'ಹಂಬಕ'
ಗುರುರಾಜ್ ಚಿಕಿತ್ಸೆಗೆ ಧನಸಹಾಯದ ಮನವಿಗೆ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಸದ್ಯದ ಒಟ್ಟು ಸಂಗ್ರಹಿತ ಮೊತ್ತ - ರೂ ೪೧,೦೦೦.
ಸಾಧ್ಯವಾದರೆ ಈ ವಾರಾಂತ್ಯವೇ ಗುರುರಾಜನನ್ನು ಆಸ್ಪತ್ರೆಗೆ ದಾಖಲಿಸಲಾಗುವುದು. ನಿಮ್ಮ ಸಹಾಯಕ್ಕೆ ನಾವು ಆಭಾರಿ.
'ಹಂಬಕ' = ಮೋಸ.
ಶಾಂತಲ ಹೇಳಿದ ಹಾಗೆ ಇದರ ಮೂಲ 'humbug' ಇರಬಹುದೇನೋ ಅಂತ ನನ್ನ ಅನಿಸಿಕೆ ಕೂಡ.
ಈ ಶಬ್ದ ಉಪಯೋಗ ಆಗುವುದು ಚಿಕ್ಕಪುಟ್ಟ ಮೋಸಕ್ಕೆ. ಅದೂ, ಆಟಗಳಲ್ಲಿ ಜಾಸ್ತಿ.
'ಅಣ್ಣಯ್ಯ ಬರೀ ಹಂಬಕ. ಗೆಲ್ಲಕಂತೇಳಿ ಮೋಸ ಮಾಡ್ತ'
'ಮೊನ್ನೆ ತಮಿಳ್ನಾಡಿನವ್ರ್ ಹಂಬಕ ಮಾಡಿ ಗೆದ್ದ್ರ್'
'ಅವ ಹಂಬಕದ ಪುಟ್ಟ. ಏಗ್ಳಿಕ್ ಕಂಡ್ರೂ ಅವ್ನೆ ಗೆಲ್ಕ್'
ಬೋನಸ್ ಪ್ರಶ್ನೆಗೆ ಉತ್ರ
'ಅಡಿಗ' ಅನ್ನುವ ಪದಮೂಲದ ಮೇಲೆ 'ಅಡಿಗಳು' ಎನ್ನುವುದು ವ್ಯಾಕರಣದ ದೃಷ್ಟಿಯಿಂದ ಸರಿ. ದೇವರ ಅಡಿಗಳನ್ನು ಪೂಜಿಸುವವನೇ ಅಡಿಗ. ಹಾಗಾಗಿ ಅದರ ಬಹುವಚನ 'ಅಡಿಗಳು'.
ಇದನ್ನ ಹೇಳ್ತಾ ಇರೋದು ನಾನಲ್ಲ. ಪಾ.ವೆಂ.ಆಚಾರ್ಯ:-)) ಅವರ 'ಪದಾರ್ಥ ಚಿಂತಾಮಣಿ'ಯಲ್ಲಿ ಇದರ ಪ್ರಸ್ತಾಪ ಇದೆ. ಓದಿ ತುಂಬ ವರ್ಷ ಆಯ್ತು, ತಪ್ಪಿದ್ರೆ ಸರಿಮಾಡಿ:-)
ರೂಢಿಯಲ್ಲಿ 'ಅಡಿಗರು' ಅನ್ನುವ ಪ್ರಯೋಗ ಜಾಸ್ತಿ. 'ಅಡಿಗಳು' ಅನ್ನುವ ಪ್ರಯೋಗ ಕುಂದಾಪುರದಲ್ಲಿ ತುಂಬಾ ಕೇಳಿದ್ದೇನೆ. ಕುಂದಾಪುರದ ಹೊರಗೆಲ್ಲ 'ಅಡಿಗರು'.
ಇವತ್ತಿನ ಸವಾಲು:-
ಇದರ ಅರ್ಥ ಏನು - 'ಮೇನತ್ತು'?
ಬೋನಸ್ ಪ್ರಶ್ನೆ :-
ಪಾ.ವೆಂ.ಆಚಾರ್ಯರ ಕಾವ್ಯನಾಮ ಏನು?
8 comments:
ಮೇನತ್ತು = ಮೆಹನತ್ತು?
ಪಾ. ವೆಂ.ಆಚಾರ್ಯರ ಕಾವ್ಯನಾಮ ಲಾಂಗೂಲಾಚಾರ್ಯ ಅಲ್ಲವೇ?
ಮೇನಕೆಯ ನತ್ತೇ ಮೇನತ್ತು!!
ಸರಿ ತಾನೆ?
ಭಾಗವತ,
ಕುಂದಾಪುರ ಭಾಷೆಯ ಗಂಧ ಹರಡಿಕೊಂಡಿದೆ ನಿನ್ನ ಬ್ಲಾಗಲ್ಲಿ..ಮುಂದುವರಿಸು..ಪ್ರಶ್ನೆಗೆ ಉತ್ತರ ಮಾತ್ರ ಗೊತ್ತಿಲ್ಲ :(
ಮೇನತ್ತು=ಮೆಹನತ್ತು ಇರಬೇಕು.
