ಸೊಲಗೆ
'ಸೊಲಗೆ'
ಸೊಲಗೆ = ೫೦ ಮಿ.ಲಿ.
೪ ಸೊಲಗೆಗೆ ಒಂದು ಸಿದ್ದಿ (ಸಿದ್ದೆ). ೫ ಸಿದ್ದಿಗೆ ಒಂದು ಲೀಟರ್.
ಹಾಲಿನ ಡೈರಿ, ಪ್ಯಾಕೆಟ್ ಹಾಲು ಬರುವ ಮುಂಚೆ ಹಾಲಿನ ಲೆಕ್ಕಾಚಾರವೆಲ್ಲ ಸಿದ್ದಿ, ಸೊಲಗೆಗಳ ಲೆಕ್ಕದಲ್ಲಿ.
"ಶೆಟ್ಟರ ಮನೆಗೆ ೪ ಸಿದ್ದಿ ಹಾಲು ಕೊಡ್ಕ್".
"ಮೊನ್ನೆ ಅಮಾವಾಸ್ಯೆಯಿಂದ ಹಾಲ್ ಕೊಡುಕೆ ಶುರು ಮಾಡದ್ದ್. ದಿನಕ್ಕೆ ೩ ಸಿದ್ದಿ ಹಾಲ್. ಸಿದ್ದಿಗೆ ೨ ರೂಪಾಯಿಯಾದ್ರೆ, ಒಟ್ಟ್ ಎಷ್ಟಾಯ್ತ್?".
"ಮಗ ಬಯಿಂದ (ಬಂದಿದ್ದಾನೆ). ಎರಡ್ ಸೊಲಗೆ ಹಾಲ್ ಹೆಚ್ಚು ಕೊಡುವಲೆ (ಕೊಡು)".
'ಸೊಲಗೆ' ದ್ರವಗಳ ಮಾಪನದ ಕನಿಷ್ಠ ಮಿತಿಯಾಗಿಯೂ ಉಪಯೋಗ ಆಗತ್ತೆ.
"ಅಷ್ಟೆಲ್ಲ ಬ್ಯಾಡ. ಒಂದ್ ಸೊಲಗೆ ಅಷ್ಟೆಯ"
ಧಾನ್ಯಗಳ ಮಾಪನದಲ್ಲಿ ಹೆಚ್ಚಾಗಿ ಉಪಯೋಗ ಆಗುವುದು "ಪಾವು", "ಸೇರು", "ಕಳ್ಸಿಗೆ", "ಮಾನಿಗೆ", "ಮುಡಿ".
೪ ಪಾವು = ಒಂದು ಸೇರು.
೧೪ ಸೇರು = ಒಂದು ಕಳ್ಸಿಗೆ
೪೨ ಸೇರು = ೩ ಕಳ್ಸಿಗೆ = ಒಂದು ಮಾನಿಗೆ = ಇದು ಸರಿಸುಮಾರು ೪೦ ಕೆ.ಜಿ. ಅಂತೆ.
ಒಂದು ಮುಡಿಗೆ ಎಷ್ಟು ಸೇರು? ೪೮?
"ನಾಕ್ (೪) ಸೇರ್ ಭತ್ತ ಕೊಡ್".
"ಎಷ್ಟ್ ಮಾನಿಗೆ ಭತ್ತ ಬೆಳಿತ್ರಿ?".
"ಅದ್ ನಾಕ್ ಮುಡಿ ಗದ್ದೆ".
ಈ ಪರಿಮಾಣಗಳೆಲ್ಲ ಒಂದು ಪ್ರದೇಶದಿಂದ ಒಂದು ಪ್ರದೇಶದಿಂದ ಬೇರೆ ಬೇರೆ ಆಗಿರತ್ತೆ. ಪೂರಕ ಓದಿಗೆ ಕನ್ನಡಪ್ರಭದ ಲೇಖನ - ಓದಿ. ಈ ಲೇಖನದ ಪ್ರಕಾರ ೪ ಸಿದ್ದೆಗೆ ಒಂದು ಪಾವು. ಆದ್ರೆ ನಮ್ಮಲ್ಲಿ ಸಿದ್ದೆ ಉಪಯೋಗಿಸುವುದು ದ್ರವಗಳಿಗೆ ಮಾತ್ರ, ಧಾನ್ಯಗಳಿಗಲ್ಲ. " ೪ ಸಿದ್ದೆ ಹಾಲು", " ೪ ಸೇರ್ ಭತ್ತ".
