ಅಂತಾರೆ, ಇನ್ನು ಇಂಥ "ಬೋಳಾಟ" ನಡೀಲಿಕ್ಕಿಲ್ಲ, ಅಲ್ವಾ?

Jagali bhaagavata said...

ಮನಸ್ವಿನಿ,
ಯಾರಪ್ಪ????? ಅವಳು ಹುಡುಗಿ ಅಂತ ಅಷ್ಟು ಚಂದ ಮಾಡಿ ಬರ್ದಿದೇನೆ....

ಭೂತಶ್ರೇಷ್ಠ,
ಕವನ ಮೆಚ್ಚಿದ್ದಕ್ಕೆ ಧ.ವಾ.ಗಳು

ಸುಪ್ತದೀಪ್ತಿ,
"ಒಮ್ಮೆಯಾದರೂ ಬೋಳಿಸಿಕೊಂಡಾಗ ಮಾತ್ರ ಇರುವುದರ ಬೆಲೆ ಅರಿವಾಗುತ್ತದೆ". ಹೌದು. ತಲೆಗೂದಲಿನ ಮಹತ್ವ ಈಗ ಅರಿವಾಗಿದೆ. ನಾನು ಇನ್ನು ಮುಂದೆ ತಲೆಕ್ಷೌರ ಮಾಡಿಸಿಕೊಳ್ಳಬಾರದು ಅಂತ ನಿರ್ಧರಿಸಿದ್ದೇನೆ:-))

ಸುಪ್ತದೀಪ್ತಿ suptadeepti said...

ಭಾಗವತರ ಜುಟ್ಟಿಗೆ ಮಲ್ಲಿಗೆ ಮುಡಿಸಲು ಸಿದ್ಧವಾಗಬೇಕು ಅನ್ನಿ ಹಾಗಾದ್ರೆ. ಮಂಗಳೂರು ಮಲ್ಲಿಗೆಗೆ order ಕೊಡೋಣವೋ ಮೈಸೂರು ಮಲ್ಲಿಗೆಗೋ?

Shiv said...

ಭಾಗವತರೇ,

60$ ನೀವು ಕೊಟ್ಟಿದೀರಾ ಅಂದ್ರೆ ಹೇಗೆ ಬೋಳಿಸಿರಬಹುದು ಅನ್ನುವ ಕುತೂಹಲ ಕಾಡ್ತಿದೆ. ನೀವು ಯಾಕೇ ಆ ಹೇರ್ ಕಟ್ ನಂತರದ ಆವಾಗಿನ ನಿಮ್ಮ ಒಂದು ಭಾವಚಿತ್ರ ಪ್ರಕಟಿಸಬಾರದು!

ಇದೇ ತರ ಹೇರ್ ಕಟ್ ಕತೆ ನನ್ನ ಇಂಗ್ಲೀಷ್ ಬ್ಲಾಗ್‍ನಲ್ಲಿ ಸುಮಾರು ೧+ ವರ್ಷದ ಕೆಳಗೆ ಬರೆದಿದ್ದೆ ..ಬಿಡುವಿದ್ದಾಗ ನೋಡಿ..
http://shivhn.blogspot.com/2005/09/5-rs-to-12-hair-cut-tale.html

Vattam said...

ಟೋಪಿ ಯ ಟೊಪ್ಪಿ ಯ ? ಬೋಳ್ ಮಂಡೆ ಕಾಕ ಉಳ್ಳಾಳ ಪೋಕ ಅಂಬುದೆಂತಕೆ ?

Manjunatha Prabhu said...

3ತಿಂಗಳ ಮಟ್ಟಿಗೆ ಅಮೇರಿಕಕ್ಕೆ ಬಂದಿದಿ.. ನಿಮ್ ಕತಿ ಕೇಂಡ್ ಹೆದ್ರಿಕೆ ಆತಿತ್.. haircut ಮಾಡುದು ಬೇಡ್ದಾ ಅನ್ದ್ ಹೇಳಿ.. 60$ ಕೊಡೂಕೆ ಮರ್ಲಾ..