ಎರಡನೇ ಪ್ರಶ್ನೆಗೆ ಉತ್ತರ: ಮರೆತಿದೆ.....?
ಮೇನಕೆಯ ನತ್ತನ್ನೇ ತರಲು ಹೋದವರಿಗೆ ಮತ್ತೇನು ಸಿಕ್ಕಿತು?
hi...cud u pls drop me a mail? i lost ur mail id..
ಪಾ. ವೆಂ.ಆಚಾರ್ಯರ ಕಾವ್ಯನಾಮ ಲಾಂಗೂಲಾಚಾರ್ಯ.
ಮೇನತ್ತು - ಮೆಹನತ್ತು (ಎಂದಿನಂತೆ ಗೆಸ್)
ಸುಶೃತ ಹೇಳಿರುವ "ಮೇನಕೆಯ ನತ್ತು" ಅರ್ಥವೇ ಚೆನ್ನಾಗಿದೆ. ಅದೇ ಇರಲಿ ನನಗೆ.
ಪಾ.ವೆಂ.ಆಚಾರ್ಯ ತಮ್ಮ್ ಚಿಂತಾಮಣಿಲಿ ಎಂತ ಪದಾರ್ಥ ಆದ್ರು ಮಾಡ್ಕಣ್ಲಿ, ನಿಮ್ಮನೇಲ್ ಇವತ್ತ್ ಎಂಥ ಪದಾರ್ಥ ಹೇಳಿ ?
ರಾಮ್ ಕುಮಾರ್,
ಬ್ಲಾಗಿಗೆ ಸ್ವಾಗತ. ನಿಮ್ಮ ಉತ್ತರಗಳೆರಡೂ ಸರಿ ಇದೆ.
ಸುಶ್ರುತ,
ಸಖತ್ತಾಗಿದೆ..ಮೇನಕೆಯ ನತ್ತು:-)) ನಾನು ಮೇನಕೆಯನ್ನ ನೋಡಿಲ್ಲ. ನಿಮಗೆಲ್ಲಾದ್ರೂ ಸಿಕ್ಕಿದ್ರೆ, ನಾನು ವಿಚಾರಿಸಿದೆ ಅಂತ ಹೇಳಿ:-))
ಮನಸ್ವಿನಿ,
ನೀನು ಪರೀಕ್ಷೆಯಿಂದ ಡಿಬಾರ್. ಅಷ್ಟು ಚಂದ ಮಾಡಿ ರಾಮ್ ಕುಮಾರ್ ಉತ್ತರ ಬರೆದಿದ್ದಾರೆ, ಅದನ್ನ copy + paste ಮಾಡಕೂ ಗೊತ್ತಾಗಲ್ವ? ನೀನು I.T.ನಲ್ಲಿ ಕೆಲ್ಸ ಮಾಡಲ್ವ?:-)
ಸುಪ್ತದೀಪ್ತಿ,
ಪಾ.ವೆಂ.ಆಚಾರ್ಯರ ಕಾವ್ಯನಾಮ 'ಮರೆತಿದೆ' ಅಲ್ಲ. 'ಮರೆತಿದೆ' ಯಾರ ಕಾವ್ಯನಾಮವೋ ಗೊತ್ತಿಲ್ಲ:-))
ಶ್ರಿಲತಾ,
ತಥಾಸ್ತು. ನಿಮ್ಮ ಬಿನ್ನಹವನ್ನು ಮನ್ನಿಸಲಾಗಿದೆ:-))
ತುಳಸಿಯಮ್ಮ,
ನೀವು ನಕಲು ಹೊಡೆದಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ. ನಿಮ್ಮ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು:-))
ಅಂದಹಾಗೆ, ಮೇನಕೆಯ ನತ್ತು ಹೇಗಿದೆ?-)
ಶಾಂತಲ,
ತಪ್ಪು ವ್ಯಕ್ತಿಗೆ ತಪ್ಪು ಪ್ರಶ್ನೆ ಕೇಳಿದ್ದೀರಿ. ಬಡಪಾಯಿ ಬ್ರಹ್ಮಚಾರಿಗಳಿಗೆ ಇರಿಸುಮುರಿಸು ಉಂಟುಮಾಡುವ ಪ್ರಶ್ನೆ ಅದು:-))
ನಿಮ್ಮನೆಗೆ ಎಂತ ಪದಾರ್ಥ ಇವತ್ತ್? ತಂಬ್ಳಿಯಾ? ಗೊಜ್ಜಾ? ಬಸಲೆ ಸೊಪ್ಪಿನ ಸಾರಾ, ಅಥ್ವ ಬಂಗುಡೆ ಮೀನಿನ ಹುಳಿಯಾ?:-)
Post a Comment