ಕುಂದಗನ್ನಡ ಪಂಡಿತರಿದ್ದರೆ ತಿದ್ದಿ. ಬಾಲ ಬೇಕಿದ್ರೆ ಜೋಡ್ಸಿ:-)) ನಮ್ಮ reviewers ಮತ್ತೆ inspector ಇನ್ನೂ ಕಾಣೆಯಾಗಿದ್ದಾರೆ:-((
ಬೋನಸ್ ಪ್ರಶ್ನೆಗೆ ಉತ್ರ:- ಕರ್ನಾಟಕ ಏಕೀಕರಣದಲ್ಲಿ ಬಹುವಾಗಿ ಶ್ರಮಿಸಿದ ಕೋ.ಶಿವರಾಮ ಕಾರಂತರ ಸಹೋದರ - ರಾಮಕೃಷ್ಣ ಕಾರಂತ.
ನಾನೋದಿದ 'ಕರ್ನಾಟಕ ಏಕೀಕರಣ" ಕುರಿತಾದ ಒಂದೆರಡು ಪುಸ್ತಕಗಳಲ್ಲಿ ಓದಿದ್ದೆ. ಮತ್ತೆ ವೈದೇಹಿಯವರ ಬಳಿ ಕೇಳಿ ತಿಳಿದದ್ದು. ಹೆಚ್ಚು ಮಾಹಿತಿ ನನ್ನ ಹತ್ರ ಇಲ್ಲ. ಬಲ್ಲವರು ತಿಳಿಸುವಂತವರಾಗಿ:-)
ಇವತ್ತಿನ ಸವಾಲು :
ಇದರ ಅರ್ಥ ಏನು - 'ತಟ್ಕ್'?
ಬೋನಸ್ ಪ್ರಶ್ನೆ :
'ತಟ್ಕ್' ಪದದ ಸಂವಾದಿ ಹವ್ಯಗನ್ನಡದ ಪದ ಯಾವುದು?
ಬಾಲಂಗೋಚಿ :
"ರಾಮ (ತೆಂಗಿನ) ಕಾಯಿ ಕೊಯ್ಯುಕೆ ಬಯಿಂದ. ನಾನ್ ಇನ್ನೊಂದೆರಡ್ ಕೆಲ್ಸ ಹಮ್ಸಕಂಡಿದ್ದೆ. ನೀನ್ ಎಲ್ಲ ಬಿಟ್ಟ್ ಇಷ್ಟೊತ್ತಿಗೆ ಸೊಲಗೆ, ಸಿದ್ದೆ..ಅನ್ಕಂಡ್ ಫೋನ ಮಾಡ್ರೆ? ಪುರ್ಸೊತ್ತಿದ್ದಾಗ್ಳಿಕೆ ಫೋನ್ ಮಾಡ್, ಆಗ್ದಾ (ಆಗೊಲ್ಲವೆ)?" ಅಂತ ಅಮ್ಮ ಫೋನ್ ಇಟ್ಟಿದ್ದರಿಂದ ಈ ಅಧ್ಯಾಯ ಇಲ್ಲಿಗೆ ಪರಿಸಮಾಪ್ತಿಯಾಗುತ್ತಿದೆ. ಮಂಗಳಂ:-))
11 comments:
'ತಟ್ಕ್' ಅಂದ್ರೆ ಸ್ವಲ್ಪ ಅಥವ ಚೂರು.
ನಾ reviewer ಆಗೂಕಾತ್ತಿಲ್ಲ. ನಾ ಎಂತದಿದ್ದ್ರು, ಶಿಷ್ಯೆ.
ನಂಗ್ ಹೆಚ್ಚ್ಗೆ ಅಂಕ ತಕ್ಕಂಕಷ್ಟೆ.
ಆಯ್ತ್. ನೀವ್ ಶಿಷ್ಯೆ...ನನ್ನ ಗುರುದಕ್ಷಿಣೆ ಎಲ್ಲಿ?:-))
it means , 'a drop' if referring to liquids. Otherwise means ' a bit , very little ' also ..right ? How much I score sir ?
"ತಟ್ಕ್" ಇನ್ನೊಂದು ಉಪಯೋಗ = ಹೊಡಿ,ಬಡಿ..??
"ಬ್ಯಾಡದಿದ್ದ ಅಧಿಕ (ಪ್ರಸಂಗ) ಎಂತಕೆ ನಿಂಗೆ,ತಟ್ಕಾ ಎರ್ಡು ಕೆನ್ನಿ ಮೇಲೆ"
ಸಂತು ಸರಿಯಾದ್ ಉತ್ತ್ರ ಕೊಟ್ಟ್ರ್, ಹಹ್ಹಾ, ಮಂಡೆಗ್ ಹೋಳಿಲೆ ಇಲ್ಯೆ, ತಟ್ಕ್ ಅಂದ್ರ ಬಡ್ಗಣಿ ಸ ಆತಲ್ದಾ, ದಕ್ಷಿಣೆಯಾ, tangible ಅಥ್ವ intangible ಆ
ಭಾಗವತರ ಕುಂದಾಪುರಗನ್ನಡ ತರಗತಿ ಮತ್ತೆ ಶುರು..
ಅಮ್ಮನಿಗೆ ಪೋನ್‍ನಲ್ಲಿ ತಲೆ ತಿಂದು ನಮಗೆ ಕುಂದಾಪುರಗನ್ನಡ ಓದಿಸುತ್ತಿರುವ ಜ.ಭಾ ರಿಗೆ ಧನ್ಯವಾದಗಳು
ಶಾಂತಲ,
ನಿಮ್ಮ ಉತ್ರ ಸರಿ ಇತ್ತ್. 'ಬಡ್ಗಣಿ' ಶಬ್ದ ಕೇಣ್ದೆ ಮಸ್ತ್ ದಿನ ಆಯಿತ್ತ್:-)) ಮನೆಲಿದ್ದಾಗ್ಳಿಕೆ ದಿನಾ ಎಂತಾರೂ ಕುಮ್ಮಣ್ಣ್ ಮಂತ್ರಿ ಕೆಲ್ಸ ಮಾಡಿ ಬಡ್ಗಣಿ ತಿಂದಿದ್ದೆ:-))
ದಕ್ಷಿಣೆ..ನಂಗೆ ದುಡ್ಡ್ ಮಸ್ತ್ ಖುಶಿ. ೧೦೦೦ ಡಾಲರ್ ಕಳ್ಸಿ ಸಾಕ್:-) ಮತ್ತೆ, ನಂಗೆ ತಿಂಬ್ದಂದ್ರೂ ಖುಶಿ. ಉದ್ದಿನ್ ದೋಸೆ, ಪತ್ರೊಡೆ, ಹಲಸಿನ ಹಣ್ಣಿನ ಕಡ್ಬು....ಎಲ್ಲ ಕೊಡ್ಸಿ:-)
Reborn,
ನಿಮ್ಮ್ ಉತ್ರ ಸರಿ ಇತ್ತ್. ಅಂತೂ ಇಂತೂ ಒಂದ್ ಸರ್ತಿ ಸರಿ ಉತ್ರ ಕೊಟ್ರಿ:-)
ಸಂತು,
ನಂಗೆ ಈ ಅರ್ಥ ಮಂಡೆಗೆ ಹೊಳ್ದಿರ್ಲಿಲ್ಲ. ಆ ಅರ್ಥನೂ ಆತ್ತ್.
ಶಿವು,
ಕೃತಜ್ಞತೆಗಳು.
No more classes ?? eega rajeyaa??
ಹೌದು ಅನ್ಸ್ತಿದೆ Reborn, ಪತ್ತನಾಜೆ ಮುಗೀತಲ್ಲ, ಭಾಗವತರು ರಜೆ ತಗೊಂಡಿರ್ಬೇಕು.... ಪಾಪ ಎಲ್ಲರ ಕಾಲೆಳೆದೂ ಎಳೆದೂ ಸುಸ್ತಾಗಿರ್ಬೇಕು, ರೆಸ್ಟ್ ತಗೊಳ್ಲಿ ಪಾಪ... :)
ಭಾಗ್ವತ್ರ್ ಅಂಗ್ಳದಾಗ್ ಪಂಚೆತ್ಗೆ ಮಾಡ್ತ ನಿಂತ್ಕಂಡ್ ಸುನೈನಿಗ್ ಕಾಂಬುಕ್ ಹೋಯ್ರ್. ಸಮ ಹಲ್ಸಿನ್ ಕಡ್ಬ್ ಹೊಡ್ಕಂಡ್ ಬರ್ತ್ರ್, ಚೂರ್ ಕಾಯ್ಕಷ್ಟೆ.
ಈ ಬ್ಲಾಗ್ ತುಂಬಾ ಚೆನ್ನಾಗಿ ಬರ್ತಾ ಇದೆ. ನಾನು ನೋಡಿಯೇ ಇರಲಿಲ್ಲ. ಎಷ್ಟೊಂದು ಮಿಸ್ ಮಾಡಿಕೊಂಡು ಬಿಟ್ಟಿದ್ದೇನೆ. ಕೆಲವು ದಿನಗಳ ಹಿಂದೆ. ಡಿ.ಎಲ್.ಐನಲ್ಲಿ ಕುಂದಗನ್ನಡ ಅಂತ ಒಂದು ಪುಸ್ತಕ ಸಿಕ್ಕಿತ್ತು. ಅದರ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.
http://sampada.net/blog/sunil_jayaprakash/15/07/2007/4972
Post a Comment